ನೀರವ್ ಮೋದಿ ವಿರುದ್ಧ ಕೇಸು ದಾಖಲಿಸಿದ ಪ್ರಿಯಾಂಕಾ

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 15 : ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಆಭರಣ ವಿನ್ಯಾಸಗಾರ ನೀರವ್ ಮೋದಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಜನಪ್ರಿಯ ನಟಿ ಪ್ರಿಯಾಂಕಾ ಛೋಪ್ರಾ ಅವರು ತಮಗೆ ಮೋದಿಯಿಂದ ಇನ್ನೂ ಬಾಕಿ ಮೊತ್ತ ಸಿಕ್ಕಲ್ಲವೆಂದು ಹೇಳಿ, ಕೇಸು ದಾಖಲಿಸಿದ್ದಾರೆ.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ನೀರವ್ ಮೋದಿ ಒಡೆತನದ ಜ್ಯುವೆಲರಿ ಬ್ರಾಂಡ್ ಒಂದರ ಜಾಹೀರಾತಿನಲ್ಲಿ ಪ್ರಿಯಾಂಕಾ ನಟಿಸಿದ್ದರು. ಆದರೆ, ಈವರೆಗೂ ಬಾಕಿ ಮೊತ್ತ ಪಾವತಿಸಿಲ್ಲ. ಒಪ್ಪಂದದ ಪ್ರಕಾರ ಹಣ ಪಾವತಿಸದ ನೀರವ್ ಮೋದಿ ವಿರುದ್ಧ ಪ್ರಿಯಾಂಕಾ ವಂಚನೆ ಕೇಸ್ ದಾಖಲಿಸಿದ್ದಾರೆ.

PNB Scam Priyanka Chopra sues Nirav Modi for not Paying her a Dimond Advertisement

ಈ ಜಾಹೀರಾತಿನಲ್ಲಿ ಪ್ರಿಯಾಂಕಾ ಜೊತೆಗೆ ಸಿದ್ದಾರ್ಥ್ ಮಲ್ಹೋತ್ರಾ ನಟಿಸಿದ್ದರು. ಅವರಿಗೆ ಸಹ ಬಾಕಿ ಹಣ ಬರಬೇಕಾಗಿದ್ದು, ಕಾನೂನು ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೂರು ಜಾಹೀರಾತು ಚಿತ್ರೀಕರಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದ್ರೆ ಒಂದು ಜಾಹೀರಾತನ್ನು ಮಾತ್ರ ಶೂಟ್ ಮಾಡಲಾಗಿದೆ.

ಹೆಚ್ಚಿನ ನೀರವ್ ಮೋದಿ ವಂಚನೆಗಳು ನಡೆದಿದ್ದು 2017-18ರಲ್ಲಿ: ಸಿಬಿಐ!

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಕೂಡಾ ಆರೋಪಿ.

ನೀರವ್ ವಿರುದ್ಧ ಎರಡು ವಾರಗಳ ಹಿಂದೆ ಪಿಎನ್ ಬಿ ದೂರು ನೀಡಿತ್ತು. ದೂರು ನೀಡಿದ ಮರು ದಿನವೇ ನೀರವ್ ನಾಪತ್ತೆಯಾಗಿರುವ ಸುದ್ದಿ ಬಂದಿದೆ. ಸದ್ಯ ನೀರವ್ ವಿರುದ್ಧ ಲುಕ್ ಔಟ್ ನೋಟಿಸ್ ನೀಡಲಾಗಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 280 ಕೋಟಿ ರೂ.ಗಳ ಅವ್ಯವಹಾರ ಮಾಡಿರುವ ಆರೋಪದ ಹೊತ್ತಿರುವ ನೀರವ್ ಮೋದಿ ಅವರ ಮನೆ, ಕಚೇರಿ ಮೇಲೆ ಗುರುವಾರದಂದು ದಾಳಿ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PNB Scam Priyanka Chopra sues Nirav Modi for not Paying her a Dimond Advertisement.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X