ಲಾಕ್ ಡೌನ್; ಮುಂಬೈನಲ್ಲಿ ಸಮೋಸ ಪಾರ್ಟಿ ಮಾಡಿದವರ ಬಂಧನ
ಮುಂಬೈ, ಮೇ 19 : ಮುಂಬೈ ಮಹಾನಗರಿ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಪೊಲೀಸರು ಜನರಿಗೆ ಸೋಮವಾರವೇ ಎಚ್ಚರಿಕೆ ಕೊಟ್ಟಿದ್ದರು. ಆದರೂ ಪಾರ್ಟಿ ಮಾಡಿದವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ.
Recommended Video
ಮುಂಬೈನ ಪಂಥ್ ನಗರ ಬಡಾವಣೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಸಮೋಸ ಪಾರ್ಟಿ ಮಾಡಲಾಗಿದೆ. ಹೌಸಿಂಗ್ ಸೊಸೈಟಿಯ ಮುಖ್ಯಸ್ಥ ಮತ್ತು ಪಾರ್ಟಿ ಆಯೋಜನೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲು ಮಾಡಿದ್ದಾರೆ.
ಪಾರ್ಟಿಯಲ್ಲಿ ಪಾಲ್ಗೊಂಡ ಕೆಲವರನ್ನು ಸಹ ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಎಲ್ಲರನ್ನೂ ಬಿಡುಗಡೆ ಮಾಡಲಾಗಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮುಂಬೈ ನಗರ ಕೆಂಪು ಪಟ್ಟಿಯಲ್ಲಿದೆ ಜನ ಸಂದಣಿ ಸೇರುವಂತಹ ಯಾವುದೆ ಕಾರ್ಯಕ್ರಮ ಆಯೋಜನೆ ಮಾಡುವಂತಿಲ್ಲ ಎಂದು ಪೊಲೀಸರು ಸೋಮವಾರ ಎಚ್ಚರಿಕೆ ನೀಡಿದ್ದರು. ಆದರೂ ಸಹ ಸಮೋಸ ಪಾರ್ಟಿ ಆಯೋಜನೆ ಮಾಡಲಾಗಿತ್ತು.
ಮಹಾರಾಷ್ಟ್ರದಲ್ಲಿ ಇದುವರೆಗೂ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 35,058. ಇದುವರೆಗೂ 1249 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬಹಳ ಪ್ರಯತ್ನ ನಡೆಸುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ.
ಮುಂಬೈ ನಗರವೊಂದರಲ್ಲಿಯೇ ಸೋಂಕಿತರ ಸಂಖ್ಯೆ 21,335. ಇದುವರೆಗೂ 757 ಜನರು ಮೃತಪಟ್ಟಿದ್ದಾರೆ. 4ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಯನ್ನು ಇಂದು ಸರ್ಕಾರ ಬಿಡುಗಡೆ ಮಾಡಿದೆ. ಕೆಲವು ಕ್ಷೇತ್ರಕ್ಕೆ ಮಾತ್ರ ವಿನಾಯಿತಿ ನೀಡಿದೆ.
ಮಹಾರಾಷ್ಟ್ರದಿಂದ ಅಕ್ಕ-ಪಕ್ಕದ ರಾಜ್ಯಗಳಿಗೆ ಸಂಚಾರ ನಡೆಸಿದ ಪ್ರಯಾಣಿಕರಿಗೆ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದು ನರೆಯ ರಾಜ್ಯಗಳಿಗೆ ಸಂಕಷ್ಟ ತಂದಿಟ್ಟಿದೆ.












Click it and Unblock the Notifications