ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಪ್ರವಾಹದಂಥ ಮಳೆ: ರೆಡ್ ಅಲರ್ಟ್ ಘೋಷಣೆ

|
Google Oneindia Kannada News

ಮುಂಬೈ, ಜುಲೈ 15: ಮುಂಬೈನಲ್ಲಿ ಪ್ರವಾಹದಂತಹ ಮಳೆ ಆರಂಭವಾಗಿದೆ, ಇಂದು ಬೆಳಗ್ಗೆಯಿಂದ ಮಳೆ ಒಂದೇ ಸಮ ಸುರಿಯುತ್ತಿದೆ.

ಸಾಕಷ್ಟು ಕಡೆ ರಸ್ತೆಗಳಲ್ಲಿ ನೀರು ತುಂಬಿಕೊಂಡು, ವಾಹನ ಸಂಚಾರ ಅಸ್ತವ್ಯಸ್ತವಾಗಿವೆ. ಮುಂಬೈ ಮಹಾನಗರ ಪಾಲಿಕೆಯು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ

ಹವಾಮಾನ ಇಲಾಖೆ ನೀಡಿದ್ದ ಆರೆಂಜ್ ಅಲರ್ಟ್ ಬದಲಾಗಿ ಈಗ ರೆಡ್ ಅಲರ್ಟ್ ಘೋಷಿಸಲಾಗಿದೆ.ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ ಅಧಿಕಾರಿಗಳಿಗೆ ಸಿದ್ಧವಾಗಲು ಕರೆಕೊಟ್ಟಂತಾಗಿದೆ. ಥಾನೆ, ಪಾಲ್ಘರ್ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗಲಿದೆ.

Rain Red Alert In Mumbai

ಸ್ಯಾಟಲೈಟ್ ನೀಡಿರುವ ಚಿತ್ರದ ಪ್ರಕಾರ ಭಾರಿ ಮಳೆಯಾಗುವ ನಿರೀಕ್ಷೆಯಿದೆ.ಮಂಗಳವಾರ ಬೆಳಗ್ಗೆ 8.30ರಿಂದ ಸಂಜೆ 8.30ರವರೆಗೆ 86 ಮಿ.ಮೀನಷ್ಟು ಮಳೆಯಾಗಿದೆ.

64ಮಿ.ಮೀನಿಂದ 115 ಮಿ.ಮೀವರೆಗೆ ಮಳೆಯಾದರೆ ಅದನ್ನು ಅಧಿಕ ಎಂದೂ 115 ಮಿ.ಮೀನಿಂದ 204 ಮಿ.ಮೀ ಮಳೆಯಾದರೆ ಅದನ್ನು ಅತ್ಯಧಿಕ ಎಂದು ಪರಿಗಣಿಸಲಾಗಿದೆ. ಮಂಗಳವಾರ ಕೊಲ್ಹಾಪುರ, ಸತಾರಾ, ಔರಂಗಾಬಾದ್‌ನಲ್ಲಿ ಮಳೆಯಾಗಿದೆ.

English summary
Heavy rain since morning has led to waterlogging in many parts of Mumbai which has been warned of more showers through the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X