ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನ, ತಂತ್ರಜ್ಞಾನ ಬಿಟ್ಟು ಅಭಿವೃದ್ಧಿ ಅಸಾಧ್ಯ : ಮೋದಿ

By Kiran B Hegde
|
Google Oneindia Kannada News

ಮುಂಬಯಿ, ಜ. 3: ಭಾರತದ ಅಭಿವೃದ್ಧಿಯು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ನೇರ ಸಂಬಂಧ ಹೊಂದಿದೆ. ಈ ಸಂಬಂಧವನ್ನು ಯಾವುದೇ ರಾಜಕೀಯ ಪ್ರೇರಿತ ನಿರ್ಧಾರವಾಗಲಿ, ಸಮಾಜದ ಒಲವಾಗಲಿ, ಇಕ್ವಿಟಿ, ನೈತಿಕತೆ ಇನ್ನಿತರ ಕಾರಣಗಳಿಂದ ಬೇರ್ಪಡಿಸುವುದು ಸಾಧ್ಯವೇ ಇಲ್ಲ...

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭವಾದ ಐದು ದಿನಗಳ 102ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್‌ಸಿ) ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತುಗಳಿವು. ತಮ್ಮ ಭಾಷಣದಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಮೋದಿ ಒತ್ತಿ ಹೇಳಿದರು. ಇದಕ್ಕಾಗಿ ಶಿಕ್ಷಣ ಕ್ಷೇತ್ರದ ಪಾತ್ರವೂ ಅಗತ್ಯ ಎಂದರು. [ಎಸ್.ಎಲ್. ಬೈರಪ್ಪ ಕಾದಂಬರಿ ಯಾನ ವಿಮರ್ಶೆ]

modi

ನರೇಂದ್ರ ಮೋದಿ ಹೇಳಿದ 10 ಪ್ರಮುಖ ಅಂಶಗಳು ಹೀಗಿವೆ...

1) ಸ್ಪರ್ಧಾತ್ಮಕತೆಯು ಇತರರು ಏನು ಮಾಡುತ್ತಿದ್ದಾರೆಂಬುದನ್ನು ಆಧರಿಸಿರುವುದಿಲ್ಲ. ನಿರಂತರ ಅಭಿವೃದ್ಧಿ ಹಾಗೂ ಸಂಶೋಧನೆಯನ್ನು ಅವಲಂಬಿಸಿದೆ.

2) ಆಡಳಿತ ಮತ್ತು ಅಭಿವೃದ್ಧಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೇರ್ಪಡಿಸುವುದು ಸಾಧ್ಯವಿಲ್ಲ.

3) ವಿಜ್ಞಾನ ಮತ್ತು ತಂತ್ರಜ್ಞಾನ ದೇಶಗಳ ನಡುವಿನ ಅಂತರ ಕಡಿಮೆ ಮಾಡಬಲ್ಲದು, ಜಗತ್ತನ್ನು ಒಗ್ಗೂಡಿಸಬಲ್ಲದು ಹಾಗೂ ಶಾಂತಿ ತುಂಬಬಲ್ಲದು

modi

4) ಭಾರತದ ಗ್ರಾಮೀಣ ಪ್ರದೇಶಗಳಿಗೆ ಸಹಕಾರಿಯಾಗುವ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಾಗಿದೆ. ಆರೋಗ್ಯ ಅಭಿವೃದ್ಧಿ, ಉತ್ಪಾದನೆಯಲ್ಲಿ ಹೆಚ್ಚಳ, ಕೈಗಾರಿಕೆ ಬೆಳವಣಿಗೆ ಆಗಬೇಕಾಗಿದೆ.

5) ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಯುದ್ಧ, ಅಸಮಾನತೆ, ಪರಿಸರ ನಾಶಗಳೂ ಹೆಚ್ಚಬಹುದು. ಇದರಿಂದ ಪಾರಾಗಲು ಬಡವರ ಅಭಿವೃದ್ಧಿ ಮತ್ತು ಸಮಾಜದಲ್ಲಿ ಅತ್ಯಂತ ನಿರ್ಲಕ್ಷಿತ ಜನರನ್ನು ತಲುಪುವ ಉದ್ದೇಶದಿಂದ ಸಂಶೋಧನೆ ನಡೆಸಬೇಕು. [ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಅಭಿವೃದ್ದಿ ಹೊಗಳಿದ ಪರಿಕ್ಕರ್]

6) ಭಾರತದಲ್ಲಿ ಡಿಜಿಟಲ್ ಸಂಪರ್ಕ ಹೆಚ್ಚಬೇಕು. ಶಾಲೆಗಳಲ್ಲಿಯೇ ಡಿಜಿಟಲ್ ಶಿಕ್ಷಣ ನೀಡಬೇಕು.

modi

7) ವಿಜ್ಞಾನವು ಮಾನವನ ವಿದುಳಿನ ಕೊಡುಗೆಯೇ ಇರಬಹುದು. ಆದರೆ, ಮಿದುಳನ್ನು ನಮ್ಮ ಅಂತಃಕರಣವೇ ನಿಯಂತ್ರಿಸುತ್ತದೆ. ಆದ್ದರಿಂದ ವಿಜ್ಞಾನದ ಉದ್ದೇಶ ಮಾನವನ ಜೀವನವನ್ನು ಉತ್ತಮಗೊಳಿಸುವುದೇ ಆಗಿರಬೇಕು.

8) ಸಂಶೋಧನಾ ಪ್ರಸ್ತಾವನೆಗಳಿಗೆ ಅನುದಾನ ನೀಡಲು ಹೆಚ್ಚು ಸಮಯ ಪಡೆಯಬಾರದು. ಜೈವಿಕ ತಂತ್ರಜ್ಞಾನ, ನ್ಯಾನೋ ವಿಜ್ಞಾನ, ಕೃಷಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸ್ಪಷ್ಟ ನಿಯಂತ್ರಕ ಕಾರ್ಯನೀತಿಗಳು ಇರಬೇಕು. [ಅಮೆರಿಕಕ್ಕೆ ಹೊರಟ ಮಂಗಳೂರಿನ ವಿಜ್ಞಾನಿಗಳು]

modi

9) ಸರ್ಕಾರದ ಪ್ರತಿ ಇಲಾಖೆಯ ಕಾರ್ಯಚಟುವಟಿಕೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡಲು ಓರ್ವ ಅಧಿಕಾರಿ ಇರಬೇಕು. ಈ ನಿಟ್ಟಿನಲ್ಲಿ ಇಲಾಖೆಯ ಅನುದಾನದಲ್ಲಿ ಒಂದು ಭಾಗ ಉಪಯೋಗವಾಗುವಂತೆ ಆತ ನೋಡಿಕೊಳ್ಳಬೇಕು.

10) ಭಾರತೀಯ ಔಷಧ ಉದ್ಯಮಗಳು ಸಂಶೋಧನೆಯಲ್ಲಿ ಹೆಚ್ಚಿನ ಹಣ ತೊಡಗಿಸಿರುವ ಕಾರಣ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಆದ್ದರಿಂದ ವಿಶ್ವವಿದ್ಯಾಲಯಗಳು ತೊಡಕಿನ ಕಾರ್ಯವಿಧಾನಗಳನ್ನು ಕಡಿಮೆ ಮಾಡಿ ಸಂಶೋಧನೆಯತ್ತ ಗಮನ ಕೇಂದ್ರೀಕರಿಸಬೇಕು. [ವಿಜ್ಞಾನಿಗಳ ಎದುರು ಪ್ರಣಬ್ ಮುಖರ್ಜಿ ಉಪನ್ಯಾಸ]

modi

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪ್ರತಿವರ್ಷ ನಡೆಸುವ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಜಗತ್ತಿನೆಲ್ಲೆಡೆಯಿಂದ ತಜ್ಞರು ಬಂದು ಪ್ರಬಂಧ ಮಂಡಿಸುತ್ತಾರೆ. ವಿಜ್ಞಾನ ಸಮಾವೇಶವನ್ನು 45 ವರ್ಷಗಳ ನಂತರ ಮುಂಬಯಿಯಲ್ಲಿ ನಡೆಸಲಾಗುತ್ತಿದೆ. ಮುಂಬಯಿಯು ಭಾರತದ ವಾಣಿಜ್ಯ ರಾಜಧಾನಿ ಎನ್ನಿಸಿಕೊಂಡಿದೆ. ಆದ್ದರಿಂದಲೇ ಇಲ್ಲಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

English summary
Prime Minister Narendra Modi inaugurated the 102nd session of Indian Science Congress (ISC) at the University of Mumbai on Saturday. ISC is a five-day event which will see deliberations and presentation of papers by the scientific fraternity from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X