15 ಗಂಟೆಯಲ್ಲಿ ಗುರಿ ತಲುಪಿದ ನೈಋತ್ಯ ರೈಲ್ವೆ ಮೊದಲ ರೋ ರೋ ರೈಲು

ಮುಂಬೈ, ಸೆಪ್ಟೆಂಬರ್ 02: ಬೆಂಗಳೂರಿನ ನೆಲಮಂಗಲದಿಂದ ಹೊರಟಿದ್ದ ನೈಋತ್ಯ ರೈಲ್ವೆಯ ಮೊದಲ ರೋ ರೋ ರೈಲು ಬಾಲೆ ತಲುಪಿದೆ. 26 ಲಾರಿಗಳನ್ನು ಹೊತ್ತ ರೈಲು ನೆಲಮಂಗಲದಿಂದ ಹೊರಟಿತ್ತು.

Recommended Video

      Loan ಮರುಪಾವತಿ 2 ವರ್ಷ ವಿಸ್ತರಣೆ ಸಾಧ್ಯ | Oneindia Kannada

      ಬುಧವಾರ ಬೆಳಗ್ಗೆ 5.40ಕ್ಕೆ ಮಹಾರಾಷ್ಟ್ರದ ಸೊಲ್ಹಾಪುರ ಸಮೀಪರ ಬಾಲೆ ರೈಲು ನಿಲ್ದಾಣವನ್ನು ರೋ ರೋ ರೈಲು ತಲುಪಿದೆ. 17 ಗಂಟೆಗಳಲ್ಲಿ ತಲುಪಬೇಕಿದ್ದ ರೈಲು 15 ಗಂಟೆಗಳಲ್ಲಿಯೇ ನಿಗದಿತ ರೈಲು ನಿಲ್ದಾಣ ತಲುಪಿದೆ.

      ನೈಋತ್ಯ ರೈಲ್ವೆಯ ಮೊದಲ ರೋ ರೋ ರೈಲು ಸೇವೆಗೆ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭಾನುವಾರ ನೆಲಮಂಗಲದಲ್ಲಿ ಚಾಲನೆ ನೀಡಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಈ ರೈಲು ಸಂಚಾರ ನಡೆಸಲಿದೆ.

      ಭಾನುವಾರ ರೈಲಿಗೆ ಚಾಲನೆ ನೀಡಿದರೂ ಸರಕು ತುಂಬಿದ ಟ್ರಕ್‌ಗಳ ಕೊರತೆ, ಸೇರಿದಂತೆ ಇತರ ಕಾರಣಗಳಿಗಾಗಿ ಚಿಕ್ಕಬಣಾವರದಿಂದ ರೈಲು ವಾಪಸ್ ಬಂದಿತ್ತು. ಮಂಗಳವಾರ ಮಧ್ಯಾಹ್ನ 1.32ಕ್ಕೆ 26 ಟ್ರಕ್‌ಗಳನ್ನು ಹೊತ್ತು ರೈಲು ಪುನಃ ಸಂಚಾರ ಆರಂಭಿಸಿತ್ತು.

      682 ಕಿ. ಮೀ. ಸಂಚಾರ

      682 ಕಿ. ಮೀ. ಸಂಚಾರ

      ಬೆಂಗಳೂರು ಹೊರವಲಯದ ನೆಲಮಂಗಲದಿಂದ ಸೊಲ್ಹಾಪುರ ಸಮೀಪದ ಬಾಲೆ ರೈಲು ನಿಲ್ದಾಣಕ್ಕೆ 682 ಕಿ. ಮೀ. ದೂರವಾಗುತ್ತದೆ. ರೋ ರೋ ರೈಲು ತಲುಪಲು 17 ಗಂಟೆಗಳ ಅವಧಿ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ರೈಲು 15 ಗಂಟೆಯಲ್ಲಿಯೇ ಬಾಲೆ ತಲುಪಿದೆ.

      ಸರಕು ಸಾಗಣೆಯಲ್ಲಿ ಮಹತ್ವದ ಹೆಜ್ಜೆ

      ಸರಕು ಸಾಗಣೆಯಲ್ಲಿ ಮಹತ್ವದ ಹೆಜ್ಜೆ

      ಕೊಂಕಣ ರೈಲ್ವೆಯಲ್ಲಿ ಹಲವು ವರ್ಷಗಳ ಹಿಂದೆಯೇ ರೋ ರೋ ರೈಲು ಸೇವೆ ಆರಂಭವಾಗಿದೆ. ನೈಋತ್ಯ ರೈಲ್ವೆ ಇದೇ ಮೊದಲ ಬಾರಿಗೆ ಈ ಸೇವೆಯನ್ನು ಆರಂಭಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸರಕು ಸಾಗಣೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.

      ಸರಕು ತುಂಬಿದ ಲಾರಿಗಳು

      ಸರಕು ತುಂಬಿದ ಲಾರಿಗಳು

      ರೋ ರೋ ರೈಲಿನಲ್ಲಿ ಗರಿಷ್ಠ 30 ಸರಕು ತುಂಬಿದ ಲಾರಿಗಳನ್ನು ಸಾಗಣೆ ಮಾಡಲಾಗುತ್ತದೆ. ಸರಕಿಗೆ ಪ್ರತಿ ಟನ್‌ಗೆ 2,700 ರೂ. ದರವನ್ನು ರೈಲ್ವೆಗೆ ನೀಡಬೇಕು. ರೋ ರೋ ರೈಲಿನಲ್ಲಿ 42 ಬೋಗಿಗಳಿವೆ. ಮೊದಲ ಸಂಚಾರದಲ್ಲಿ 16 ಬೋಗಿಗಳು ಖಾಲಿಯಾಗಿ ಸಂಚಾರ ನಡೆಸಿವೆ.

      ರೋ ರೋ ರೈಲಿನ ವಿಶೇಷತೆಗಳು

      ರೋ ರೋ ರೈಲಿನ ವಿಶೇಷತೆಗಳು

      ರೋ ರೋ ರೈಲಿನಿಂದಾಗ ಸರಕು ಸಾಗಣೆ ವೆಚ್ಚ ಕಡಿಮೆಯಾಗಲಿದೆ. ಒಂದು ಸುತ್ತಿನಲ್ಲಿ ರೈಲಿನಲ್ಲಿ 2,520 ಟನ್ ಸರಕು ಸಾಗಣೆ ಮಾಡಬಹುದು. ತಡೆ ರಹಿತ ಸಂಚಾರ ಆಗಿರುವುದರಿಂದ ಸರಕುಗಳು ಬೇಗ ಗುರಿಯನ್ನು ತಲುಪಲಿವೆ. ಲಾರಿಗಳನ್ನು ರೈಲಿಗೆ ಲೋಡ್ ಮತ್ತು ಅನ್ ಲೋಡ್ ಮಾಡಲು 3 ಗಂಟೆಯ ಸಮಯ ಬೇಕಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+