ಮಹಾರಾಷ್ಟ್ರದಲ್ಲಿ ಎಂಎನ್ಎಸ್ ಸ್ಪರ್ಧೆಯಿಲ್ಲ, ಎನ್ಸಿಪಿಗೆ ಸಾಥ್ ಸಾಧ್ಯತೆ!
ಮುಂಬೈ, ಮಾರ್ಚ್ 18: ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾನ್ ಸೇನಾ(ಎಂಎನ್ಎಸ್) ಈ ಬಾರಿಯಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರಿಸಿದೆ.
ಎಂಎನ್ಎಸ್ ಮುಖಂಡ ಶಿರೀಶ್ ಸಾವಂತ್ ಅವರು ಈ ಕುರಿತಂತೆ ಭಾನುವಾರದಂದು ಸುದ್ದಿಗೋಷ್ಠಿ ನಡೆಸಿ, ವಿವರ ನೀಡಿದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ) ಗೆ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಿದೆ. ಮಾರ್ಚ್ 19ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿರುವ ಎನ್ ಸಿಪಿಗೆ ಎಂಎನ್ಎಸ್ ಸಾಥ್ ನೀಡಲಿದೆ.

ಆದರೆ, ಎಂಎನ್ ಎಸ್ ಬೆಂಬಲ ನೀಡಲು ಮುಂದಾಗಿರುವುದನ್ನು ಎನ್ ಸಿಪಿ ಮಿತ್ರಪಕ್ಷ ಕಾಂಗ್ರೆಸ್ ವಿರೋಧಿಸುತ್ತಿದೆ.
2009ರಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಎಂಎನ್ ಎಸ್, 2014ರಲ್ಲಿ ಒಂದು ಸೀಟು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಂಎನ್ ಎಸ್ ತನ್ನ ಪ್ರಭಾವವನ್ನು ಉಳಿಸಿಕೊಂಡಿತ್ತು.
ಒಂದು ಕಾಲದಲ್ಲಿ ಪ್ರಧಾನಿ ಮೋದಿ ಅವರ ಅಭಿಮಾನಿ, ಬೆಂಬಲಿಗನಾಗಿದ್ದ ರಾಜ್ ಠಾಕ್ರೆ ಅವರು, ಈಗ ಬಿಜೆಪಿ ವಿರೋಧಿಯಾಗಿದ್ದು, ಮತ ಬ್ಯಾಂಕ್ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.












Click it and Unblock the Notifications