Get Updates
Get notified of breaking news, exclusive insights, and must-see stories!

ಚೆನ್ನೈ- ಬೆಂಗಳೂರ್ ಬುಲೆಟ್ ಟ್ರೈನ್ ಸೇರಿ 10 ಹೊಸ ರೈಲು?

ಮುಂಬೈ, ಫೆಬ್ರವರಿ 24: ಅಹಮದಾಬಾದ್ ಮತ್ತು ಮುಂಬೈ ನಡುವೆ ಬುಲೆಟ್ ರೈಲು ಮಾರ್ಗದ ಕಾರ್ಯ ಆರಂಭವಾಗಿದ್ದು, ಇದರ ಮುಂದುವರೆದ ಭಾಗವಾಗಿ ದೇಶದಲ್ಲಿ 10 ಬುಲೆಟ್ ರೈಲು ಮಾರ್ಗಗಳನ್ನು ರೈಲ್ವೆ ಇಲಾಖೆ ಅಂತಿಮಗೊಳಿಸಿದೆ. ಒಟ್ಟಾರೆ, 6,000 ಕಿ.ಮೀ ಉದ್ದದ 10 ಬುಲೆಟ್ ಟ್ರೈನ್ ಕಾರಿಡಾರ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮೈಸೂರು - ಬೆಂಗಳೂರು - ಚೆನ್ನೈ ಮಾರ್ಗ ಸೇರಿದಂತೆ 10 ಬುಲೆಟ್ ರೈಲು ಮಾರ್ಗಗಳ ಕಾರ್ಯ ವೆಚ್ಚ ಮತ್ತು ಯೋಜನಾ ವರದಿ ತಯಾರಿಕೆಗೆ ಅನುಮತಿ ನೀಡುವಂತೆ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಒಟ್ಟಾರೆ ಈ ಯೋಜನೆಗೆ 10 ಲಕ್ಷ ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ಚೆನ್ನೈ - ಬೆಂಗಳೂರು - ಮೈಸೂರು, ದೆಹಲಿ -ಮುಂಬೈ, ದೆಹಲಿ -ಕೋಲ್ಕತ್ತಾ, ದೆಹಲಿ - ಅಮೃತಸರ, ಪಾಟ್ನಾ - ಕೊಲ್ಕತ್ತಾ ನಡುವೆ ಬುಲೆಟ್ ರೈಲು ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಇದಲ್ಲದೆ, 5 ಲಕ್ಷ ಕೋಟಿ ರು ವೆಚ್ಚದಲ್ಲಿ ರೈಲ್ವೆ ಜಾಲವನ್ನು ಹಾಲಿ 1.2 ಲಕ್ಷ ಕಿ.ಮೀಗೆ 17,000 ಕಿ.ಮೀ ಸೇರಿಸಲು ಯೋಜನೆ ನಡೆಸಲಾಗಿದೆ.ಅಹಮದಾಬಾದ್ ಹಾಗೂ ಮುಂಬೈ ನಡುವಿನ 507.18 ಕಿ.ಮೀ ದೂರದಲ್ಲಿ ಮುಂಬೈ, ಥಾಣೆ, ವಿರಾರ್,ಬೊಯಿಸಾರ್, ವಪಿ,ಬಿಲಿಮೋರಾ,ಸೂರತ್, ಬರೂಚ್, ವಡೋದರಾ, ಆನಂದ್, ಅಹಮದಾಬಾದ್ ಹಾಗೂ ಸಬರಮತಿ 12 ನಿಲ್ದಾಣಗಳಿವೆ.

ಹಲವು ಉದ್ಯಮಗಳಿಗೆ ನೆರವು

ಹಲವು ಉದ್ಯಮಗಳಿಗೆ ನೆರವು

ಈ ರೈಲು ಯೋಜನೆಗೆ ಭಾರೀ ಸಿಮೆಂಟ್ ಮತ್ತು ಉಕ್ಕು ಬೇಕಾಗಿದೆ. ಹೀಗಾಗಿ ಉಕ್ಕು ಮತ್ತು ಸಿಮೆಂಟ್ ಕ್ಷೇತ್ರದಲ್ಲಿ ದೊಡ್ಡಮಟ್ಟಕ್ಕೆ ಬೇಡಿಕೆ ಸೃಷ್ಟಿಯಾಗುತ್ತದೆ. ಇದಲ್ಲದೆ ಇವುಗಳನ್ನು ಸಾಗಣೆ ಮಾಡುವು ಸಾರಿಗೆ ಕ್ಷೇತ್ರದಲ್ಲೂ ವ್ಯವಹಾರ ಕುದುರುತ್ತದೆ.ಒಂದು ಅಂದಾಜಿನ ಪ್ರಕಾರ 20 ಲಕ್ಷ ಟನ್ ಸಿಮೆಂಟ್ ಮತ್ತು 15 ಲಕ್ಷ ಮೆಟ್ರಿಕ್ ಟನ್ ಉಕ್ಕು ಈ ಯೋಜನೆಗೆ ಬೇಕಾಗಿದೆ.

ಹಲವಾರು ಜನರಿಗೆ ಉದ್ಯೋಗ

ಹಲವಾರು ಜನರಿಗೆ ಉದ್ಯೋಗ

ಈ ಬುಲೆಟ್ ರೈಲಿನ ಕಾಮಗಾರಿ ವೇಳೆ 20,000 ಜನರಿಗೆ ಉದ್ಯೋಗ ಸಿಗಲಿದೆ. ಒಮ್ಮೆ ರೈಲು ಸೇವೆ ಆರಂಭಗೊಂಡ ನಂತರ 4 ಸಾವಿರ ಜನರು ರೈಲಿನ ನಿರ್ವಹಣೆ ಬೇಕಾಗಿದ್ದು ಅಷ್ಟೂ ಜನರಿಗೆ ಕೆಲಸ ಸಿಗಲಿದೆ. ಇದಲ್ಲದೆ 16,000 ಜನರಿಗೆ ಪರೋಕ್ಷ ಉದ್ಯೋಗ ಸಿಗಲಿದೆ.

ಹೊಸ ತಂತ್ರಜ್ಞಾನ ಅಳವಡಿಕೆ

ಹೊಸ ತಂತ್ರಜ್ಞಾನ ಅಳವಡಿಕೆ

ಉದ್ಯೋಗ ಸೃಷ್ಟಿ ಮಾತ್ರವಲ್ಲದೆ ಬುಲೆಟ್ ರೈಲಿನಿಂದ ಹಲವು ಕ್ಷೇತ್ರಗಳಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಭಾರತಕ್ಕೆ ಕಾಲಿಡಲಿವೆ. ಟ್ರಾಕ್ ಅಳವಡಿಕೆ, ಸಿಗ್ನಲ್ ಉಪಕರಣಗಳು, ವಿದ್ಯುತ್ ಸರಬರಾಜು, ಸಂವಹನ ತಂತ್ರಜ್ಞಾನಗಳ ಅಳವಡಿಕೆ, ವಿಶ್ವದರ್ಜೆಯ ತಂತ್ರಜ್ಞಾನಗಳ ಬಳಕೆ ಭಾರತದಲ್ಲೂ ಆರಂಭವಾಗಲಿದೆ. ಇದನ್ನು ಮುಂದೆ ಭಾರತೀಯ ರೈಲ್ವೇಯಲ್ಲೂ ಅಳವಡಿಸಿಕೊಳ್ಳಬಹುದಾಗಿದೆ.

ಸಮಯ ದೊಡ್ಡ ಮಟ್ಟಕ್ಕೆ ಉಳಿತಾಯವಾಗಲಿದೆ

ಸಮಯ ದೊಡ್ಡ ಮಟ್ಟಕ್ಕೆ ಉಳಿತಾಯವಾಗಲಿದೆ

ಬುಲೆಟ್ ರೈಲಿನಿಂದ ಸಮಯ ದೊಡ್ಡ ಮಟ್ಟಕ್ಕೆ ಉಳಿತಾಯವಾಗಲಿದೆ. ಮುಂಬೈ-ಅಹಮದಾಬಾದ್ ನಡುವಿನ ರೈಲಿನಿಂದ ಮುಂಬೈ ಮತ್ತು ಸಾಬರಮತಿ ನಡುವಿನ ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ. ಸದ್ಯ ಇದೇ ದೂರವನ್ನು ಕ್ರಮಿಸಲು ಸಾಮಾನ್ಯ ರೈಲುಗಳು 8 ಗಂಟೆಗಳನ್ನು ತೆಗೆದುಕೊಳ್ಳುತ್ತಿವೆ. ಸದ್ಯ ಈ ಮಾರ್ಗದಲ್ಲಿ 40,000 ಜನರು ಪ್ರಯಾಣಿಸುತ್ತಿದ್ದು ಇನ್ನು ಮುಂದೆ ಪ್ರತಿದಿನ 1,56,000 ಜನರು ಪ್ರಯಾಣಿಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+