ಥಾಣೆ: ವ್ಯಕ್ತಿಗೆ ಕೊರೊನಾ ಲಸಿಕೆ ಬದಲು ರೇಬಿಸ್ ಲಸಿಕೆ ನೀಡಿದ ನರ್ಸ್ ಅಮಾನತು
ಥಾಣೆ, ಸೆಪ್ಟೆಂಬರ್ 29: ಕೊರೊನಾ ಲಸಿಕೆ ಬದಲು ವ್ಯಕ್ತಿಗೆ ರೇಬಿಸ್ ಲಸಿಕೆ ನೀಡಿರುವ ಘಟನೆ ಥಾಣೆಯಲ್ಲಿ ನಡೆದಿದೆ. ರೇಬಿಸ್ ಲಸಿಕೆ ನೀಡಿದ್ದ ನರ್ಸ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಆರೋಗ್ಯ ಕೇಂದ್ರಕ್ಕೆ ಕೊರೊನಾ ಲಸಿಕೆ ಪಡೆಯಲೆಂದು ಬಂದಿದ್ದ ವ್ಯಕ್ತಿಗೆ ನರ್ಸ್ ರೇಬಿಸ್ ಲಸಿಕೆಯನ್ನು ನೀಡಿದ್ದರು. ಈ ಘಟನೆಯು ಸೋಮವಾರ ಆಟ್ಕೊನೇಶ್ವರ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ರಾಜ್‌ಕುಮಾರ್ ಯಾದವ್ ಎಂಬುವವರು ಕೋವಿಶೀಲ್ಡ್ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಕ್ಕೆ ಧಾವಿಸಿದ್ದರು. ಆದರೆ ಎವಿಆರ್ ಲಸಿಕೆಯನ್ನು ನೀಡಲಾಗಿದೆ.
ಘಟನೆ ಬೆಳಕಿಗೆ ಬಂದ ಬಳಿಕ ಯಾದವ್ ಅವರನ್ನು ನಿಗಾದಲ್ಲಿ ಇರಿಸಲಾಗಿತ್ತು. ನರ್ಸ್ ಕೀರ್ತಿಯವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕೇಸ್ ಪೇಪರ್ ನೋಡಬೇಕಿತ್ತು, ಇದು ನರ್ಸ್‌ನಿಂದಲೇ ಆಗಿರುವ ತಪ್ಪಾಗಿದೆ. ಆಕೆಯ ನಿರ್ಲಕ್ಷಯದಿಂದ ರೋಗಿಯ ಪ್ರಾಣ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು ಎಂದು ಥಾಣೆ ಪಾಲಿಕೆ ತಿಳಿಸಿದೆ.
ಕೊರೊನಾ 3ನೇ ಅಲೆ ಭೀತಿ ನಡುವೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 18 ಸಾವಿರದ 795 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 179 ಮಂದಿ ಮೃತಪಟ್ಟಿದ್ದಾರೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿಯ 36 ಲಕ್ಷದ 97 ಸಾವಿರದ 581ಕ್ಕೆ ತಲುಪಿದ್ದು, 4 ಲಕ್ಷದ 47 ಸಾವಿರದ 373 ಮಂದಿ ಇದುವರೆಗೆ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ
ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ ದೇಶದಲ್ಲಿ 2ಲಕ್ಷದ 92 ಸಾವಿರದ 206ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 18 ಸಾವಿರದ 795ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,29,58,002ಕ್ಕೆ ತಲುಪಿದೆ.
ಇನ್ನು ಭಾರತದಲ್ಲಿ ಒಂದೇ 13,21,780 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಇದುವರೆಗೆ 56,57,30,031 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 87.07 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ನಿನ್ನೆ ಒಂದೇ ದಿನ 1 ಕೋಟಿಗೂ ಅಧಿಕ ಲಸಿಕೆ ಡೋಸ್ ಗಳನ್ನು ವಿತರಿಸಲಾಗಿದೆ.
ಇದುವರೆಗೆ 84.70 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ ಮತ್ತು 42.83 ಲಕ್ಷ ಡೋಸ್‌ಗಳು (42,83,200) ನೀಡಿಕೆ ಹಂತದಲ್ಲಿದೆ. 4.75 ಕೋಟಿಗೂ ಹೆಚ್ಚು ಬಾಕಿ ಮತ್ತು ಬಳಕೆಯಾಗದ ಲಸಿಕೆ ಪ್ರಮಾಣಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಅಂಕಿಅಂಶ ತಿಳಿಸಿದೆ.












Click it and Unblock the Notifications