ರಾಹುಲ್ ಬಲಿಷ್ಠರಾಗಬೇಕಾದರೆ ಮದುವೆಯಾಗಬೇಕು: ರಾಮದಾಸ್ ಅಥಾವಳೆ
Recommended Video
ಮುಂಬೈ, ಜೂನ್ 16: ಸೋತು ಹೈರಾಣವಾಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ರಿಪಬ್ಲಿಕನ್ ಪಾರ್ಟಿ ಮುಖಂಡ, ಕೇಂದ್ರ ಸಚಿವರೊಬ್ಬರು ಪುಕ್ಸಟೆ ಸಲಹೆಯನ್ನು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದ ರಾಮದಾಸ್ ಅಥಾವಳೆ, ಮದುವೆಯಾದರೆ ಎಲ್ಲರಿಗೂ ಇನ್ನೂ ಹೆಚ್ಚಿನ ಜವಾಬ್ದಾರಿ ಬರುವುದು ಸಹಜ. ಅದರಂತೆಯೇ, ರಾಹುಲ್ ಗಾಂಧಿಗೂ ಇದೇ ಸಲಹೆಯನ್ನು ನೀಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಬಲಿಷ್ಠಗೊಳ್ಳಲು ನಿಮ್ಮ ಸಲಹೆ ಏನು ಎನ್ನುವ ಮಾಧ್ಯಮವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅಥಾವಳೆ, ರಾಹುಲ್ ಗಾಂಧಿಗೆ ಈಗ 48ವರ್ಷ, ಅವರು ಮದುವೆಯಾದರೆ ಇನ್ನಷ್ಟು ಬಲಿಷ್ಠರಾಗುತ್ತಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ನನ್ನ ಮಿತ್ರ ಕೂಡಾ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಅವರಿಂದ ಆಗಬೇಕಿದ್ದರೆ, ಅವರು ಮದುವೆಯಾಗುವುದು ಸೂಕ್ತ ಎಂದು ಅಥಾವಳೆ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಮತ್ತು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲುಂಡರೆ, ವಯನಾಡ್ ನಲ್ಲಿ ಭಾರೀ ಅಂತರದಿಂದ ರಾಹುಲ್ ಗೆಲುವು ಸಾಧಿಸಿದ್ದರು.
ಒಟ್ಟಾರೆಯಾಗಿ, ಕಾಂಗ್ರೆಸ್ 52ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಹಿಂದೆ ಹಲವು ಬಾರಿ ಮದುವೆಯ ವಿಷಯ ಬಂದಾಗ, ನಾನು ಪಕ್ಷವನ್ನೇ ಮದುವೆಯಾಗಿದ್ದೇನೆಂದು ರಾಹುಲ್ ಗಾಂಧಿ ಹೇಳಿದ್ದರು.












Click it and Unblock the Notifications