ಇಂದು ಮಧ್ಯಾಹ್ನ 3:30 ಕ್ಕೆ ನಟಿ ಶ್ರೀದೇವಿ ಅಂತ್ಯ ಸಂಸ್ಕಾರ

Recommended Video

      ಬಾಲಿವುಡ್ ನಟಿ ಶ್ರೀದೇವಿಯವರ ಅಂತ್ಯ ಸಂಸ್ಕಾರ ಇಂದು ಮುಂಬೈ ನಲ್ಲಿ | Oneindia Kannada

      ಮುಂಬೈ, ಫೆಬ್ರವರಿ 28: ಬಾಲಿವುಡ್ ನಟಿ ಶ್ರೀದೇವಿ(54) ಅವರ ಪಾರ್ಥಿವ ಶರೀರ ನಿನ್ನೆ(ಫೆ.27) ರಾತ್ರಿ ಮುಂಬೈ ತಲುಪಿದ್ದು, ಇಂದು(ಫೆ.28) ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.

      ಮುಂಬೈಯ ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ಶ್ರದ್ಧಾಂಜಲಿ ಸಭೆ ಮತ್ತು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

      ನಂತರ ಅಪರಾಹ್ನ ಸುಮಾರು 3:30 ರ ನಂತರ ಇಲ್ಲಿನ ವಿಲೆ ಪಾರ್ಲೆಯ ಸೇವಾ ಸಮಾಜ ಚಿತಾಗಾರ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

      Sridevi funeral to be held in Mumbai today

      ಫೆ.24 ಶನಿವಾರದಂದು ರಾತ್ರಿ ದುಬೈನ ಹೊಟೇಲ್ ವೊಂದರಲ್ಲಿ ಬಾತ್ ಟಬ್ಬಿನಲ್ಲಿ ಬಿದ್ದು ಮೃತರಾದ ನಟಿ ಶ್ರೀದೇವಿ ಅವರ ಹಠಾತ್ ನಿಧನ ಇಡೀ ಭಾರತವನ್ನೂ ತಲ್ಲಣಿಸಿತ್ತು. ಐದು ಭಾಷೆಗಳಲ್ಲಿ 245 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶ್ರೀದೇವಿ 45 ವರ್ಷಗಳಿಂದ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದವರು.

      ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಸೆಲೆಬ್ರಿಟಿಗಳು ಶ್ರೀದೇವಿ ಅವರ ಸಂಬಂಧಿ ಅನಿಲ್ ಕಪೂರ್ ಅವರ ಮನೆಗೆ ಜಮಾಯಿಸಿದ್ದಾರೆ. ಇಂದು ಅವರ ಅಂತ್ಯ ಸಂಸ್ಕಾರಕ್ಕೆ ದೇಶದ ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+