ಸಂಸ್ಕೃತದಿಂದ ಮಾತನಾಡುವ ಕಂಪ್ಯೂಟರ್ ಆವಿಷ್ಕಾರ ಸಾಧ್ಯ!: ಬಿಜೆಪಿ ಸಚಿವ

ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆಯಂತೆ, ಸಂಸ್ಕೃತದಿಂದಾಗಿ ಮಾತನಾಡುವ ಕಂಪ್ಯೂಟರ್ ಆವಿಷ್ಕಾರ ಸಾಧ್ಯವೆಂದು ಹೀಗೆಂದು ಬಿಜೆಪಿ ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ.

ಕೇಂದ್ರದ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಅವರು ಹೀಗೊಂದು ವಿಚಿತ್ರವಾದ ವಾದವೊಂದನ್ನು ಮಂಡಿಸಿದ್ದು, ಸಂಸ್ಕೃತದಿಂದಾಗಿ ಕಂಪ್ಯೂಟರ್‌ಗಳು ಮಾತನಾಡುವಂತಾಗಲು ಸಾಧ್ಯ ಎಂದು ಹೇಳಿದ್ದಾರೆ.

ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಂಸ್ಕೃತದಿಂದಾಗಿ ಭವಿಷ್ಯದಲ್ಲಿ ಮಾತನಾಡುವ ಕಂಪ್ಯೂಟರ್ ಅನ್ನು ಕಂಡು ಹಿಡಿಯಲು ಸಾಧ್ಯವೆಂದು ಸ್ವತಃ ನಾಸಾ ಒಪ್ಪಿಕೊಂಡಿದೆ ಎಂದು ಕೇಂದ್ರ ಸಚಿವ ರಮೇಶ್ ಪೋಕ್ರಿಯಾಲ್ ಹೇಳಿದ್ದಾರೆ.

Talking computers can made using Sanskrit language: BJP minister

ಸಂಸ್ಕೃತವು ವೈಜ್ಞಾನಿಕ ಭಾಷೆಯಾಗಿದ್ದು, ಭಾಷೆ ಹೇಗೆ ಬರೆಯಲಾಗುತ್ತದೆಯೋ ಹಾಗೆಯೇ ಅದನ್ನು ಉಚ್ಛಾರ ಮಾಡಲಾಗುತ್ತದೆ. ಹಾಗಾಗಿ ಇದರಿಂದ ಕಂಪ್ಯೂಟರ್‌ಗೆ ಸಂಸ್ಕೃತವನ್ನು ಅರ್ಥ ಮಾಡಿಕೊಳ್ಳುವುದು ಮಾತನಾಡುವುದು ಸುಲಭವಾಗಲಿದೆ ಎಂದು ಸಚಿವರು ವಿಶ್ಲೇಷಣೆ ಮಾಡಿದ್ದಾರೆ.

ಆಯುರ್ವೇದದ ಜನಕ ಚರಕ ರಿಶಿ ಅವರೇ ಮೊದಲಿಗೆ ಅಣು ಮತ್ತು ಪರಮಾಣುಗಳನ್ನು ಗುರುತಿಸಿದ ಎಂದೂ ಸಹ ಸಚಿವ ರಮೇಶ್ ಪೋಕ್ರಿಯಾಲ್ ಹೇಳಿದ್ದಾರೆ. ಶುಶ್ರುತ ಪ್ರಪಂಚದ ಮೊದಲ ಶಸ್ತ್ರಚಿಕಿತ್ಸಕ ಎಂದೂ ಸಹ ಸಚಿವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+