• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟ ಸೋನು ಸೂದ್ ಮಹತ್ಕಾರ್ಯದಲ್ಲಿ ಹುಳುಕು ಹುಡುಕಿದ ಶಿವಸೇನೆ

|
Google Oneindia Kannada News

ಮುಂಬೈ, ಜೂನ್ 7: ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ನೆರವಾದ ನಟ ಸೋನು ಸೂದ್ ಮಹತ್ಕಾರ್ಯದಲ್ಲಿ ಶಿವಸೇನೆ ಹುಳುಕು ಹುಡುಕಿದೆ.

   Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | Oneindia Kannada

   ಸೋನು ಸೂದ್ ಉತ್ತಮ ನಟ, ಎಲ್ಲಾ ಚಿತ್ರಕ್ಕೂ ಬೇರೆ ಬೇರೆ ನಿರ್ದೇಶಕರಿರುತ್ತಾರೆ, ಅವರು ಮಾಡಿದ ಕೆಲಸ ಮೆಚ್ಚುವಂಥದ್ದು, ಆದರೆ ಈ ಕೆಲಸದ ಹಿಂದೆಯೂ ಕೂಡ ಯಾರಾದರೂ ರಾಜಕೀಯ ನಿರ್ದೇಶಕರಿರಬಹುದು ಎಂದು ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.

   ಸೋನು ಸೂದ್ ಕಾರ್ಯಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಚಪ್ಪಾಳೆ ಸೋನು ಸೂದ್ ಕಾರ್ಯಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಚಪ್ಪಾಳೆ

   ಸೋನು ಸೂದ್ ಅವರು ಲಕ್ಷಾಂತರ ವಲಸೆ ಕಾರ್ಮಿಕರನ್ನು ಇತರೆ ರಾಜ್ಯಗಳಲ್ಲಿನ ಅವರ ಮನೆಗಳಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾತ್ಮ ಸೂದ್ ಅವರ ಕೆಲಸಕ್ಕಾಗಿ ಮಹಾರಾಷ್ಟ್ರದ ರಾಜ್ಯಪಾಲರೂ ಪ್ರಶಂಸಿಸಿದ್ದಾರೆ.

   ಸೂದ್ ಅವರ ಈ ಕೆಲಸದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಏನೂ ಮಾಡಿಲ್ಲ ಎಂದು ಬಿಂಬಿಸಿದಂತಾಗುತ್ತದೆ ಎಂದಿರುವ ರಾವತ್ ಲಾಕ್‌ಡೌನ್ ವೇಳೆ ನಟನಿಗೆ ಈ ಬಸ್‌ಗಳು ಎಲ್ಲಿಂದ ದೊರೆತವು ಎಂದು ಪ್ರಶ್ನಿಸಿದ್ದಾರೆ.

   ಮೇ 31 ರಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿದ್ದ ಸೂದ್ ಅವರು ವಲಸೆ ಕಾರ್ಮಿಕರಿಗೆ ಅವರ ರಾಜ್ಯಗಳಿಗೆ ತೆರಳಲು ನೆರವಾಗುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು.

   ವಲಸೆ ಕಾರ್ಮಿಕರ ಪ್ರಯಾಣಕ್ಕೆ ವ್ಯವಸ್ಥೆ, ಆಹಾರ ಒದಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ರಾಜ್ಯಪಾಲರು, ತಾವೂ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು.

   English summary
   Sanjay Raut Mocked that Sonu Sood is a good actor. There is a different director for movies, the work he has done is good but there is a possibility that there is a political director behind it.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion