ಮಹಾ ಸಿಎಂ ದೇವೇಂದ್ರ ವಿಶ್ವಾಸಮತ ಯಾಚನೆ ಮುಹೂರ್ತ ಫಿಕ್ಸ್

Recommended Video

      ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ ಮುಹೂರ್ತವನ್ನು ಫಿಕ್ಸ್ ಮಾಡಿದ ಸುಪ್ರೀಂಕೋರ್ಟ್ | Oneindia Kannada

      ನವದೆಹಲಿ/ಮುಂಬೈ, ನವೆಂಬರ್ 26: ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ ಮುಹೂರ್ತವನ್ನು ಸುಪ್ರೀಂಕೋರ್ಟ್ ಇಂದು ನಿಗದಿಪಡಿಸಿದೆ. ದೇವೇಂದ್ರ ಫಡ್ನವೀಸ್ ಅವರು ನವೆಂಬರ್ 27ರಂದು ಬಹುಮತ ಸಾಬೀತುಪಡಿಸಬೇಕಾಗುತ್ತದೆ. ವಿಶ್ವಾಸಮತಯಾಚನೆ ಸಂಪೂರ್ಣ ಪ್ರಕ್ರಿಯೆಯನ್ನು ನೇರಪ್ರಸಾರ ಮಾಡುವಂತೆ ಕೂಡಾ ಸುಪ್ರೀಂಕೋರ್ಟ್ ಸೂಚಿಸಿದೆ.

      ಬುಧವಾರದಂದು ಹಂಗಾಮಿ ಸ್ಪೀಕರ್ ನೇಮಿಸಬೇಕು. ಎಲ್ಲಾ ಶಾಸಕರ ಪ್ರಮಾಣ ವಚನ ಸ್ವೀಕಾರವಾಗಬೇಕು ನಂತರ ಸಂಜೆ 5ರೊಳಗೆ ದೇವೇಂದ್ರ ಫಡ್ನವೀಸ್ ವಿಶ್ವಾಸಮತ ಯಾಚನೆ ಮುಗಿಸಬೇಕು, ಗುಪ್ತ ಮತದಾನಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿದೆ.

      ನ್ಯಾ. ಎನ್ ವಿ ರಮಣ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಸಂಜೀವ್ ಖನ್ನಾ ಅವರು ಭಾನುವಾರದಂದು ಶಿವಸೇನಾ-ಕಾಂಗ್ರೆಸ್- ಎನ್ಸಿಪಿ ಸದಸ್ಯರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಆದರೆ, ಸದನದ ನಡಾವಳಿ, ವಿಶ್ವಾಸಮತಯಾಚನೆಗೆ ಎಷ್ಟು ಕಾಲಾವಕಾಶ ನೀಡಬೇಕು ಎಂಬುದು ಸ್ಪೀಕರ್ ನಿರ್ದೇಶನದಂತೆ ನಡೆಯಲಿದೆ.

      Supreme Court to issue order on Maharashtra floor test on Nov 27
      _
      ಈ ನಡುವೆ ಜಯಂತ್ ಪಾಟೀಲ್ ರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಿದ ಎನ್ಸಿಪಿ. ಅಧಿಕೃತಾಗಿ ವಿಪಕ್ಷ ನಾಯಕರಾದ ಜಯಂತ್ ಪಾಟೀಲ್. ಜಯಂತ್ ಪಾಟೀಲ್ ರನ್ನು ಎನ್ಸಿಪಿ ವಿಪಕ್ಷ ನಾಯಕರನ್ನಾಗಿ ನೇಮಿಸಿರುವುದನ್ನು ಖಂಡಿಸಿದ ಬಿಜೆಪಿ ನಾಯಕ ಆಶೀಶ್ ಶೆಲಾರ್. ಅಜಿತ್ ಪವಾರ್ ಅವರಿಗೆ ವಿಪ್ ನೀಡುವ ಅಧಿಕಾರ ಇದೆ ಎಂದ ಶೇಲಾರ್. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ, ಇನ್ನೂ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸದ ಅಜಿತ್ ಪವಾರ್. ಬಾರಮತಿ ಶಾಸಕ ಅಜಿತ್ ಮನ ಓಲೈಸುತ್ತಿರುವ ಶರದ್ ಪವಾರ್ ಕುಟುಂಬ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+