ಜಾಕ್ವೆಲಿನ್ ಸುಕೇಶ್ ಸಂಬಂಧದ ಸತ್ಯ ಬಹಿರಂಗ: ಇಬ್ಬರ ಮದುವೆಗೆ ನಡೆದಿತ್ತು ತಯಾರಿ!

ಮುಂಬೈ ಸೆಪ್ಟೆಂಬರ್ 17: ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕಳೆದ ಕೆಲ ದಿನಗಳಿಂದ ಜನರಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ವಾಸ್ತವವಾಗಿ, ಆಕೆಯ ಹೆಸರು ಸುಕೇಶ್ ಚಂದ್ರಶೇಖರ್ ಅವರೊಂದಿಗೆ ತಳುಕು ಹಾಕಿಕೊಂಡಿದೆ. ಇಡಿ ಜಾಕ್ವೆಲಿನ್ ಅವರನ್ನು ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಈ ನಡುವೆ ಜಾಕ್ವೆಲಿನ್ ಮತ್ತು ಸುಕೇಶ್ ಬಗ್ಗೆ ಹಲವು ವಿಷಯಗಳು ಮುನ್ನೆಲೆಗೆ ಬಂದಿವೆ. ಇತ್ತೀಚೆಗೆ ಇಡಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರನ್ನು ಗಂಟೆಗಳ ಕಾಲ ವಿಚಾರಣೆ ನಡೆಸಿರುವುದು ಗೊತ್ತಿರುವ ವಿಚಾರ.

ಇದರಿಂದಾಗಿ ಸುಖೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಅವರ ಸಂಬಂಧದ ಆರೋಪವು ಸಾಕಷ್ಟು ತೊಂದರೆಯಲ್ಲಿ ಸಿಲುಕಿಕೊಂಡಿದೆಯಂತೆ. ಮಾಹಿತಿ ಪ್ರಕಾರ, 215 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಇಡಿ ಚಾರ್ಜ್ ಶೀಟ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ, ವಿಚಾರಣೆ ವೇಳೆ ಜಾಕ್ವೆಲಿನ್ ಮತ್ತು ನೋರಾ ಇಬ್ಬರೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂಬುದು ತಿಳಿದುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಜಾಕ್ವೆಲಿನ್ ಸುಕೇಶ್ ಅವರನ್ನು ಮದುವೆಯಾಗಲು ಯೋಜಿಸಿದ್ದರಂತೆ.

ಸುಕೇಶ್ ಮದುವೆಯಾಗಲು ಬಯಸಿದ್ದ ಜಾಕ್ವೆಲಿನ್

ಸುಕೇಶ್ ಮದುವೆಯಾಗಲು ಬಯಸಿದ್ದ ಜಾಕ್ವೆಲಿನ್

ಮಾಧ್ಯಮ ವರದಿಗಳ ಪ್ರಕಾರ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ನಡುವೆ ಉತ್ತಮ ಸಂಬಂಧವಿತ್ತು. ಜಾಕ್ವೆಲಿನ್ ಸುಕೇಶ್ ವಿಚಾರಗಳು ತಿಳಿದೂ ತುಂಬಾ ಸಂತೋಷಪಟ್ಟಿದ್ದರು. ಅವನ ಅಪರಾಧಗಳು ಬಹಿರಂಗವಾದ ನಂತರವೂ ಅವಳು ಅವನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಮಾತ್ರವಲ್ಲದೆ ಜಾಕ್ವೆಲಿನ್ ಸುಕೇಶ್ ಅವರನ್ನು ಮದುವೆಯಾಗಲು ಬಯಸಿದ್ದರಂತೆ. ANI ಜೊತೆ ಮಾತನಾಡಿದ ವಿಶೇಷ ಪೊಲೀಸ್ ಕಮಿಷನರ್, EOW, ರವೀಂದರ್ ಯಾದವ್, 'ಜಾಕ್ವೆಲಿನ್ ಫರ್ನಾಂಡೀಸ್ ಅವರು ಸುಕೇಶ್ ಅವರ ಅಪರಾಧ ಇತಿಹಾಸವನ್ನು ತಿಳಿದ ನಂತರವೂ ಸಂಬಂಧವನ್ನು ಮುಂದುವರೆಸಿದ್ದರು. ಇದರಿಂದಾಗಿ ಅವರು ಈಗ ಹೆಚ್ಚು ತೊಂದರೆಯಲ್ಲಿದ್ದಾರೆ. ಆದರೆ, ನೋರಾ ಫತೇಹಿ ಸುಕೇಶನ ಸತ್ಯವನ್ನು ತಿಳಿದಾಗ ತಕ್ಷಣ ಅವನಿಂದ ದೂರವಾದಳು' ಎಂದಿದ್ದಾರೆ.

ಸುಕೇಶ್ ಹಗರಣ ತಿಳಿದ ಬಳಿಕ ಸಂಬಂಧ ಕಳೆದುಕೊಂಡ ಫತೇಹಿ

ಸುಕೇಶ್ ಹಗರಣ ತಿಳಿದ ಬಳಿಕ ಸಂಬಂಧ ಕಳೆದುಕೊಂಡ ಫತೇಹಿ

ಎಎನ್‌ಐ ವರದಿಯ ಪ್ರಕಾರ, ಜಾಕ್ವೆಲಿನ್ ಫರ್ನಾಂಡೀಸ್ ಅವರ ಮ್ಯಾನೇಜರ್ ಪ್ರಶಾಂತ್ ಅವರ ಮನೆಯಿಂದ ಇಡಿ ಡುಕಾಟಿ ಸೂಪರ್ ಬೈಕ್ ಅನ್ನು ವಶಪಡಿಸಿಕೊಂಡಿದೆ. ಇದರ ಬೆಲೆ ಸುಮಾರು 8 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಜಾಕ್ವೆಲಿನ್ ಮ್ಯಾನೇಜರ್ ಪ್ರಶಾಂತ್ ಅವರಿಗೆ ಸುಕೇಶ್ ಚಂದ್ರಶೇಖರ್ ಬೈಕ್ ಉಡುಗೊರೆಯಾಗಿ ನೀಡಿದ್ದರು ಎಂದು ಇಒಡಬ್ಲ್ಯು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಇನ್ನೂ ನೋರಾ ಫತೇಹಿ ಅವರು ಸುಕೇಶ್ ಚಂದ್ರಶೇಖರ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ. ಆದರೂ ಅವರು ಸುಕೇಶ್ ಅವರೊಂದಿಗೆ ವಾಟ್ಸಾಪ್ನಲ್ಲಿ ಎರಡು ಬಾರಿ ಮಾತನಾಡಿದ್ದರು. ಈ ಸಂಬಂಧ ನೋರಾ ಅವರ ಸೋದರ ಮಾವ ಮೆಹಬೂಬ್ ಅಕಾ ಬಾಬಿ ಖಾನ್ ಮತ್ತು ಪಿಂಕಿ ಇರಾನಿ ಅವರನ್ನು ಎನ್‌ಫೋರ್ಸ್‌ಮೆಂಟ್ ಆಫೀಸ್ ವಿಂಗ್ ಪ್ರಶ್ನಿಸಿದೆ. ಇಡಿ ಪ್ರಕಾರ, ಸುಕೇಶ್ ಚಂದ್ರಶೇಖರ್ ಅವರ ಸೂಚನೆಯ ಮೇರೆಗೆ ಪಿಂಕಿ ಇರಾನಿ ಅವರು ಜಾಕ್ವೆಲಿನ್ ಮತ್ತು ನೋರಾ ಫತೇಹಿ ಅವರನ್ನು ದುಬಾರಿ ಉಡುಗೊರೆಗಳೊಂದಿಗೆ ಭೇಟಿಯಾಗಿದ್ದರು. ಹೀಗಾಗಿ ನೋರಾ ಫತೇಹಿ ಪ್ರಕರಣದಿಂದ ಸೇಫ್ ಆಗಿದ್ದಾರೆ ಎನ್ನಲಾಗುತ್ತಿದೆ.

ತಿಹಾರ್ ಜೈಲಿಗೆ ಭೇಟಿ ನೀಡಿದ್ದ ಬಾಲಿವುಡ್‌ನ 4 ನಟಿಯರು

ತಿಹಾರ್ ಜೈಲಿಗೆ ಭೇಟಿ ನೀಡಿದ್ದ ಬಾಲಿವುಡ್‌ನ 4 ನಟಿಯರು

ಇಂಡಿಯಾ ಟುಡೇ ಸುದ್ದಿ ಪ್ರಕಾರ, ಸುಕೇಶ್‌ನನ್ನು ಭೇಟಿ ಮಾಡಲು ತಿಹಾರ್ ಜೈಲಿಗೆ ಭೇಟಿ ನೀಡಿದವರು- 'ಬಿಗ್ ಬಾಸ್' ಖ್ಯಾತಿಯ ನಿಕ್ಕಿ ತಾಂಬೋಲಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್ ಮತ್ತು ಅರುಷಾ ಪಾಟೀಲ್ ಹೆಸರುಗಳು ಗ್ಲಾಮರ್ ಲೋಕದ ನಾಲ್ವರು ನಟಿಯರು. ನಾಲ್ವರೂ ಜೈಲಿನಲ್ಲಿ ಸುಕೇಶ್ ಅವರನ್ನು ಭೇಟಿ ಮಾಡಿದ್ದರು. ಸುಕೇಶ್ ಅವರ ಸಹಾಯಕಿ ಪಿಂಕಿ ಇರಾನಿ ಅವರ ಸಹಾಯದಿಂದ ಈ ನಾಲ್ವರು ನಟಿಯರು ಸುಕೇಶ್ ಅವರನ್ನು ಭೇಟಿ ಮಾಡಲು ತಿಹಾರ್ ಜೈಲು ತಲುಪಲು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ. ಮಾಹಿತಿ ಪ್ರಕಾರ ಪಿಂಕಿ ಇರಾನಿ ಈ ನಟಿಯರಿಗೆ ಬೇರೆ ಬೇರೆ ಹೆಸರುಗಳಲ್ಲಿ ಸುಕೇಶ್ ನನ್ನು ಪರಿಚಯಿಸಿದ್ದಳು ಎನ್ನಲಾಗಿದೆ.

ನಿಕ್ಕಿ ತಾಂಬೋಳಿ ಹೇಳಿದ್ದೇನು?

ನಿಕ್ಕಿ ತಾಂಬೋಳಿ ಹೇಳಿದ್ದೇನು?

ಮಾಧ್ಯಮ ವರದಿಗಳ ಪ್ರಕಾರ, ನಿಕ್ಕಿ ತಾಂಬೋಲಿ ಇಡಿಗೆ ನೀಡಿದ ಹೇಳಿಕೆಯಲ್ಲಿ, ಪಿಂಕಿ ಇರಾನಿ ಅವರನ್ನು ಆರೋಪಿ ಸುಕೇಶ್ ಚಂದ್ರಶೇಖರ್‌ಗೆ ಪರಿಚಯಿಸಿದ್ದರು ಎಂದು ಹೇಳಿದ್ದಾರೆ. ಆದರೆ ಸುಕೇಶ್ ಹೆಸರು ಶೇಖರ್ ಎಂದು ಹೇಳಿ ಭೇಟಿ ಮಾಡಿಸಲಾಗಿತ್ತು. ಸುಕೇಶ್ ತನ್ನ ಸ್ನೇಹಿತ ಮತ್ತು ದಕ್ಷಿಣ ಚಲನಚಿತ್ರಗಳ ಖ್ಯಾತ ನಿರ್ಮಾಪಕ ಎಂದು ನಿಕ್ಕಿಗೆ ಪಿಂಕಿ ಹೇಳಿದ್ದರಂತೆ. ಒಟ್ಟಿನಲ್ಲಿ ಸುಕೇಶ್ ಚಂದ್ರಶೇಖರ್ ಪ್ರಕರಣ ದಿನಕಳೆದಂತೆ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+