ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ
ಮುಂಬೈ, ಏಪ್ರಿಲ್ 23: ಶಿವಸೇನೆ ನಾಯಕ ಸಚಿನ್ ಸಾವಂತ್ ಹತ್ಯೆಯಾಗಿದ್ದಾರೆ. ಭಾನುವಾರ ರಾತ್ರಿ ಬೈಕ್ ನಲ್ಲಿ ಇಬ್ಬರು ಅಪರಿಚಿತರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮುಂಬೈ ಉಪನಗರದ ಕಂಡಿವಾಲಿಯಲ್ಲಿ ಈ ಘಟನೆ ನಡೆದಿದೆ.
ಭಾnuವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಸಚಿನ್ ಸಾವಂತ್ ಗೋಕುಲ್ ನಗರ ಪ್ರದೇಶದಲ್ಲಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಅಪರಿಚಿತರ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಸಾವಂತ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆಸ್ಪತ್ರೆಯಲ್ಲಿ ಸಚಿನ್ ಸಾವಂತ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಸಚಿನ್ ಸಾವಂತ್ ಶಿವಸೇನೆ ಘಟಕದ ಉಪ ಮುಖ್ಯಸ್ಥರಾಗಿದ್ದರು. ಅವರ ಹತ್ಯೆ ಶಿವಸೇನೆ ಮತ್ತು ಮುಂಬೈ ನಗರವನ್ನು ಬೆಚ್ಚಿ ಬೀಳಿಸಿದೆ. ಸಾವಂತ್ ಹತ್ಯೆ ಸಂಬಂಧ ಕುರಾರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications