1993 ಮುಂಬೈ ಸ್ಫೋಟ: ಅಬು ಸಲೇಂಗೆ ಜೀವಾವಧಿ, ಇನ್ನಿಬ್ಬರಿಗೆ ಗಲ್ಲು

Posted By:
Subscribe to Oneindia Kannada
   1993 ಮುಂಬೈ ಸ್ಫೋಟ: ಅಬು ಸಲೇಂಗೆ ಜೀವಾವಧಿ, ಇನ್ನಿಬ್ಬರಿಗೆ ಗಲ್ಲು | Oneindia Kannada

   ಮುಂಬೈ, ಸೆಪ್ಟೆಂಬರ್ 7: 1993 ದ ರೂವಾರಿ ಅಬು ಸಲೇಂ ಗೆ ವಿಶೇಷ ಟಾಡಾ(Terrorist and Disruptive Activity) ನ್ಯಾಯಾಲಯ ಇಂದು(ಸೆ.7) ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

   ದಾವೂದ್ ಇಬ್ರಾಹಿಂ ಬಲಗೈ ಬಂಟ ಅಬು ಸಲೇಂ ಮತ್ತು ಕರೀಮುಲ್ಲಾ ಖಾನ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರೆ, ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಗೆ ಗಲ್ಲು ಶಿಕ್ಷೆ ವಿಧಿಸಿದೆ.ಇನ್ನೊಬ್ಬ ಅಪರಾಧಿ ರಿಯಾಜ್ ಸಿದ್ದಿಖಿಗೆ 10 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.

   ಇದೇ ವರ್ಷದ ಜೂನ್ ನಲ್ಲಿ, ಸ್ಫೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿದಂತೆ 6 ಜನರನ್ನು ಅಪರಾಧಿಗಳು ಎಂದು ಟಾಡಾ ನ್ಯಾಯಾಲ ತೀರ್ಪು ನೀಡಿತ್ತು.ಆದರೆ ಕೋರ್ಟು ತೀರ್ಪು ನೀಡಿದ ಎರಡು ವಾರದಲ್ಲಿ ಮುಸ್ತಫಾ ದೋಸ್ಸಾ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಇಂದು ಉಳಿದ 5 ಜನರಿಗೆ ಶಿಕ್ಷೆ ಪ್ರಕಟಿಸಲಾಗಿದೆ.

   ಮಾರ್ಚ್ 12, 1993 ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 257 ಜನ ಅಸುನೀಗಿದ್ದರೆ, 700 ಜನ ಗಂಭೀರವಾಗಿ ಗಾಯಗೊಂಡಿದ್ದರು. ಬಾಂಬ್ ಸ್ಫೋಟದ ಹಿಂದಿದ್ದಿದ್ದು ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಎಂಬುದು ಸಾಬೀತಾಗಿತ್ತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A special Terrorist and Disruptive Activity (TADA) Court announced the quantum of sentence against all the convicts of the 1993 Mumbai Bomb Blasts Case on Sep 7. 2 convicts awarded life imprisonment and other two awarded death penalty.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ