ಅತ್ಯಾಚಾರ ಆರೋಪದ ಮೇಲೆ 'ಕಾಮಿಡಿ ಸ್ಟಾರ್' ನಟ ಬಂಧನ

Posted By:
Subscribe to Oneindia Kannada

ಮುಂಬೈ, ಮಾರ್ಚ್ 10: 'ಕಾಮಿಡಿ ಸರ್ಕಸ್' ಖ್ಯಾತಿಯ ಜನಪ್ರಿಯ ಹಾಸ್ಯ ಕಲಾವಿದ, ನಟ ರೆಹಮಾನ್ ಖಾನ್ ರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರದ ಆರೋಪ ಎದುರಿಸುತ್ತಿರುವ ನಟ ರೆಹಮಾನ್ ಖಾನ್ ಅವರು ಸದ್ಯಕ್ಕೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಕಾಮಿಡಿ ಸರ್ಕಸ್, ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಸೀಸನ್ 3 ಸೇರಿದಂತೆ ಅನೇಕ ಟಿವಿಗಳಲ್ಲಿನ ಹಾಸ್ಯ ಕಾರ್ಯಕ್ರಮದಲ್ಲಿ ನಟಿಸಿದ್ದ ರೆಹಮಾನ್ ಖಾನ್ ಅವರನ್ನು ಬಂಧಿಸಲಾಗಿದೆ.

Shocking: 'Comedy Circus' actor arrested on rape charges

ಮಂಗಳವಾರ ಬಂಧಿಸಿ ಅವರನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮಾರ್ಚ್ 14ರ ತನಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ವಾಲಿವ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ನಾರಾಯಣ್ ಪಾಟೀಲ್ ಅವರು ಹೇಳಿದ್ದಾರೆ.

ಫೆಬ್ರವರಿ 29ರಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಸಾಂತಾ ಕ್ರೂಜ್ ನಲ್ಲಿ ನೆಲೆಸಿರುವ ಎರಡು ಮಕ್ಕಳ ತಾಯಿಯಿಂದ ರೆಹಮಾನ್ ಖಾನ್ 2 ಲಕ್ಷ ರು ಸಾಲ ಪಡೆದಿದ್ದರು. ಹಣ ಹಿಂತಿರುಗಿಸುವುದಾಗಿ ನಂಬಿಸಿ ಹೋಟೆಲ್ ರೂಮೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಇಬ್ಬರ ನಡುವೆ ವೀಚಾಟ್ ಮೂಲಕ ಗೆಳೆತನ ಬೆಳೆದಿದ್ದು ವಿಶೇಷವಾಗಿದೆ. ಆಕೆಯನ್ನು ರೇಪ್ ಮಾಡಿದ್ದಲ್ಲದೆ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಆಕೆಯನ್ನು ಬೆದರಿಸಿರುವ ಆರೋಪವು ನಟನ ಮೇಲಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Police has arrested comedian Rehman Khan. Reportedly Khan who has been part of series of TV shows including 'Comedy Circus' and The Great Indian Laughter Challenge Season 3' was arrested on rape charges.
Please Wait while comments are loading...