• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈನಲ್ಲಿ ಸಂಪೂರ್ಣ ವಿದ್ಯುತ್ ಕಡಿತ, ಜನಜೀವನ ಅಸ್ತವ್ಯಸ್ತ

|

ಮುಂಬೈ, ಅ. 12: ಭಾರತದ ವಾಣಿಜ್ಯ ನಗರಿ ಮುಂಬೈನ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್)ದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಪೂರ್ಣ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಇನ್ಪುಟ್ ಸಿಗದ ಕಾರಣ ಪೂರೈಕೆ ಇಲ್ಲದ್ದಂತಾಗಿದೆ. ಟಾಟಾ ಸಂಸ್ಥೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಇದರಿಂದ ಮುಂಬೈನ ಬಹುತೇಕ ಕಡೆಗಳಲ್ಲಿ ವಿದ್ಯುತ್ ಇಲ್ಲವಾಗಿದೆ.

ಮುಂಬೈ ದಕ್ಷಿಣ, ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೃಹನ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಪೂರೈಕೆ ಸಂಸ್ಥೆ(BEST) ಹಾಗೂ ಟಾಟಾ ಸಂಸ್ಥೆಯಿಂದ ಮುಂಬೈನ ಮೆಟ್ರೋಪಾಲಿಟನ್ ಪ್ರದೇಶ(ಎಂಎಂಆರ್)ಕ್ಕೆ ವಿದ್ಯುತ್ ಪೂರೈಕೆ ಯಾಗುತ್ತದೆ. ಆದರೆ, ವಿದ್ಯುತ್ ಇನ್ಪುಟ್ ಸಿಗದ ಕಾರಣ ಪೂರೆಕೆ ಮಾಡಲು ಆಗುತ್ತಿಲ್ಲ, ಇದಕ್ಕಾಗಿ ವಿಷಾದಿಸುತ್ತೇವೆ ಎಂದು ಸಂಸ್ಥೆ ಹೇಳಿದೆ.

ಕೇಂದ್ರ ರೈಲ್ವೆ ವಿಭಾಗದ ಮುಖ್ಯ ಪಬ್ಲಿಕ್ ರಿಲೇಷನ್ ಅಧಿಕಾರಿ(ಸಿಪಿಆರ್ ಒ) ಅವರು ಈ ಬಗ್ಗೆ ಪ್ರತಿಕ್ರಿಯೆ, ಸಬ್ ಅರ್ಬನ್ ಟ್ರೈನ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಚರ್ಚ್ ಗೇಟ್ ಹಾಗೂ ವಾಸಿ ನಡುವೆ ಸ್ಥಳೀಯ ರೈಲು ಸಂಚಾರ ವ್ಯತ್ಯಯವಾಗಿದೆ ಎಂದು ಪಶ್ಚಿಮ ರೈಲ್ವೆ ವಕ್ತಾರರು ಹೇಳಿದ್ದಾರೆ.

      ಹಿಂದು ದೇವಸ್ಥಾನ ಹೊಡಿಯೋ ಅಂತ ಕೆಟ್ಟ ಮನಸ್ಸು ಯಾಕೆ?? | Oneindia Kannada

      ಅಂಧೇರಿ, ಬಾಂದ್ರಾ, ಕಂಡಿವಲಿ, ಮುಳುಂದ, ವಾಸಿ ಹಾಗೂ ಥಾಣೆ ಪ್ರದೇಶಗಳು ಹೆಚ್ಚು ಬಾಧಿತವಾಗಿದೆ. ಅನೇಕ ನಿವಾಸಿಗಳು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

      English summary
      Many parts of the Mumbai Metropolitan Region (MMR) today facing a major power outage starting around 10.00 am today(Oct 12).
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X