ನಾನಾ ಪಾಟೇಕರ್ 'ಅಸಭ್ಯ' ಎಂಬುದು ನನಗೆ ಗೊತ್ತು: ರಾಜ್ ಠಾಕ್ರೆ

ಮುಂಬೈ, ಅಕ್ಟೋಬರ್ 18: 'ಬಾಲಿವುಡ್ ನಟ ನಾನಾ ಪಾಟೇಕರ್ ಅಸಭ್ಯ ಎಂಬುದು ನನಗೆ ಗೊತ್ತು' ಎನ್ನುವ ಮೂಲಕ ಮೀಟೂ ಅಭಿಯಾನಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಬೆಂಬಲ ನೀಡಿದ್ದಾರೆ.

'ಮೀಟೂ ಅಭಿಯಾನ ಒಂದು ಗಂಭೀರ ವಿಷಯ. ಅದರ ಕುರಿತು ಕೇವ ಸಾಮಾಜಿಕ ಮಾಧ್ಯಮಗಳಲ್ಲಷ್ಟೇ ಚರ್ಚೆಯಾಗುವುದು ಸರಿಯಲ್ಲ' ಎಂದು ಅವರು ಅಭಿಪ್ರಾಯಪಟ್ಟರು.

Nana Patekar is indecent: Raj Thaclkeray on MeToo

'ನಾನಾ ಪಾಟೇಕರ್ ಅಸಭ್ಯ ಎಂಬುದು ನನಗೆ ಗೊತ್ತು. ಆದರೆ ಈ ಮೀಟೂ ಅಭಿಯಾನವು ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮಪುಲ್ಯದ ಕುಸಿತ ಸೇರಿದಂತೆ, ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಮಾಡುತ್ತಿರುವ ಪ್ರಯತ್ನವಿರಬಹುದು' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

"ಯಾವುದೇ ಮಹಿಳೆ ತೊಂದರೆ ಅನುಭವಿಸುತ್ತಿದ್ದರೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನೆರವು ಪಡೆಯಬಹುದು. ಹತ್ತು ವರ್ಷದ ನಂತರವಲ್ಲ, ದೌರ್ಜನ್ಯ ನಡೆದ ಕೂಡಲೇ ನಮಗೆ ಮಾಹಿತಿ ನೀಡಬೇಕು. ನಾವು ಇಂಥ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ" ಎಂದು ಅಭಯ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+