ಪ್ರತ್ಯೂಷಾ ಆತ್ಮಹತ್ಯೆ ಪ್ರಕರಣ: ರಾಹುಲ್ ರಾಜ್ ವಿರುದ್ಧ ಎಫ್ಐಆರ್

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 05: ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬಾಲಿಕಾ ವಧು' ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆಸಂಬಂಧಿಸಿದಂತೆ ಆಕೆಯ ಗೆಳೆಯ ರಾಹುಲ್ ರಾಜ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ.

24ವರ್ಷ ವಯಸ್ಸಿನ ನಟಿ ಪ್ರತ್ಯೂಷಾ ಅವರು ಗರ್ಭಿಣಿಯಾಗಿದ್ದರು ಎಂಬ ಅನುಮಾನ ಕಾಡುತ್ತಿರುವ ಬೆನ್ನಲ್ಲೆ ಈ ಬೆಳವಣಿಗೆ ಮಂಗಳವಾರ ಕಂಡು ಬಂದಿದೆ. ಮುಂಬೈನ ಬಂಗೂರ್ ನಗರ ಪೊಲೀಸರು ಆರೋಪಿ ರಾಹುಲ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 306, 351, 504, 506, 323 ಅನ್ವಯ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

Pratyusha Banerjee suicide case: Rahul Raj Singh booked

ಸದ್ಯ ಅನಾರೋಗ್ಯ ಪೀಡಿತರಾಗಿ, ಆಘಾತಕ್ಕೊಳಗಾಗಿ ಆಸ್ಪತ್ರೆ ಸೇರಿರುವ ರಾಹುಲ್ ರಾಜ್ ರನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ, 5 ರಿಂದ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rahul Raj Singh,, boy friend of Pratyusha Banerjee has been booked by Bangur police, Mumbai under section 306 (abetment of suicide) of Indian Penal Code (IPC). The accused is now hospitalised
Please Wait while comments are loading...