ಮುಂಬೈನಲ್ಲಿ ಲಸಿಕೆಯ ಪ್ರಯೋಗ; ಎರಡನೇ ಡೋಸ್ ಲಸಿಕೆ ಪಡೆಯಲು ಹಿಂದೇಟು

ಮುಂಬೈ, ಡಿಸೆಂಬರ್ 10: ಮುಂಬೈನ ಕೆಇಎಂ ಹಾಗೂ ಬಿಎಲ್ ನಾಯರ್ ಆಸ್ಪತ್ರೆಯಲ್ಲಿ ಕಳೆದ ವಾರವಷ್ಟೇ ಆಕ್ಸ್‌ ಫರ್ಡ್ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ನಡೆಸಲಾಗಿದೆ. ಈ ಪ್ರಯೋಗದಲ್ಲಿ ಎರಡು ಡೋಸ್ ಗಳ ಲಸಿಕೆಯನ್ನು ನೀಡಲಾಗಿದ್ದು, 101 ಮಂದಿಯಲ್ಲಿ ಆರು ಜನ ಎರಡನೇ ಡೋಸ್ ಲಸಿಕೆ ಪಡೆಯಲು ಹಿಂದೇಟು ಹಾಕಿರುವುದಾಗಿ ತಿಳಿದುಬಂದಿದೆ.

ಪ್ರಯೋಗಕ್ಕೆ ಸ್ವಯಂ ಆಗಿ ಬಂದ 101 ಮಂದಿಯಲ್ಲಿ ಆರು ಮಂದಿ ಎರಡನೇ ಡೋಸ್ ತೆಗೆದುಕೊಳ್ಳಲು ನಿರಾಕರಿಸಿರುವುದಾಗಿ ತಿಳಿದುಬಂದಿದೆ. ಆದರೆ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿರುವುದು ಏಕೆ ಎಂಬ ಕುರಿತು ನಿಖರ ಕಾರಣ ತಿಳಿದುಬಂದಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿರುವ ಕೆಇಎಂ ಆಸ್ಪತ್ರೆ ಆಡಳಿತ, "ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಕಾರಣವನ್ನು ಹೇಳುವುದು ಕಷ್ಟ. ಆತಂಕ ಅಥವಾ ಭಯದಿಂದ ಹೀಗೆ ಆಗಿರಬಹುದೆಯೇ ತಿಳಿದಿಲ್ಲ. ಅವರೇ ಸ್ವಯಂ ಆಗಿ ಪ್ರಯೋಗಕ್ಕೆ ಬಂದಿದ್ದರು" ಎಂದು ತಿಳಿಸಿದೆ. ಈ ಆರು ಮಂದಿ ಸಹಿ ಹಾಕುವಾಗಲೇ ಪ್ರಯೋಗದಿಂದ ಹಿಂದೆ ಸರಿಯುವ ಆಲೋಚನೆ ಮಾಡಿದ್ದರು. ಇಂಥ ಪ್ರಕರಣಗಳನ್ನು ಡ್ರಾಪ್ಔಟ್ ಎಂದು ಪರಿಗಣಿಸುತ್ತೇವೆ. ಯಾರನ್ನೂ ಲಸಿಕೆ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

Six People Didnt Attended Coronvirus Vaccine Second Dosage Trail

ಆದರೆ ಡ್ರಾಪ್ ಔಟ್ ಆದವರ ಕುರಿತು ಮಾಹಿತಿಯನ್ನು ಕಲೆ ಹಾಕುತ್ತೇವೆ. ಅದಕ್ಕೆ ನಿಖರ ಕಾರಣವನ್ನೂ ತಿಳಿದುಕೊಳ್ಳುತ್ತೇವೆ. ಈ ವಿಷಯದಲ್ಲಿ ಕೆಲವು ಗೌಪ್ಯತೆಯನ್ನು ಕಾಯ್ದುಕೊಳ್ಳುವುದೂ ಮುಖ್ಯ ಎಂದಿದ್ದಾರೆ. ಮತ್ತೊಂದು ಆಸ್ಪತ್ರೆಯಲ್ಲಿ 148 ಮಂದಿ ಎರಡನೇ ಟ್ರಯಲ್ ಗೆ ಸಿದ್ಧವಾಗಿದ್ದಾರೆ. ಈವರೆಗೂ ಲಸಿಕೆ ತೆಗೆದುಕೊಂಡವರಲ್ಲಿ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ. ಎಲ್ಲರ ಆರೋಗ್ಯದ ಮೇಲೂ ನಿಗಾ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಲಸಿಕೆಯ ಮುಂಚಿನ ಪ್ರಕ್ರಿಯೆಯ ಕುರಿತು ಮಾತನಾಡಿರುವ ಅವರು, "ಯಾವುದೇ ವ್ಯಕ್ತಿಯನ್ನು ಟ್ರಯಲ್ ಗೆ ಬಳಸುವಾಗ ಆ ವ್ಯಕ್ತಿ ಫಿಟ್ ಆಗಿದ್ದಾನೆಯೇ ಎಂದು ಪರೀಕ್ಷೆ ನಡೆಸಲಾಗುತ್ತದೆ. ಅವರಿಗೆ ಹೃದಯ, ಶ್ವಾಸಕೋಶ, ಕಿಡ್ನಿ ಸಮಸ್ಯೆ, ಇನ್ನಿತರ ಯಾವುದೇ ಅನಾರೋಗ್ಯ ಇಲ್ಲದ್ದನ್ನು ದೃಢಪಡಿಸಿಕೊಳ್ಳಲಾಗುತ್ತದೆ. ಎಲ್ಲಾ ಪರೀಕ್ಷೆ ನಡೆಸಿ ಲಸಿಕೆ ಪ್ರಯೋಗಕ್ಕೆ ಒಳಪಡಿಸಲಾಗಿದೆ" ಎಂದರು.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಫಾರ್ಮಾ ಕಂಪನಿ ಆಸ್ಟ್ರಾ ಜೆನೆಕಾ ಹಾಗೂ ಪುಣೆ ಮೂಲದ ಸೆರಂ ಇನ್‌ ಸ್ಟಿಟ್ಯೂಟ್ ಜಂಟಿ ಸಹಭಾಗಿತ್ವದಲ್ಲಿ ಈ ಪ್ರಯೋಗವನ್ನು ಸೆಪ್ಟೆಂಬರ್ ಕೊನೆಯ ವಾರದಿಂದ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+