ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ನಿಯಮ: ಮುಂಬೈನಲ್ಲಿ ಹೋಮ್ ಕ್ವಾರೆಂಟೇನ್ ಆದವರಿಗೆ ದಿನಕ್ಕೆ 5 ಬಾರಿ ಫೋನ್!

|
Google Oneindia Kannada News

ಮುಂಬೈ, ಡಿಸೆಂಬರ್ 4: ಕೋವಿಡ್-19 ಹೊಸ ರೂಪಾಂತರದ ಓಮಿಕ್ರಾನ್‌ನ ಆತಂಕ ಹೆಚ್ಚುತ್ತಿರುವ ಹಿನ್ನೆಲೆ ಗ್ರೇಟರ್ ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್ (MCGM) 'ಅಪಾಯದಲ್ಲಿರುವ' ದೇಶಗಳಿಂದ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿ ವಿಶಿಷ್ಟ ಹಾಗೂ ಕಟ್ಟುನಿಟ್ಟಿನ ಹೋಮ್ ಕ್ವಾರೆಂಟೇನ್ ಮೇಲ್ವಿಚಾರಣೆ ಕಾರ್ಯವಿಧಾನವನ್ನು ರೂಪಿಸಿದೆ.

ಮುಂಬೈನಲ್ಲಿ ಹೋಮ್ ಕ್ವಾರಂಟೈನ್ ಅನ್ನುವುದು ಸಾಂಸ್ಥಿಕ ಕ್ವಾರಂಟೈನ್‌ನಷ್ಟೇ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಕೊರೊನಾವೈರಸ್ ಮೊದಲ ಅಲೆಯ ಸಂದರ್ಭದಲ್ಲಿ ಮುಂಬೈನ ಪ್ರತಿ ಸಿವಿಕ್ ವಾರ್ಡ್‌ನಲ್ಲಿ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುವ 'ವಾರ್ಡ್ ವಾರ್ ರೂಮ್ ಅನ್ನು ಸ್ಥಾಪಿಸಲಾಗಿತ್ತು. ಈ ಕೇಂದ್ರಗಳಿಂದ ಹೋಮ್ ಕ್ವಾರೆಂಟೇನ್ ನಲ್ಲಿರುವ ಸೋಂಕಿತರ ಆರೋಗ್ಯದ ಕುರಿತು ಆಗಾಗ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು.

ಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಖಡಕ್ ಎಚ್ಚರಿಕೆಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಖಡಕ್ ಎಚ್ಚರಿಕೆ

ಹೊಸ ಮಾರ್ಗಸೂಚಿಗಳ ಪ್ರಕಾರ, ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಪ್ರತಿದಿನ ದಕ್ಷಿಣ ಆಫ್ರಿಕಾ ಅಥವಾ ಓಮಿಕ್ರಾನ್ ಹೊಸ ರೂಪಾಂತರ 'ಅಪಾಯದಲ್ಲಿರುವ' ದೇಶಗಳಿಂದ ಆಗಮಿಸುವ ಪ್ರಯಾಣಿಕರ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸುತ್ತದೆ. ನಂತರ ವಿಪತ್ತು ನಿರ್ವಹಣಾ ತಂಡವು ಈ ಎಲ್ಲಾ ಪ್ರಯಾಣಿಕರನ್ನು ಟ್ರ್ಯಾಕ್ ಮಾಡುತ್ತದೆ. ಹೀಗೆ ಹುಡುಕಿನ ನಂತರದಲ್ಲಿ ಅವರನ್ನು ಏಳು ದಿನಗಳವರೆಗೂ ಹೋಮ್ ಕ್ವಾರೆಂಟೇನ್ ನಲ್ಲಿ ಇರಿಸಲಾಗುತ್ತದೆ. ಈ ಅವಧಿಯಲ್ಲಿ ದಿನಕ್ಕೆ ಐದು ಬಾರಿ ಮೇಲ್ವಿಚಾರಣೆ ಕೇಂದ್ರದಿಂದ ಕರೆ ಮಾಡಿ ಆರೋಗ್ಯ ವಿಚಾರಿಸುವುದನ್ನು ಸಹ ಮಾರ್ಗಸೂಚಿ ಒಳಗೊಂಡಿದೆ.

ವಲಸೆ ಇಲಾಖೆ ನೀಡಿದ 3,000 ಜನರಿಗಾಗಿ ಹುಟುಕಾಟ

ವಲಸೆ ಇಲಾಖೆ ನೀಡಿದ 3,000 ಜನರಿಗಾಗಿ ಹುಟುಕಾಟ

ಕೇಂದ್ರ ವಲಸೆ ಇಲಾಖೆ ನೀಡಿದ ಹೆಸರುಗಳನ್ನು ಆಧರಿಸಿ ವಿದೇಶಗಳಿಂದ ಆಗಮಿಸಿದವರಿಗಾಗಿ ಮುಂಬೈನಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಮುಂಬೈನ 24 ಸ್ಥಳೀಯ ವಾರ್ಡ್ ವಾರ್ ರೂಮ್ ಮೂಲಕ ವಿದೇಶಗಳಿಂದ ವಾಪಸ್ ಆಗಿರುವ 3,000 ವಲಸಿಗರನ್ನು ಪತ್ತೆ ಮಾಡಲಾಗಿದೆ. ವರದಿ ಪ್ರಕಾರ, ಪ್ರತಿಯೊಂದು ವಾರ್ಡ್ ರೂಮ್ ತಮ್ಮ ವ್ಯಾಪ್ತಿಯಲ್ಲಿರುವ 100 ಜನರ ಆರೋಗ್ಯ ಸ್ಥಿತಿ ಮತ್ತು ವಿಚಾರಣೆ ಮತ್ತು ಪರೀಕ್ಷೆಯನ್ನು ನಡೆಸಲಾಗುತ್ತದೆ.

ಗೃಹ ದಿಗ್ಬಂಧನದಲ್ಲಿ ಇರುವವರಿಗೆ 24/7 ಆರೋಗ್ಯ ಮೇಲ್ವಿಚಾರಣೆ

ಗೃಹ ದಿಗ್ಬಂಧನದಲ್ಲಿ ಇರುವವರಿಗೆ 24/7 ಆರೋಗ್ಯ ಮೇಲ್ವಿಚಾರಣೆ

* ಪ್ರತಿನಿತ್ಯ ಬೆಳಗ್ಗೆ 9 ಗಂಟೆಗೆ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಕಳೆದ 24 ಗಂಟೆಗಳ ಅವಧಿಯಲ್ಲಿ ಓಮಿಕ್ರಾನ್ ಹೆಚ್ಚು ಅಪಾಯ ಹೊಂದಿರುವ ರಾಷ್ಟ್ರಗಳು ಮತ್ತು ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ದೇಶಗಳಿಂದ ಆಗಮಿಸಿದವರ ಒಂದು ಪಟ್ಟಿಯನ್ನು ಮಾಡಲಾಗುತ್ತದೆ. ತದನಂತರದಲ್ಲಿ ಈ ಪಟ್ಟಿಯನ್ನು ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕರಿಗೆ ಕಳುಹಿಸಲಾಗುತ್ತದೆ.

* ಗ್ರೇಟರ್ ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿ ತಮ್ಮ ಸ್ಥಳವಿದೆ ಎಂದು ನಮೂದಿಸಿದವರನ್ನು ಮಾತ್ರ, ನಂತರದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ.

* ಪ್ರಯಾಣಿಕರು ನೀಡಿದ ತಮ್ಮ ವಿಳಾಸವನ್ನು ಇಟ್ಟುಕೊಂಡು ಗ್ರೇಟರ್ ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯ ಯಾವ ವಾರ್ಡ್ ವಾರ್ ರೂಮ್ ಅಡಿಯಲ್ಲಿ ಸೇರುತ್ತಾರೆ ಎಂಬುದನ್ನು ಸಾಫ್ಟವೇರ್ ಬಳಸಿ ಪ್ರತ್ಯೇಕಿಸಲಾಗುತ್ತದೆ. ವಿಪತ್ತು ನಿರ್ವಹಣಾ ಘಟಕವು ಎಲ್ಲಾ 24 ವಾರ್ಡ್ ವಾರ್ ರೂಂಗಳು ಮತ್ತು ಕ್ಷೇತ್ರದ ವೈದ್ಯಕೀಯ ಅಧಿಕಾರಿಗಳಿಗೆ ವಿಳಾಸಗಳ ಪಟ್ಟಿಯನ್ನು ವಿತರಿಸುತ್ತದೆ.

* ವಾರ್ಡ್ ವಾರ್ ರೂಮ್ ಗಳ ಮೂಲಕ ಪ್ರಯಾಣಿಕರಿಗೆ ಏಳು ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಲಾಗುತ್ತದೆ. ಅವರು ಪ್ರಯಾಣಿಕರಿಗೆ COVID-19 ಪ್ರೋಟೋಕಾಲ್‌ಗಳ ಮಾಹಿತಿಯನ್ನು ಒದಗಿಸುತ್ತವೆ. ಇದರ ಜೊತೆಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸುತ್ತವೆ.

* ಹೋಮ್ ಕ್ವಾರೆಂಟೇನ್ ನಲ್ಲಿ ಇರುವವರು ಪ್ರತಿನಿತ್ಯ ನಿಯಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಆಂಬುಲೆನ್ಸ್ ನೊಂದಿಗೆ ವೈದ್ಯಕೀಯ ತಂಡವನ್ನು ಕಳುಹಿಸಲಾಗುತ್ತದೆ. ಹೋಮ್ ಕ್ವಾರಂಟೈನ್‌ನ 7ನೇ ದಿನ ವಾರ್ಡ್ ವಾರ್ ರೂಮ್ ಸಿಬ್ಬಂದಿಯೇ ವ್ಯಕ್ತಿಯ RT-PCR ಪರೀಕ್ಷೆಯನ್ನು ಮಾಡುತ್ತಾರೆ.

* 7 ದಿನಗಳವರೆಗೆ ಹೋಮ್ ಐಸೋಲೇಶನ್‌ನಲ್ಲಿರಬೇಕು ಎಂದು ತಿಳಿಸುವ ಕುರಿತು ಜನರು ತಂಗಿರುವ ಹೌಸಿಂಗ್ ಸೊಸೈಟಿಗೆ ಪತ್ರ ನೀಡಲಾಗುವುದು.

* ಯಾರಾದರೂ ಯಾವುದೇ ರೋಗಲಕ್ಷಣದ ಬಗ್ಗೆ ದೂರು ನೀಡಿದರೆ, ವಾರ್ ರೂಮ್ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ. ವಾರ್ಡ್ ವೈದ್ಯರು ಹೋಮ್ ಕ್ವಾರೆಂಟೇನ್ ನಲ್ಲಿರುವ ಜನರಿಗೆ ದೂರವಾಣಿ ಮೂಲಕ "ಧೈರ್ಯ ಮತ್ತು ಸಲಹೆಯನ್ನು ನೀಡುತ್ತಾರೆ.

ವಾರ್ಡ್ ವಾರ್ ರೂಮ್ ಕುರಿತು ಮಾಹಿತಿ

ವಾರ್ಡ್ ವಾರ್ ರೂಮ್ ಕುರಿತು ಮಾಹಿತಿ

ಮುಂಬೈ ಮಹಾನಗರ ಪಾಲಿಕೆಯು ರಚಿಸುವ ವಾರ್ಡ್ ವಾರ್ ರೂಮ್ ತಂಡದಲ್ಲಿ 8 ರಿಂದ 10 ಮಂದಿ ಇರುತ್ತಾರೆ. ನವೆಂಬರ್ 1 ರಿಂದ ಈಚೆ ಮುಂಬೈ ನಗರಕ್ಕೆ ಆಗಮಿಸಿದ ವ್ಯಕ್ತಿಗಳನ್ನು ಪಟ್ಟಿ ಮಾಡುವುದು ಹಾಗೂ ಹೋಮ್ ಕ್ವಾರೆಂಟೇನ್ ಮಾಡುವುದಕ್ಕೆ ಸಂಬಂಧಿಸಿದಂತೆ ವೈದ್ಯರು, ಡಾಟಾ ಆಪರೇಟರ್ಸ್ ಹಾಗೂ ಶಿಕ್ಷಕರನ್ನು ಈ ವಾರ್ ರೂಮ್ ಹೊಂದಿರುತ್ತದೆ.

ಮೂರು ಪಟ್ಟು ಹರಡುವಿಕೆ ವೇಗವನ್ನು ಹೊಂದಿರುವ ಓಮಿಕ್ರಾನ್

ಮೂರು ಪಟ್ಟು ಹರಡುವಿಕೆ ವೇಗವನ್ನು ಹೊಂದಿರುವ ಓಮಿಕ್ರಾನ್

ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿದೆ. ಜಗತ್ತಿನ 38 ರಾಷ್ಟ್ರಗಳಲ್ಲಿ ಈವರೆಗೂ 674 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಈ ಹಿಂದೆ ಅಪಾಯಕಾರಿ ಎಂದು ತಜ್ಞರು ಹೇಳಿದ್ದ ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಓಮಿಕ್ರಾನ್ ಡೇಂಜರ್ ಎಂದು ಹೇಳಲಾಗುತ್ತಿದೆ. ಓಮಿಕ್ರಾನ್ ರೂಪಾಂತರವು ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ ಭಾರತದಲ್ಲಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.

English summary
Latest Home Quarantine Rules in Mumbai: Mumbai ward war rooms will inform passengers to remain under seven-day home quarantine to tackle the spread of Omicron Covid variant. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X