ಮುಂಬೈನಲ್ಲಿ ರಾಜ್ ಠಾಕ್ರೆ ಪತ್ನಿಯನ್ನು ಕಚ್ಚಿದ 'ಬಾಂಡ್'
ಮುಂಬೈ, ಆಗಸ್ಟ್ 19: ಮುದ್ದಿನಿಂದ ಸಾಕಿದ ನಾಯಿಗೆ 'ಬಾಂಡ್' ಎಂದು ಇಂಗ್ಲೀಷ್ ಹೆಸರಿಟ್ಟ ರಾಜ್ ಠಾಕ್ರೆ ಅವರು ಈಗ ಪತ್ನಿ ಪಕ್ಕದಲ್ಲಿ ಕುಳಿತು ಆರೈಕೆ ಮಾಡುತ್ತಿದ್ದಾರೆ. ನೆಚ್ಚಿನ ನಾಯಿ ತನ್ನ ಒಡತಿಯ ಮುಖವನ್ನು ಸ್ಕ್ರಾಪ್ ಮಾಡಿಬಿಟ್ಟಿದೆ. ರಾಜ್ ಠಾಕ್ರೆ ಪತ್ನಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮಹಾರಾಷ್ಟ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪತ್ನಿ ಶರ್ಮಿಳಾ ಅವರು ಸಾಕಿರುವ ನಾಯಿಯೇ ಅವರನ್ನು ಕಚ್ಚಿದ ಘಟನೆ ಮಂಗಳವಾರ ನಡೆದಿದೆ. ರಾಜ್ ಠಾಕ್ರೆ ದಂಪತಿಗಳಿಗೆ ನಾಯಿಗಳೆಂದರೆ ಇಷ್ಟ. ಒಂದು ನಾಯಿಗೆ ಮುದ್ದಿನಿಂದ 'ಬಾಂಡ್' ಎಂದು ಹೆಸರಿಟ್ಟಿದ್ದರು. ಗಂಭೀರ ಸ್ವಭಾವದ ಈ ನಾಯಿಗೆ ಈ ರೀತಿ ಕರೆಯುತ್ತಿದ್ದಾರಂತೆ.
ಮಂಗಳವಾರ ತಮ್ಮ ಮನೆಯಲ್ಲಿ ಯಾವುದೋ ಸುದ್ದಿಗೋಷ್ಠಿಗೆ ರಾಜ್ ಠಾಕ್ರೆ ತಯಾರಾಗುವ ವೇಳೆಗೆ ಮನೆಯೊಳಗಿಂದ ಚೀತ್ಕಾರ ಕೇಳಿ ಬಂದಿದೆ. ಒಳಗೆ ಬಂದು ನೋಡಿದರೆ ಶರ್ಮಿಳಾ ಅವರ ಮುಖ ಮೂತಿಯನ್ನು 'ಬಾಂಡ್' ಕಚ್ಚಿ ಹಾಕಿದ್ದು ಕಂಡು ಬಂದಿದೆ. ತಕ್ಷಣವೇ ಶರ್ಮಿಳಾ ಅವರನ್ನು ಹಿಂದೂಜಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸುದ್ದಿಗೋಷ್ಠಿಯನ್ನು ಚುಟುಕಾಗಿ ಮುಗಿಸಿದ ರಾಜ್ ಠಾಕ್ರೆ ನಂತರ ಆಸ್ಪತ್ರೆಗೆ ತೆರಳಿದ್ದಾರೆ. ಶರ್ಮಿಳಾ ಅವರ ಮುಖಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಮುಖದ ಮೂಳೆಗಳಿಗೆ ಹಾನಿಯಾಗುವಷ್ಟು ಆಳಕ್ಕೆ ನಾಯಿಯ ಹಲ್ಲಿನ ಗುರುತು ಕಂಡು ಬಂದಿತ್ತು ಎಂದು ವೈದ್ಯರು ಹೇಳಿದ್ದಾರೆ.

ಶರ್ಮಿಳಾಗೆ ಶಸ್ತ್ರ ಚಿಕಿತ್ಸೆ ಯಶಸ್ವಿ
ಬುಧವಾರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ಈಗ ಶರ್ಮಿಳಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ.ಮುಖ ಹಾಗೂ ಗಲ್ಲ ಎರಡು ಸೇರಿ 65ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ಪ್ಲಾಸ್ಟಿಕ್ ಸರ್ಜರಿ ಯಶಸ್ವಿಯಾಗಿದೆ ಎಂದು ಹಿಂದೂಜಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ರಾಜ್ ಠಾಕ್ರೆ ಅವರ ಮನೆಯಲ್ಲಿ ಜೇಮ್ಸ್ ಹಾಗೂ ಬಾಂಡ್
ಅಂದ ಹಾಗೆ, ರಾಜ್ ಠಾಕ್ರೆ ಅವರ ಮನೆಯಲ್ಲಿ ಜೇಮ್ಸ್ ಹಾಗೂ ಬಾಂಡ್ ಎಂಬ ಹೆಸರಿನ ಎರಡು ನಾಯಿಗಳಿವೆ. ಜೊತೆಗೆ ಇನ್ನೂ ವಿವಿಧ ತಳಿ ನಾಯಿಗಳನ್ನು ಸಾಕಿದ್ದಾರೆ.
|
ಶರ್ಮಿಳಾ ಅವರ ಚೇತರಿಕೆಗೆ ಹಾರೈಕೆ
ಶರ್ಮಿಳಾ ಅವರ ಚೇತರಿಕೆಗೆ ಶುಭ ಹಾರೈಕೆ ಟ್ವೀಟ್ ಮಾಡಿದ ಸಾರ್ವಜನಿಕರು.
|
ಶರ್ಮಿಳಾಗೆ ನಾಯಿ ಕಚ್ಚಿದ ಸುದ್ದಿ ಟ್ವೀಟ್ಸ್
ಶರ್ಮಿಳಾಗೆ ನಾಯಿ ಕಚ್ಚಿದ ಸುದ್ದಿ ಟ್ವೀಟ್ಸ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ವಿವಿಧ ಕೋನಗಳಿಂದ ಚರ್ಚೆಗೊಳಗಾಗಿದೆ.
|
ಹೌದು ಆ ನಾಯಿ ಬಿಹಾರ ಮೂಲದ್ದಿರಬೇಕು?
ಹೌದು ಆ ನಾಯಿ ಬಿಹಾರ ಮೂಲದ್ದಿರಬೇಕು? ಎಂದು ಹಾಸ್ಯ ಮಾಡಿದ ಕೆಲವರು.
|
ಮುಂಬೈನಲ್ಲಿ ರಾಜ್ ಠಾಕ್ರೆ ಪತ್ನಿಗೆ ನಾಯಿಕಡಿತ
ಮುಂಬೈನಲ್ಲಿ ರಾಜ್ ಠಾಕ್ರೆ ಪತ್ನಿಗೆ ನಾಯಿಕಡಿತ ಶರ್ಮಿಳಾಗೆ ಆಸ್ಪತ್ರೆಗೆ. ಅದೇ ರಾಜ್ ಠಾಕ್ರೆಗೆ ಕಚ್ಚಿದ್ದರೆ ನಾಯಿ ಆಸ್ಪತ್ರೆಗೆ ಹೋಗುತ್ತಿತ್ತು.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications