• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಗ್ನಿ ಆಕಸ್ಮಿಕ: ಮುಂಬೈಯಲ್ಲಿ ಇಬ್ಬರ ಸಜೀವ ದಹನ

|

ಮುಂಬೈ, ನವೆಂಬರ್ 14: ಮುಂಬೈಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕವೊಂದರಲ್ಲಿ ಇಬ್ಬರು ಮೃತರಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಲುಧಿಯಾನಾ ಕಾರ್ಖಾನೆಯಲ್ಲಿ ಅಗ್ನಿ ಆಕಸ್ಮಿಕ: 4 ಮಂದಿ ಸಾವು

ಮುಂಬೈಯ ಅಂಧೇರಿಯ ವೀರಾ ದೇಸಾಯಿ ರಸ್ತೆಯ ಕದಮ್ ಚಾವ್ಲ್ ಎಸ್ ಆರ್ ಎ ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದೆ. ಹನ್ನೊಂದು ಮಹಡಿ ಕಟ್ಟಡದ ಹತ್ತನೇ ಮಹಡಿಯಲ್ಲಿ ಇದ್ದಕ್ಕಿದ್ದಂತೇ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಕಳೆದ ಅಕ್ಟೋಬರ್ ನಲ್ಲಿ ಪಂಜಾಬಿನ ಲುಧಿಯಾನದ ಕಲ್ಯಾಣ ನಗರ ಎಂಬಲ್ಲಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ನಾಲ್ವರು ಮೃತರಾಗಿದ್ದರು.

ಛತ್ತೀಸ್ ಗಢ ಸ್ಟೀಲ್ ಕಾರ್ಖಾನೆಯಲ್ಲಿ ಸ್ಫೋಟ: 9 ಮಂದಿ ದುರ್ಮರಣ

ಅದಕ್ಕೂ ಮುನ್ನ ಛತ್ತೀಸ್ ಗಢದ ಭಿಹಾಲಿ ಎಂಬಲ್ಲಿ ಸ್ಟೀಲ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಬರೋಬ್ಬರಿ 9 ಜನ ಸಜೀವ ದಹನವಾಗಿದ್ದರು.

English summary
Two persons died after a fire broke out in a high-rise residential building in Andheri West on Tuesday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X