ಬಿಜೆಪಿ-ಶಿವಸೇನೆ ಸೀಟು ಹಂಚಿಕೆ: ಮೈತ್ರಿ ಪಕ್ಷಕ್ಕೆ ತೀವ್ರ ಬೇಸರ
ನವದೆಹಲಿ, ಫೆಬ್ರವರಿ 22: ಬಿಜೆಪಿ-ಶಿವಸೇನೆ ಒಂದಾಗಿದ್ದರ ಮೇಲೆ ನಮ್ಮ ತಕರಾರಿಲ್ಲ. ಆದರೆ ಉಭಯ ಪಕ್ಷಗಳೂ ನಮಗಾಗಿ ಒಂದು ಸೀಟನ್ನೂ ನೀಡದಿರುವುದು ತೀವ್ರ ಬೇಸರವನ್ನುಂಟು ಮಾಡಿದೆ ಎಂದು ಎನ್ ಡಿಎ ಮಿತ್ರ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ರಾಮದಾಸ್ ಅಠಾವಳೆ ದೂರಿದ್ದಾರೆ.

ಎನ್ ಡಿ ಎ ಮಿತ್ರಪಕ್ಷವಾಗಿರುವ ಆರ್ ಪಿಐ ಮುಂಬೈ ದಕ್ಷಿಣ-ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಒತ್ತಾಯಿಸಿತ್ತು. ಆದರೆ ಅದಕ್ಕೆ ಬಿಜೆಪಿ ಒಲ್ಲೆ ಎಂದಿದೆ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ಅಠಾವಳೆ ರಾಜ್ಯಸಭಾ ಸದಸ್ಯರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾಗಿರುವ ಅಠಾವಳೆ, ಸೀಟು ಹಂಚಿಕೆಯ ವಿಷಯದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರರದಲ್ಲಿ ಶಿವಸೇನೆ ಮತ್ತು ಬಿಜೆಪಿ ಪಕ್ಷಗಳು ತಮ್ಮ ನಡುವಿನ ವೈಮನಸ್ಯ ಮರೆತು ಸೀಟು ಹಂಚಿಕೆಯನ್ನು ಅಮತಿಮಗೊಳಿಸಿದ್ದು, ಬಿಜೆಪಿ 25, ಶಿವಸೇನೆ 23 ಸೀಟುಗಳಲ್ಲಿ ಕಣಕ್ಕಿಳಿಯುವುದಾಗಿ ತೀರ್ಮಾನಿಸಿವೆ.












Click it and Unblock the Notifications