ಪಪ್ಪು ಬನ್ ಗಯಾ ಪಪ್ಪಾ: ಕೇಂದ್ರ ಸಚಿವರಿಂದ ರಾಹುಲ್ ಗುಣಗಾನ
Recommended Video

ಮುಂಬೈ, ಡಿಸೆಂಬರ್ 17: 'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೀಗ 'ಪಪ್ಪು' ಆಗಿ ಉಳಿದಿಲ್ಲ. ಅವರೀಗ 'ಪಪ್ಪಾ' ಆಗಿದ್ದಾರೆ' ಎಂದು ಕೇಂದ್ರ ಸಚಿವ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಆರ್ ಪಿಐ) ಮುಖ್ಯಸ್ಥ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಮೋಘ ಜಯ ಗಳಿಸಿರುವ ಕುರಿತು ಮಾತನಾಡಿದ ಅವರು, 'ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಸಂಬೋಧಿಸಲಾಗುತ್ತಿತ್ತು. ಆದರೆ ಅವರು ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ ನಂತರ ಪಪ್ಪು ಆಗಿ ಉಳಿದಿಲ್ಲ. ಕಾಂಗ್ರೆಸ್ಸಿಗೆ 'ಪಪ್ಪಾ' ಆಗಿದ್ದಾರೆ' ಎಂಡು ಅಠಾವಳೆ ರಾಹುಲ್ ಗಾಂಧಿ ಅವರ ಗುಣಗಾನ ಮಾಡಿದರು.
ಈ ಮೂರು ರಾಜ್ಯಗಳ ಸೋಲಿಗೆ ಪ್ರಶಾನಿ ನರೇಂದ್ರ ಮೋದಿಯವರು ಕಾರಣವಲ್ಲ. ಬಿಜೆಪಿ ಕಾರಣ ಎಂದು ಅಠಾವಳೆ ದೂರಿದರು. ಎನ್ ಡಿಎ ಮೈತ್ರಿ ಸರ್ಕಾರದೊಂದಿಗೆ ಗುರುತಿಸಿಕೊಂಡಿರುವ ಅಠಾವಳೆ ಕೇಂದ್ರ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರು.

"ಎನ್ ಡಿಎ ಜೊತೆ ಮೈತ್ರಿ ಮಾಡಿಕೊಳ್ಳದಿದ್ದರೆ ಅದು ಶಿವಸೇನೆಗೆ ಭಾರೀ ನಷ್ಟವನ್ನುಂಟು ಮಾಡಲಿದೆ. ಅದರಿಂದ ಬಿಜೆಪಿಗೆ ಯಾವುದೇ ನಷ್ಟವಾಗುವುದಿಲ್ಲ" ಎಂದು ಅವರು ಹೇಳಿದರು.
'ಶಿವಸೇನಾ ಮುಖಂಡ ಉದ್ಧವ್ ಠಾಕ್ರೆಯವರು ಶಿವಸೇನೆಯ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಕನಸನ್ನು ನನಸಾಗಿಸಬೇಕು. ಬಿಜೆಪಿಯನ್ನು ಬಿಟ್ಟು ಒಂಟಿಯಾಗಿ ಹೋದರೆ ಅದು ಸಾಧ್ಯವಿಲ್ಲ' ಎಂದು ಅಠಾವಳೆ ಹೇಳಿದರು.












Click it and Unblock the Notifications