ಮುಂಬೈ: ಕೊಲೆಯಲ್ಲಿ ಕೊನೆಯಾದ ಟ್ಯೂಶನ್ ಶಿಕ್ಷಕರ ಕಲಹ!
ಮುಂಬೈ, ಫೆಬ್ರವರಿ 2: ಇಬ್ಬರು ಟ್ಯೂಶನ್ ಶಿಕ್ಷಕರ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಓರ್ವ ಶಿಕ್ಷಕರು ಕೊಲೆಯಾದ ಘಟನೆ ಮುಂಬೈಯ ಮಲಾಡ್ ಎಂಬಲ್ಲಿ ನಡೆದಿದೆ.
ತಮ್ಮ ಮನೆಯ ಬಳಿ ಕುಳಿತಿದ್ದ ಟ್ಯೂಶನ್ ಶಿಕ್ಷಕರಾಗಿದ್ದ ಅರುಪ್ ಬಿಸ್ವಾಸ್ ಎಂಬುವವರ ಜೊತೆ ಇನ್ನೋರ್ವ ಟ್ಯೂಶನ್ ಶಿಕ್ಷಕ ವಿಜಯ ಹರ್ಜನ್ ವಾಗ್ವಾದ ಆರಂಭಿಸಿಸದ್ದಾರೆ. ನಂತರ ವಿಜಯ ಹರ್ಜನ್ ತಮ್ಮ ಬಳಿಯಿದ್ದ ಚಾಕುವಿನಿಂದ ಅರುಪ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.

ಟ್ಯೂಶನ್ನಿಗೆ ವಿದ್ಯಾರ್ಥಿಗಳನ್ನು ಹಂಚಿಕೊಳ್ಳುವ ಬಗ್ಗೆ ಆರಂಭವಾದ ಜಗಳ ಈ ರೀತಿ ಅಂತ್ಯವಾಗಿದೆ. ಅರುಪ್ ಬಿಸ್ವಾಸ್ ಟ್ಯೂಶನ್ ಕ್ಲಾಸಿಗೆ ಹೆಚ್ಚಿನ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆಂಬ ಕೋಪಕ್ಕೆ ಈ ಘಟನೆ ನಡೆದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications