ಗುಜರಾತ್ ಪೊಲೀಸ್ ಅಧಿಕಾರಿಗಳ ವೈಷಮ್ಯ, ಸೊಹ್ರಾಬುದ್ದೀನ್ ಎನ್ ಕೌಂಟರ್

ಮುಂಬೈ, ನವೆಂಬರ್ 28: ಉನ್ನತ ಪೊಲೀಸ್ ಅಧಿಕಾರಿಗಳ ಮಧ್ಯದ ಶತ್ರುತ್ವ ಹಾಗೂ ರಾಜಕೀಯದಿಂದಾಗಿ ನಾವು ಹಿಂಸೆ ಪಡುವಂತಾಗಿದೆ ಎಂದು ಸೊಹ್ರಾಬುದ್ದೀನ್ ಶೇಖ್ ಎನ್ ಕೌಂಟರ್ ಪ್ರಕರಣದ ಆರೋಪಿಗಳು ಹೇಳಿದ್ದಾರೆ. ಈ ಬಗ್ಗೆ ಕೋರ್ಟ್ ಎದುರು ಮಾತನಾಡಿ, ನಮ್ಮ ವಿರುದ್ಧ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದಿದ್ದಾರೆ.

ಆಗಿನ ಎಸ್ಪಿ ‌ಎಂ.ಎಲ್.ಪರ್ಮರ್, ಮಾಜಿ ಇನ್ ಸ್ಪೆಕ್ಟರ್ ಬಾಲಕೃಷ್ಣ ಚೌಬೆ, ಪೊಲೀಸ್ ಕಾನ್ಸ್ ಟೇಬಲ್ ಗಳಾದ ಅಜಯ್ ಪರ್ಮರ್, ಶಾಂತಾರಾಂ ಶರ್ಮಾ (ಗುಜರಾತ್ ಮೂಲದವರು), ಹಿರಿಯ ಇನ್ ಸ್ಪೆಕ್ಟರ್ ಅಬ್ದುರ್ ರೆಹಮಾನ್, ಆಗಿನ ಸಬ್ ಇನ್ ಸ್ಪೆಕ್ಟರ್ ಹಿಮಾಂಶು ಸಿಂಗ್ ಮತ್ತು ಆಗಿನ ಎಸ್ ಐ ಶ್ಯಾಮ್ ಸಿಂಗ್ (ರಾಜಸ್ತಾನ ಪೊಲೀಸ್) ವಿರುದ್ಧ ನಕಲಿ ಎನ್ ಕೌಂಟರ್ ಆರೋಪ ಮಾಡಲಾಗಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸುನೀಲ್ ಕುಮಾರ್ ಶರ್ಮಾ ಸಿಬಿಐ ವಿಶೇಷ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ಆಲಿಸುತ್ತಿದ್ದಾರೆ. ಸೊಹ್ರಾಬುದ್ದೀನ್ ಹಾಗೂ ತುಳಸೀರಾಮ್ ಪ್ರಜಾಪತಿ ಎನ್ ಕೌಂಟರ್ ಹಾಗೂ ಕೌಸರ್ ಬೀ ನಿಗೂಢ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿಚಾರಣೆಯನ್ನು ನ್ಯಾಯಾಧೀಶರು ನಡೆಸುತ್ತಿದ್ದಾರೆ.

ಆರೋಪಿಗಳ ಹೇಳಿಕೆಗಳ ದಾಖಲೆ

ಆರೋಪಿಗಳ ಹೇಳಿಕೆಗಳ ದಾಖಲೆ

ಸಾಕ್ಷ್ಯಗಳನ್ನು ಹಾಜರುಪಡಿಸುವ ಮುನ್ನ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಪರ್ಮರ್ ಮಾತನಾಡಿ, ಇದು ರಾಜಕೀಯಪ್ರೇರಿತ ಪ್ರಕರಣ. ಉನ್ನತ ಪೊಲೀಸ್ ಅಧಿಕಾರಿಗಳ ವೈಷಮ್ಯದ ಫಲಿತ. ಎನ್ ಕೌಂಟರ್ ನಂತರ ನನ್ನ ಮೇಲಧಿಕಾರಿಗಳಾದ ಡಿಜಿ ವಂಜರ ಹಾಗೂ ರಾಜಕುಮಾರ್ ಪಾಂಡಿಯನ್ ರಿಂದ ಸೂಚನೆ ಬಂದಿತ್ತು. ಈ ಪ್ರಕರಣದ ತನಿಖೆಗೆ ಸೂಚಿಸಲಾಗಿತ್ತು ಎಂದಿದ್ದಾರೆ.

ಉನ್ನತ ಹುದ್ದೆ ಮೇಲೆ ಕಣ್ಣಿಟ್ಟವರಿಂದ ಈ ಪ್ರಕರಣ

ಉನ್ನತ ಹುದ್ದೆ ಮೇಲೆ ಕಣ್ಣಿಟ್ಟವರಿಂದ ಈ ಪ್ರಕರಣ

ಸಿಂಗ್ ಮಾತನಾಡಿ, ಗುಜರಾತ್ ನಲ್ಲಿ ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಈ ಪ್ರಕರಣ ಆಯಿತು. ಗುಜರಾತ್ ಎಟಿಎಸ್ ನ ಯಾವುದೇ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ. ಮತ್ತು ಯಾವುದೇ ತಪ್ಪು ಕೂಡ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಅಂದಿನ ರಾಜಕೀಯ ಸನ್ನಿವೇಶವೂ ಕಾರಣ

ಅಂದಿನ ರಾಜಕೀಯ ಸನ್ನಿವೇಶವೂ ಕಾರಣ

ಇನ್ನು ರಾಜವತ್ ಮಾತನಾಡಿ, ಉನ್ನತ ಅಧಿಕಾರಿಗಳ ಮಧ್ಯದ ವೈಷಮ್ಯ ಹಾಗೂ ಆಗಿನ ರಾಜಕೀಯ ಸನ್ನಿವೇಶದ ಫಲಿತವೇ ಈ ಪ್ರಕರಣ ಎಂದಿದ್ದಾರೆ. ಕೌಸರ್ ಬೀಯನ್ನು ಎಲ್ಲಿ ಅಪಹರಿಸಿ, ಅಡಗಿಸಿಡಲಾಗಿತ್ತೋ ಆ ಅರ್ಹಾಮ್ ಫಾರ್ಮ್ ನ ಮಾಲೀಕ ರಾಜೇಂದ್ರ ಜಿರಾವಾಲಾ ಮಾತನಾಡಿ, ಗುಜರಾತ್ ಸಿಐಡಿ ನನ್ನನ್ನು ಸಾಕ್ಷಿ ಮಾಡಿದರೆ, ಸಿಬಿಐನಿಂದ ನನ್ನನ್ನು ಆರೋಪಿಯಾಗಿ ಮಾಡಲಾಗಿದೆ ಎಂದಿದ್ದಾರೆ.

ನಿರಪರಾಧಿ ಎಂದು ಸಾಬೀತು ಪಡಿಸಲು ಸಿದ್ಧ

ನಿರಪರಾಧಿ ಎಂದು ಸಾಬೀತು ಪಡಿಸಲು ಸಿದ್ಧ

ಸೊಹ್ರಾಬುದ್ದೀನ್ ಮೇಲೆ ಗುಂಡು ಹಾರಿಸಿದ ಆರೋಪ ಹೊತ್ತಿರುವ ಅಬ್ಡುರ್ ರೆಹಮಾನ್, ತಾನು ನಿರಪರಾಧಿ ಎಂದು ಸಾಬೀತು ಪಡಿಸುವುದಕ್ಕೆ ಸಾಕ್ಷ್ಯವನ್ನು ಕರೆಸಲು ನಿರ್ಧಾರ ಮಾಡಿದ್ದಾರೆ. ಅದು ಸುಳ್ಳು ಚಾರ್ಜ್ ಶೀಟ್, ನಾನು ನಿರಪರಾಧಿ. ಈ ಎನ್ ಕೌಂಟರ್ ಆರೋಪದಲ್ಲಿ ನನ್ನ ಪಾತ್ರ ಇಲ್ಲ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+