ವಿಧಿಯ ಆಟ... ಈ ಯೋಧನಿಗೆ ಕಡೆಯ ಕ್ಷಣದಲ್ಲಿ ರಜಾ ಸಿಗದಿದ್ದರೆ...

Recommended Video

      Pulwama : ಕೊನೆ ಕ್ಷಣದಲ್ಲಿ ಬದುಕುಳಿದ ಮಹಾರಾಷ್ಟ್ರದ ಸಿ ಆರ್ ಪಿ ಎಫ್ ಯೋಧ

      ಮುಂಬೈ, ಫೆಬ್ರವರಿ 19 : ಕಡೆಯ ಕ್ಷಣದಲ್ಲಿ ರಜಾ ಸಿಕ್ಕಿದ್ದರಿಂದ 28 ವರ್ಷದ ಸಿಆರ್‌ಪಿಎಫ್ ಜವಾನ ಠಾಕಾ ಬೇಲ್ಕರ್ ಅವರ ಜೀವ ಉಳಿದಿದೆ. ಇಲ್ಲದಿದ್ದರೆ, ಇವರು ಕೂಡ ಪುಲ್ವಾಮಾದಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ ಒಬ್ಬರಾಗಬೇಕಿತ್ತು.

      ವಿಧಿಯ ಆಟ ಹೇಗಿರುತ್ತೆ ನೋಡಿ. ಒಂದು ವೇಳೆ ಇವರಿಗೆ ರಜಾ ಮಂಜೂರು ಆಗದಿದ್ದರೆ, 60 ಕೆಜಿ ಆರ್ಡಿಎಕ್ಸ್ ಸಿಡಿದಿದ್ದರಿಂದ ಛಿದ್ರಛಿದ್ರವಾದ ವಾಹನದಿಂದ ಕಡೆ ಘಳಿಗೆಯಲ್ಲಿ ಇವರು ಇಳಿದಿರದಿದ್ದರೆ, ಇದೇ ಫೆಬ್ರವರಿ 24ರಂದು ನಡೆಯಲಿರುವ ಅವರ ಮದುವೆಗೆ ಅವರೇ ಇರುತ್ತಿರಲಿಲ್ಲ.

      ಠಾಕಾ ಬೇಲ್ಕರ್ ಅವರಿಗೇನೋ ರಜಾ ಸಿಕ್ಕು ಉಳಿದರು, ಆದರೆ ದುರಾದೃಷ್ಟವಶಾತ್ ತಮ್ಮ ನಲವತ್ತಕ್ಕೂ ಹೆಚ್ಚು ಸಹೋದ್ಯೋಗಿಗಳನ್ನು ಅವರು ಕಳೆದುಕೊಳ್ಳಬೇಕಾಯಿತು. ಅಹ್ಮದ್ ನಗರ ಜಿಲ್ಲೆಯ ಪಾರ್ನರ್ ತಾಲೂಕಿನ ಮೋಸಾಬಾ ಜಾಪ್ ಹಳ್ಳಿ ತಲುಪಿರುವ ಅವರು ಈ ಆಘಾತದಿಂದ ಹೊರಬರಲು ಇನ್ನೂ ಕಷ್ಟಪಡುತ್ತಿದ್ದಾರೆ, ಯಾರೊಂದಿಗೂ ಮಾತನಾಡುತ್ತಿಲ್ಲ ಎಂದು ಅವರ ಮನೆಯವರು ಹೇಳುತ್ತಾರೆ.

      Pulwama attack : Last minute leave saves CRPF jawan from Maharashtra

      ಕಳೆದ ಗುರುವಾರ, ಜಮ್ಮುವಿನಿಂದ ಶ್ರೀನಗರಕ್ಕೆ ಹೊರಟಿದ್ದ 2,500 ಕೇಂದ್ರ ಪೊಲೀಸ್ ಮೀಸಲು ಪಡೆಯ ಜವಾನರೊಂದಿಗೆ ಬೇಲ್ಕರ್ ಅವರು ಕೂಡ ಹೊರಟಿದ್ದರು. 78 ಬಸ್ಸುಗಳಲ್ಲಿ ಅವರೆಲ್ಲ ಪ್ರಯಾಣ ಬೆಳೆಸುತ್ತಿದ್ದರು. ಹುತಾತ್ಮರಾದ ಜವಾನರ ಬಸ್ಸನ್ನೂ ಬೇಲ್ಕರ್ ಹತ್ತಿ ಕುಳಿತಿದ್ದರು. ಬಸ್ಸು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ರಜಾ ಮಂಜೂರಾದ ಸುದ್ದಿ ಅವರಿಗೆ ಗೊತ್ತಾಗಿ, ಆ ಬಸ್ಸಿನಿಂದ ಇಳಿದುಕೊಂಡಿದ್ದಾರೆ.

      ಬೇಲ್ಕರ್ ಅವರಿಗೆ ಮದುವೆ ನಿಗದಿಯಾಗಿದ್ದರಿಂದ ಅವರನ್ನು ಅಭಿನಂದಿಸಿ, ಅವರನ್ನು ಆಲಂಗಿಸಿ ಸಹೋದ್ಯೋಗಿ ಸ್ನೇಹಿತರೆಲ್ಲ ಬೀಳ್ಕೊಟ್ಟರು. ಎಲ್ಲರೂ ಹೋ ಎಂದು ಹರ್ಷೋದ್ಘಾರ ಮಾಡಿ ಬೇಲ್ಕರ್ ಅವರಿಗೆ ಶುಭಾಶಯ ಕೋರಿದರು. ಆದರೆ, ಅದು ಆ ಸಹೋದ್ಯೋಗಿಗಳೊಂದಿಗೆ ಕಡೆಯ ಬೀಳ್ಕೊಡುಗೆ, ಕಡೆಯ ಆಲಿಂಗನವಾಗುತ್ತದೆಂದು ಅವರು ಕನಸು ಮನಸ್ಸಿನಲ್ಲಿಯೂ ನೆನೆಸಿರಲಿಲ್ಲ.

      Pulwama attack : Last minute leave saves CRPF jawan from Maharashtra

      ಹೆಗಲಿಗೆ ಬ್ಯಾಗ್ ಹಾಕಿಕೊಂಡು ಇಳಿದ ಬೇಲ್ಕರ್ ಅವರು ಬೇಸ್ ಕ್ಯಾಂಪ್ ಗೆ ಬಂದು, ಲಗೇಜುಗಳನ್ನು ಎತ್ತಿಕೊಂಡು ಇನ್ನೇನು ಹೊರಡುವವರಿದ್ದರು, ಅಷ್ಟರಲ್ಲಿ ಆ ದುರಾದೃಷ್ಟಕರ ಬಸ್ ಮತ್ತು ಅದರಲ್ಲಿ ಕುಳಿತಿದ್ದ ನಲವತ್ತಕ್ಕೂ ಹೆಚ್ಚು ಸಹೋದ್ಯೋಗಿಗಳು ಛಿದ್ರಿಛಿದ್ರವಾದ ಸುದ್ದಿ ಅವರು ತಲುಪಿತು. ಅವರೇನೋ ತಮ್ಮೂರಿಗೆ ತಲುಪಿದರು, ಆದರೆ ಉಳಿದವರೆಲ್ಲ ಮರಳಿಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

      ನನ್ನ ಮಗ ಸುರಕ್ಷಿತವಾಗಿ ವಾಪಸ್ ಬಂದಿದ್ದಾನೆಂದು ನನಗೆ ಸಂತೋಷವಾಗುತ್ತಿಲ್ಲ. ಆ ದುರ್ಘಟನೆಯಲ್ಲಿ ಹುತಾತ್ಮರಾದ ಎಲ್ಲ ಯೋಧರು ಕೂಡ ನನ್ನ ಮಕ್ಕಳೆ ಎಂದು ರೈತರಾಗಿರುವ ಬೇಲ್ಕರ್ ಅವರ ಅಪ್ಪ ಬಾಬಾಜಿ ಅವರು ಗದ್ಗದಿತರಾಗುತ್ತಾರೆ. ಫೆಬ್ರವರಿ 24ರಂದು ಠಾಕಾ ಬೇಲ್ಕರ್ ಅವರ ಲಗ್ನ ನಡೆಯಲಿದ್ದು, ನಂತರ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ದೇಶ ಸೇವೆಗೆಂದು ಮರಳಲಿದ್ದಾರೆ. ಈ ದೇಶದ ಜನರಿಗಾಗಿ ದುಡಿಯುತ್ತಿರುವ ಈ ಯೋಧರಿಗೊಂದು ಸೆಲ್ಯೂಟ್.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+