ಮುಂಬೈ ಶಕ್ತಿ ಮಿಲ್ಸ್ ರೇಪ್: ನಾಲ್ವರಿಗೆ ಜೀವಾವಧಿ

ಮುಂಬೈ, ಮಾ.21: ಇಲ್ಲಿನ ಶಕ್ತಿಮಿಲ್ಸ್ ಆವರಣದಲ್ಲಿ ಟೆಲಿಫೋನ್ ಆಪರೇಟರ್ ಮೇಲೆ ಅತ್ಯಾಚಾರ ನಡೆಸಿದ್ದ ನಾಲ್ವರು ಆರೋಪಿಗಳಿಗೆ ಮುಂಬೈ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಮಧ್ಯಾಹ್ನ ಮಹತ್ವದ ತೀರ್ಪು ನೀಡಿದೆ.

ಈ ನಾಲ್ವರು ದುಷ್ಕರ್ಮಿಗಳ ವಿರುದ್ಧ ಅತ್ಯಾಚಾರ, ಸಂಚು, ಸಮಾನ ಉದ್ದೇಶ ಹಾಗೂ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯದ ಆರೋಪಗಳು ಸಾಬೀತಾಗಿವೆ ಎಂದು ಸೆಷನ್ಸ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಶಕ್ತಿಮಿಲ್ಸ್ ಆವರಣದಲ್ಲಿ ಈ ಆರೋಪಿಗಳು 2013ರ ಜುಲೈ 21ರಂದು ಟೆಲಿಫೋನ್ ಮಹಿಳಾ ಆಪರೇಟರ್ ಮೇಲೆ ಅತ್ಯಾಚಾರ ಎಸಗಿದ್ದರು. ಸಿರಾಜ್ ಶೇಖ್ (22), ಮಹಮ್ಮದ್ ಅಶ್ಫಕ್ ಶೇಖ್, ವಿಜಯ್ ಜಾದವ್, ಖಾಸಿಂ ಶೇಖ್ ಅಲಿಯಾಸ್ ಬೆಂಗಾಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಈ ನಡುವೆ ಇದೇ ಶಕ್ತಿಮಿಲ್ಸ್ ಆವರಣದಲ್ಲಿ ನಡೆದಿದ್ದ ಪತ್ರಿಕಾ ಛಾಯಾಗ್ರಾಹಕಿ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 24ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯುವ ಅಗತ್ಯವಿರುವುದರಿಂದ ವಿಚಾರಣೆ ಮುಂದೂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಆರೋಪಿಗಳಲ್ಲಿ ಒಬ್ಬನು ಬಾಲಾಪರಾಧಿಯೂ ಸೇರಿದ್ದು, ಅವನನ್ನು ಬಾಲಾಪರಾಧಿ ನ್ಯಾಯಿಕ ಮಂಡಳಿಗೆ ಒಪ್ಪಿಸಲಾಗಿದೆ. ಉಳಿದ ನಾಲ್ವರ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಪ್ರಕರಣದ ವಾದ-ಪ್ರತಿವಾದ ಆಲಿಸಿದ ಮುಂಬೈ ಸೆಷನ್ಸ್ ನ್ಯಾಯಾಲಯ ಈ ನಾಲ್ವರೂ ಆರೋಪಿಗಳು ದೋಷಿಗಳು ಮತ್ತು ಶಿಕ್ಷಾರ್ಹರು ಎಂದು ಗುರುವಾರ ಹೇಳಿತ್ತು. ಶಿಕ್ಷೆ ಪ್ರಮಾಣ ಪ್ರಕಟವನ್ನು ಇಂದಿಗೆ ಕಾದಿರಿಸಲಾಗಿತ್ತು. ಇಂದು ಮಧ್ಯಾಹ್ನ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಪರಾಧಿಗಳ ಚಿತ್ರಗಳು ಪ್ರಕರಣದ ಇನ್ನಷ್ಟು ವಿವರ ಮುಂದೆ ಓದಿ...

ಮುಂಬೈ 2013ರ ಆಗಸ್ಟ್ 23ರಂದು ಅತ್ಯಾಚಾರ

ಮುಂಬೈ 2013ರ ಆಗಸ್ಟ್ 23ರಂದು ಅತ್ಯಾಚಾರ

ಸಂಸ್ಥೆ ವಹಿಸಿಕೊಟ್ಟಿದ್ದ ಅಸೈನ್ ಮೆಂಟ್ ನಿರ್ವಹಣೆಗಾಗಿ ತನ್ನ ಸಹೋದ್ಯೋಗಿ ಜತೆ ಶಕ್ತಿಮಿಲ್ಸ್ ಬಳಿ ತೆರಳಿದ್ದ 22 ವರ್ಷದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಾಲ್ವರು ದುಷ್ಕರ್ಮಿಗಳು 2013ರ ಆಗಸ್ಟ್ 23ರಂದು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಪತ್ರಿಕಾ ಛಾಯಾಗ್ರಾಹಕಿ ಅತ್ಯಾಚಾರ ಪ್ರಕರಣ ದಾಖಲಿಸಿದ ನಂತರ ಈ ಟೆಲಿಫೋನ್ ಆಪರೇಟರ್ ಕೂಡ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು.

ಶೀಘ್ರದಲ್ಲೇ ಆರೋಪಿಗಳ ಬಂಧನವಾಗಿತ್ತು

ಶೀಘ್ರದಲ್ಲೇ ಆರೋಪಿಗಳ ಬಂಧನವಾಗಿತ್ತು

ಈ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದ ಮುಂಬೈ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯ ನಡೆಸಿ 24 ಗಂಟೆಯೊಳಗೆ ಮುಂಬೈನಲ್ಲಿ 17 ವರ್ಷದ ಬಾಲಾಪರಾಧಿಯನ್ನು ಬಂಧಿಸಿದ್ದು, ನಂತರ ಒಂದು ವಾರದಲ್ಲಿ ಉಳಿದ ನಾಲ್ವರನ್ನು ಬಂಧಿಸಿದ್ದರು.

ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ

ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ

2012 ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳಿಗೂ ಅಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್ ಕೂಡ ಅದೇ ತೀರ್ಪನ್ನು ಎತ್ತಿಹಿಡಿದಿತ್ತು.

ಇನ್ನೊಂದು ಪ್ರಕರಣ: ಮರಣದಂಡನೆ ಶಿಕ್ಷೆ ಸಾಧ್ಯತೆ

ಇನ್ನೊಂದು ಪ್ರಕರಣ: ಮರಣದಂಡನೆ ಶಿಕ್ಷೆ ಸಾಧ್ಯತೆ

ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತ ಆರೋಪಿಗಳನ್ನು ತಪ್ಪಿತಸ್ಥರು ಎಂದು ಸ್ಥಳೀಯ ನ್ಯಾಯಾಲಯ ಗುರುವಾರ ಘೋಷಿಸಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಪರಿಶೀಲಿಸಿದರೆ ಬಹುತೇಕ ಮುಂಬೈನ ನಾಲ್ವರು ಆರೋಪಿಗಳಿಗೂ ನ್ಯಾಯಾಧೀಶರು ಪತ್ರಿಕಾ ಛಾಯಾಗ್ರಾಹಕಿ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆಗಳು ಕಂಡುಬರುತ್ತಿವೆ.

ಉಜ್ವಲ್ ನಿಕಂ ಅವರು ಗೆಲುವಿನ ನಗೆ

ಉಜ್ವಲ್ ನಿಕಂ ಅವರು ಗೆಲುವಿನ ನಗೆ

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಅವರು ನ್ಯಾಯಾಲಯ ನೀಡಿದ ತೀರ್ಪಿನ ನಂತರ ಗೆಲುವಿನ ನಗೆ ಬೀರಿದ್ದಾರೆ.

ಪೊಲೀಸರಿಂದ ಸಂಪೂರ್ಣ ಚಾರ್ಜ್ ಶೀಟ್ ಸಲ್ಲಿಕೆ

ಪೊಲೀಸರಿಂದ ಸಂಪೂರ್ಣ ಚಾರ್ಜ್ ಶೀಟ್ ಸಲ್ಲಿಕೆ

ಸುಮಾರು 600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿ, 41 ಸಾಕ್ಷಿಗಳನ್ನು ಪೊಲೀಸರು ಹೆಸರಿಸಿದ್ದಾರೆ. ಆರೋಪಿಗಳ ಹೆಸರು ವಿಜಯ್ ಜಾಧವ್, ಕಾಸಿಂ ಬೆಂಗಾಳಿ, ಸಲೀಂ ಅನ್ಸಾರಿ, ಸಿರಾಜ್ ರೆಹಮಾನ್(ಬಾಲಾಪರಾಧಿ)7 ತಿಂಗಳ ಅವಧಿಯಲ್ಲಿ ತನಿಖೆ ಪೂರ್ಣಗೊಂಡಿತ್ತು. ಬಂಧಿತ ಐವರು ಆರೋಪಿಗಳಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದು ಆತನ ವಿಚಾರಣೆ ಪ್ರತ್ಯೇಕವಾಗಿ (juvenile court) ನಡೆಸಲಾಗಿತ್ತು.

ಘಟನೆ ನಡೆದ ಶಕ್ತಿ ಮಿಲ್ಸ್ ಪ್ರದೇಶ

ಘಟನೆ ನಡೆದ ಶಕ್ತಿ ಮಿಲ್ಸ್ ಪ್ರದೇಶ

ಪಿಟಿಐ ಸಂಗ್ರಹಿತ ಚಿತ್ರ: ಮುಂಬೈನ ಶಕ್ತಿ ಮಿಲ್ಸ್ ಕಾಂಪೌಂಡ್ ನ ಈ ಜಾಗದಲ್ಲೇ ಫೋಟೋ ಜರ್ನಲಿಸ್ಟ್ ಹಾಗೂ ಟೆಲಿಫೋನ್ ಆಪರೇಟರ್ ಮೇಲೆ ಇದೇ ಗ್ಯಾಂಗಿನಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+