ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಇಳಿಕೆ: ಏಪ್ರಿಲ್ 02ರಿಂದ ಮಹಾರಾಷ್ಟ್ರದಲ್ಲಿ ಮಾಸ್ಕ್ ನಿರ್ಬಂಧ ತೆರವು

|
Google Oneindia Kannada News

ಮುಂಬೈ ಮಾರ್ಚ್ 31: ಕೊರೊನಾ ಮೊದಲ ಅಲೆ ಮತ್ತು 2ನೇ ಅಲೆ ವೇಳೆಯಲ್ಲಿ ಮಹಾರಾಷ್ಟ್ರ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾಗಿದೆ. ಆದರೀಗ ಕೊರೊನಾ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಮಹಾರಾಷ್ಟ್ರ ಕ್ಯಾಬಿನೆಟ್ ರಾಜ್ಯದಾದ್ಯಂತ ಎಲ್ಲಾ ಕೊರೊನಾ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಏಪ್ರಿಲ್ 2 ರಿಂದ ಈ ಆದೇಶ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ. ಹೀಗಾಗಿ ಕೇಂದ್ರವು ವಿಪತ್ತು ನಿರ್ವಹಣಾ ಕಾಯಿದೆಯ ನಿಬಂಧನೆಗಳನ್ನು ಹಿಂತೆಗೆದುಕೊಳ್ಳುವ ಸೂಚನೆ ಹಿನ್ನೆಲೆಯಲ್ಲಿ ಈ ಸಡಿಲಿಕೆ ಮಾಡಲಾಗಿದೆ. ಕೊರೊನವೈರಸ್ ಕ್ಷೀಣಿಸುತ್ತಲೇ ಇರುವುದರಿಂದ ಮುಂದಿನ ಶನಿವಾರದಿಂದ ಕೊರೊನಾ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸಲು ಜನರಿಗೆ ಸೂಚಿಸಲಾಗಿದ್ದರೂ ಅದನ್ನು ಕಡ್ಡಾಯ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಕೊರೊನಾ ಹರಡುವಿಕೆಯಿಂದಾಗಿ ದೇಶದ ಮೇಲೆ ವಿವಿಧ ನಿರ್ಬಂಧಗಳನ್ನು ಹೇರಲಾಗಿತ್ತು. ಸಾರ್ವಜನಿಕ ಸ್ಥಳಗಳಿಗೆ ತೆರಳಲು ಮಾಸ್ಕ್ ಸೇರಿದಂತೆ 2 ಡೋಸ್ ಲಸಿಕೆ ಕಡ್ಡಾಯ ಎಂದು ಘೋಷಿಸಲಾಗಿತ್ತು. ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮುಖವಾಡವು ಮುಖ್ಯವಾಗಿದೆ. ಜೊತೆಗೆ ಕೊರೊನಾ ಸಾವನ್ನು ತಡೆಗಟ್ಟುವಲ್ಲಿ ಲಸಿಕೆ ಮುಖ್ಯವಾಗಿತ್ತು. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸಾರ್ವಜನಿಕ ಸ್ಥಳಗಳಿಗೆ ತೆರಳಲು ಮಾಸ್ಕ್ ಕಡ್ಡಾಯ ಎಂಬ ನಿಯಮವಿತ್ತು. ಆದರೆ ಈ ನಿರ್ಬಂಧವನ್ನು ಮಹಾರಾಷ್ಟ್ರದಲ್ಲಿ ತೆಗೆದುಹಾಕಲಾಗಿದೆ.

ದೇಶದಲ್ಲಿ ಕೊರೊನಾ ನಿಯಮಗಳು ಸಡಿಲ: ಕೇಂದ್ರದಿಂದ ಮಹತ್ವದ ಮಾಹಿತಿ ದೇಶದಲ್ಲಿ ಕೊರೊನಾ ನಿಯಮಗಳು ಸಡಿಲ: ಕೇಂದ್ರದಿಂದ ಮಹತ್ವದ ಮಾಹಿತಿ

ಆರೋಗ್ಯ ಸಚಿವ ರಾಜೇಶ್ ಟೋಪೆ ಮಾತನಾಡಿ, ರಾಜ್ಯದಲ್ಲಿ 700-800 ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಪಾಸಿಟಿವಿಟಿ ದರವು ಶೇಕಡಾ 4 ರಷ್ಟಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ಕೋವಿಡ್ ಕಾರ್ಯಪಡೆಯೊಂದಿಗೆ ಸಮಾಲೋಚನೆಯ ನಂತರ ಎಲ್ಲಾ ಕೊರೊನಾ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

No Mask in Maharashtra From April 2

"ಸಿಎಂ ಮತ್ತು ಕ್ಯಾಬಿನೆಟ್ ಏಪ್ರಿಲ್ 2 ರಿಂದ ಕೊರೊನಾ ನಿರ್ಬಂಧಗಳನ್ನು ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿದೆ" ಎಂದು ಟೋಪೆ ಹೇಳಿದರು. ಮುಂಬೈ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಎರಡು ಬಾರಿ ಲಸಿಕೆ ಹಾಕಿರುವುದು ಕಡ್ಡಾಯ ಎನ್ನುವ ನಿಯಮವನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

No Mask in Maharashtra From April 2

ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು, ಕಡ್ಡಾಯಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದ ಮಾತ್ರಕ್ಕೆ ಜನರು ಮುನ್ನೆಚ್ಚರಿಕೆಗಳನ್ನು ಬಳಸಬಾರದು ಎಂದು ಅರ್ಥವಲ್ಲ. "ಭವಿಷ್ಯದಲ್ಲಿ ಕೋವಿಡ್ ಏಕಾಏಕಿ ತಡೆಗಟ್ಟಲು, ನಾಗರಿಕರು ಮಾಸ್ಕ್ ಧರಿಸಬೇಕು, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಲಸಿಕೆ ಹಾಕಬೇಕು" ಎಂದು ಮಹಾರಾಷ್ಟ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

No Mask in Maharashtra From April 2

Recommended Video

ದಾಖಲೆ ಮಾಡಿ ಮಿಂಚುತ್ತಿರುವ ಬ್ರಾವೋ | Oneindia Kannada

ಓಮಿಕ್ರಾನ್ ಕೊರೊನಾ ಪ್ರಕರಣಗಳು ದೇಶದಲ್ಲಿ ಕ್ಷೀಣಿಸುತ್ತಿವೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 183 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾದಿಂದ ಚೇತರಿಸಿಕೊಂಡ 219 ಜನರಲ್ಲಿ ಒಬ್ಬರು ಮಾತ್ರ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

English summary
The Maharashtra cabinet on Thursday decided to lift all Covid-19 restrictions across the state, effective from April 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X