ಶುಭ ಸುದ್ದಿ; ಮುಂಬೈನಲ್ಲಿ ಹೊಸ ಕೋವಿಡ್ ಸಂಖ್ಯೆ ಇಳಿಮುಖ!

ಮುಂಬೈ, ಜುಲೈ 28 : ಮುಂಬೈ ಮಹಾನಗರದಲ್ಲಿ ಒಂದೇ ದಿನ ಅತಿ ಕಡಿಮೆ ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. 100 ದಿನಗಳಲ್ಲಿ ಇಷ್ಟು ಕಡಿಮೆ ಪ್ರಕರಣ ದಾಖಲಾಗಿದ್ದು ಇದೇ ಮೊದಲು.

Recommended Video

      Indian Spy Satellite EMISAT Passes Over Tibet To Observe Chinese Army | Oneindia Kannada

      ಸೋಮವಾರ ಮುಂಬೈ ನಗರದಲ್ಲಿ ಅತಿ ಹೆಚ್ಚು ಅಂದರೆ 8,776 ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ 700 ಪ್ರಕರಣಗಳು ಮಾತ್ರ ಪಾಸಿಟಿವ್ ಬಂದಿದೆ.

      ಮುಂಬೈ ನಗರದಲ್ಲಿ ಪ್ರಸ್ತುತ ಗುಣಮಖರಾಗುವವರ ಪ್ರಮಾಣ ಶೇ 73ರಷ್ಟಿದೆ. ನಗರದಲ್ಲಿ ಜುಲೈ 20 ರಿಂದ 26ರ ತನಕ ಕೊರೊನಾ ವೈರಸ್ ಸೋಂಕು ಹಬ್ಬಿರುವ ಪ್ರಮಾಣ ಶೇ 1.03ನಷ್ಟು ಮಾತ್ರ.

      Mumbai Records Lowest Coronavirus Cases

      ಮಹಾರಾಷ್ಟ್ರ ರಾಜ್ಯದಲ್ಲಿ ಸೋಮವಾರ ಒಂದೇ ದಿನ 7,924 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. 227 ಜನರು ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿ 1021 ಪ್ರಕರಣ ವರದಿಯಾಗಿದ್ದು, ಮೃತಪಟ್ಟವರ ಸಂಖ್ಯೆ 39.

      "ಮುಂಬೈಗೆ ಇದು ಶುಭ ಸುದ್ದಿ. ಹೆಚ್ಚು ಪರೀಕ್ಷೆ ನಡೆಸಿದರೂ ಹೊಸ ಪ್ರಕರಣಗಳ ಸಂಖ್ಯೆ 700. ಮೂರು ತಿಂಗಳಿನಲ್ಲಿಇದು ನೆಮ್ಮದಿಯ ವಿಷಯ" ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಮತ್ತು ಸಚಿವ ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ.

      ಮುಂಬೈ ನಗರದಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,10,182. ಇವುಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 21,812. ಪಕ್ಕದ ಥಾಣೆಯಲ್ಲಿ 34,471, ಪುಣೆಯಲ್ಲಿ 48,672 ಸಕ್ರಿಯ ಪ್ರಕರಣಗಳಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+