ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಗರ್ಭಿಣಿಯರಿಗೂ ಕೊರೊನಾ ಲಸಿಕೆ ವಿತರಣೆ ಆರಂಭ

|
Google Oneindia Kannada News

ಮುಂಬೈ, ಜುಲೈ 15: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೂ ಲಸಿಕೆ ನೀಡಲು ಮುಂದಾಗಿದೆ.

ಹೌದು, ಈಗಾಗಲೇ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲಾಗಿತ್ತು, ಈ ಬಾರಿ ಗರ್ಭಿಣಿಯರಿಗೂ ಲಸಿಕೆ ನೀಡಲಾಗುತ್ತಿದೆ.

ಕೊರೊನಾ ಲಸಿಕೆ; ಗರ್ಭಿಣಿಯರ ಆರೋಗ್ಯದ ಕುರಿತು ಎಚ್ಚರಿಕೆ ಕೊಟ್ಟ ಕೇಂದ್ರಕೊರೊನಾ ಲಸಿಕೆ; ಗರ್ಭಿಣಿಯರ ಆರೋಗ್ಯದ ಕುರಿತು ಎಚ್ಚರಿಕೆ ಕೊಟ್ಟ ಕೇಂದ್ರ

ಬೃಹನ್ ಮುಂಬೈ ಮಹಾನಗರದ ಪೌರಾಡಳಿತವು ಗರ್ಭಿಣಿಯರಿಗೆ ಕೊವಿಡ್​-19 ಲಸಿಕೆ ನೀಡುವ ವಿಶೇಷ ಆಭಿಯಾನವನ್ನು ಗುರುವಾರದಿಂದ ಆರಂಭಿಸಿದೆ.

ಈ ಕುರಿತು ಭಾರತದ ವೈದ್ಯಕೀಯ ಸಂಶೋಧನೆ ಕೌನ್ಸಿಲ್​ನ ಮಹಾ ನಿರ್ದೇಶಕ ಡಾ ಬಲರಾಮ ಭಾರ್ಗವ ಅವರು ಮಾತನಾಡಿ, 'ಆರೋಗ್ಯ ಸಚಿವಾಲಯವು, ಗರ್ಭಿಣಿರಿಗೆ ಲಸಿಕೆ ನೀಡಬಹುದಾದ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅವರಿಗೆ ಲಸಿಕೆ ಪ್ರಯೋಜನಕಾರಿಯಾಗಿದೆ ಮತ್ತು ಅದನ್ನು ನೀಡಲೇಬೇಕು ಎಂದು ಹೇಳಿದ್ದರು.

 ಗರ್ಭಿಣಿಯರ ಮೇಲೆ ಲಸಿಕೆ ಪ್ರಯೋಗಗಳು ನಡೆದಿಲ್ಲ

ಗರ್ಭಿಣಿಯರ ಮೇಲೆ ಲಸಿಕೆ ಪ್ರಯೋಗಗಳು ನಡೆದಿಲ್ಲ

ಗರ್ಭಿಣಿಯರ ಮೇಲೆ ಇದುವರೆಗೆ ಯಾವುದೇ ಕ್ಲಿನಿಕಲ್ ಪ್ರಯೋಗಗಳು ನಡೆದಿಲ್ಲ ಮತ್ತು ಅವರಿಗೆ ಲಸಿಕೆ ನೀಡದರೆ ಆಗಬಹದಾದ ಅಡ್ಡ ಪರಿಣಾಮಗಳು ಮತ್ತು ಅದು ಅವರಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲದ ಕಾರಣ ಅವರನ್ನು ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು.

 ಲಸಿಕೆ ನೀಡುವ ಕುರಿತು ಹಲವು ಟೀಕೆ

ಲಸಿಕೆ ನೀಡುವ ಕುರಿತು ಹಲವು ಟೀಕೆ

ಮೇ ತಿಂಗಳವರೆಗೆ ಎದೆ ಹಾಲುಣಿಸುವ ಮಹಿಳೆಯರು ಲಸಿಕೆ ಪಡೆಯಲು ಅರ್ಹರು ಎಂದಾದರೆ ಗರ್ಭಿಣಿಯರು ಏಕೆ ಅಲ್ಲ ಎನ್ನುವ ಟೀಕೆ ಕೇಳಿಬಂದಿತ್ತು. ಮುಂಬೈ ಮಹಾನಗರದಲ್ಲಿ ಬುಧವಾರದವರೆಗೆ ಒಟ್ಟು 62,33,629 ಡೋಸ್ ಕೊರೊನವೈರಸ್ ಲಸಿಕೆ ನೀಡಲಾಗಿದ್ದು, ಈ ಪೈಕಿ 13,68,580 ಫಲಾನುಭವಿಗಳು ಎರಡನೇ ಡೋಸ್ ಪಡೆದಿದ್ದಾರೆ ಎಂದು ಬಿಎಂಸಿ ತಿಳಿಸಿದೆ.

ಪ್ರಸ್ತುತ, ಮುಂಬೈ 407 ಸಕ್ರಿಯ ಸಿಒವಿಐಡಿ -19 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹೊಂದಿದ್ದು, ಬಿಎಂಸಿಯ 286, ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವ 20 ಮತ್ತು 101 ಖಾಸಗಿ ಲಸಿಕಾ ಕೇಂದ್ರಗಳಿವೆ ಎನ್ನಲಾಗಿದೆ.

 ಆರೋಗ್ಯ ಸಚಿವಾಲಯದ ನಿಲುವು ಬದಲು

ಆರೋಗ್ಯ ಸಚಿವಾಲಯದ ನಿಲುವು ಬದಲು

ಜೂನ್​ನಲ್ಲಿ ನಿಲುವು ಬದಲಿಸಿದ ಕೇಂದ್ರ ಆರೋಗ್ಯ ಸಚಿವಾಲಯವು, ಗರ್ಭಿಣಿಯರು ಲಸಿಕೆಯನ್ನು ಹಾಕಿಸಿಕೊಳ್ಳಲೇ ಬೇಕು ಎಂದು ಹೇಳಿತು. ಮಾರಣಾಂತಿಕ ಸೋಂಕಿನಿಂದ ಲಸಿಕೆ ಮೂಲಕ ರಕ್ಷಣೆ ಪಡೆಯುವ ಅಧಿಕಾರ ಮತ್ತು ಹಕ್ಕು ಅವರಿಗಿದೆಯೆಂದು ಇಲಾಖೆ ಹೇಳಿತ್ತು.

 ಒಂದೇ ಲಸಿಕಾ ಕೇಂದ್ರ

ಒಂದೇ ಲಸಿಕಾ ಕೇಂದ್ರ

ಈ ಅಭಿಯಾನವು ನಗರದಾದ್ಯಂತ ಇರುವ 35 ಲಸಿಕಾ ಕೇಂದ್ರಗಳ ಪೈಕಿ ಒಂದರಲ್ಲಿ ಆರಂಭವಾಗಲಿದೆ. ಅದಕ್ಕಾಗಿ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ ಎನ್ನಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಅಂಶ ಹಲವಾರು ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಶಿವ ಸೇನೆ ಪಕ್ಷದ ಸಂಸದೆ ಪ್ರಿಯಾಂಕಾ ಚತುರ್ವೇದಿ ಮುನ್ನೆಲೆಗೆ ತಂದಿದ್ದರು. ಈ ಹಿಂದೆ ಮಾತಾಡಿದ್ದ ಪ್ರಿಯಾಂಕಾ ಅವರು, 'ಕೇವಲ ಜೈವಿಕ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಗರ್ಭಿಣಿಯರು ಯಾಕೆ ಲಸಿಕೆ ಹಾಕಿಸಿಕೊಳ್ಳುವುದರಿಂದ ತಡೆಯಬೇಕು,' ಎಂದು ಪ್ರಶ್ನಿಸಿದ್ದರು.

English summary
Brihanmumbai Municipal Corporation (BMC) will be starting a special drive from Thursday to vaccinate pregnant women against Covid-19. BMC has announced that the drive will take place at 35 public centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X