ರಾಹುಲ್ ಪ್ರಧಾನಿ ರೇಸಿನಲ್ಲಿಲ್ಲ: ಪವಾರ್ ಗೆ ಖುಷಿಯೋ ಖುಷಿ!
Recommended Video

ಮುಂಬೈ, ಆಗಸ್ಟ್ 28: "ನಾನು ಪ್ರಧಾನಿ ರೇಸಿನಲ್ಲಿಲ್ಲ" ಎಂದು ಇತ್ತೀಚೆಗಷ್ಟೇ ಲಂಡನ್ನಿನಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಯಿಂದ ತಮಗೆ ಬಹಳ ಸಂತೋಷವಾಗಿದೆ ಎಂದು NCP ಮುಖಂಡ ಶರದ್ ಪವಾರ್ ಹೇಳಿದ್ದಾರೆ.
"2019 ರ ಲೋಕಸಭಾ ಚುನಾವಣೆ ಬಹಳ ಮಹತ್ವದ್ದು. ಅವರನ್ನು(ಬಿಜೆಪಿ) ಅಧಿಕಾರದಿಂದ ದೂರವಿಡಲು ಎಲ್ಲರೂ ಒಟ್ಟಾಗಬೇಕಿದೆ. ಚುನಾವಣೆಯ ನಂತರ ಯಾವ ಪಕ್ಷ ಹೆಚ್ಚು ಸೀಟುಗಳನ್ನು ಗೆಲ್ಲುತ್ತದೋ ಆ ಪಕ್ಷದ ವ್ಯಕ್ತಿಯನ್ನೇ ಪ್ರಧಾನಿಯನ್ನಾಗಿ ಮಾಡಬೇಕು" ಎಂದು ನ್ಯಾಶ್ನಲಿಸ್ಟಿಕ್ ಕಾಂಗ್ರೆಸ್ ಪಕ್ಷದ ಮುಖಂಡ, 78 ವರ್ಷದ ಶರದ್ ಪವಾರ್ ಹೇಳಿದ್ದಾರೆ.

"ಲಂಡನ್ನಿನಲ್ಲಿ ರಾಹುಲ್ ಗಾಂಧಿ ಅವರು ನಾನು ಪ್ರಧಾನಿ ರೇಸಿನಲ್ಲಿಲ್ಲ ಎಂಬ ಹೇಳಿಕೆ ನೀಡಿರುವುದು ಸಂತಸ ತಂದಿದೆ. ಚುನಾವಣೆಗೂ ಮುನ್ನವೇ ಅದನ್ನು ನಿರ್ಧರಿಸುವುದು ಸರಿಯಲ್ಲ. ಮಾಯಾವತಿ, ಮಮತಾ ಬ್ಯಾನರ್ಜಿ ಅವರು ಸಹ ಈ ರೇಸಿನಲ್ಲಿದ್ದಾರೆ. ಆದರೆ 2019 ರ ಲೋಕಸಭಾ ಚುನಾವಣೆಯ ನಂತರ ಯಾವ ಪಕ್ಷ ಉತ್ತಮ ಪ್ರದರ್ಶನ ನೀಡಿದೆ ಎಂಬುದನ್ನು ಪರಿಗಣಿಸಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು" ಎಂದು ಪವಾರ್ ಹೇಳಿದ್ದಾರೆ.












Click it and Unblock the Notifications