ಕೆಂಪು ವಲಯದಲ್ಲಿ ಮುಂಬೈ; ಜನರಿಗೆ ಪೊಲೀಸರ ಎಚ್ಚರಿಕೆ

ಮುಂಬೈ, ಮೇ 18 : ಭಾರತದಲ್ಲಿರುವ ಕೊರೊನಾ ಪ್ರಕರಣಗಳಲ್ಲಿ ಶೇ 20ರಷ್ಟು ಕೇಸುಗಳು ಮುಂಬೈ ನಗರದಲ್ಲಿಯೇ ದಾಖಲಾಗಿವೆ. ವಾಣಿಜ್ಯ ನಗರಿ ಇನ್ನೂ ಕೆಂಪು ವಲಯದಲ್ಲಿಯೇ ಇದೆ ಎಂದು ಪೊಲೀಸರು ಹೇಳಿದ್ದು, ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

Recommended Video

      Virat Kohli : RSS ಅಂಗ ಸಂಸ್ಥೆ ಸೇವಾಭಾರತಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು | Oneindia Kannada

      ಸೋಮವಾರದಿಂದ 4ನೇ ಹಂತದ ಲಾಕ್ ಡೌನ್ ಮುಂಬೈನಲ್ಲಿ ಜಾರಿಗೆ ಬಂದಿದೆ. ಲಾಕ್ ಡೌನ್ ನಿಯಮದಲ್ಲಿ ಯಾವುದೇ ವಿನಾಯಿತಿ ಇಲ್ಲ. ಜನರು ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

      ಮಹಾರಾಷ್ಟ್ರದಲ್ಲಿ ಇದುವರೆಗೂ ದಾಖಲಾಗಿರುವ ಕೊರೊನಾ ಪ್ರಕರಣಗಳ ಸಂಖ್ಯೆ 33,053. ಕೊರೊನಾ ಸೋಂಕಿತ 1,198 ಜನರು ಇದುವರೆಗೂ ಮೃತಪಟ್ಟಿದ್ದಾರೆ. ಮುಂಬೈ ನಗರವೊಂದರಲ್ಲಿಯೇ 20,150 ಪ್ರಕರಣಗಳಿವೆ. 734 ಜನರು ಮೃತಪಟ್ಟಿದ್ದಾರೆ.

      Mumbai In Red Zone Police Warned People

      ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಮಹಾರಾಷ್ಟ್ರ ಸರ್ಕಾರ ಶತಪ್ರಯತ್ನ ನಡೆಸಿದೆ. ಲಾಕ್‌ ಡೌನ್‌ನಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

      ಮುಂಬೈ ನಗರದ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಸೋಮವಾರ 85 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಇದುವರೆಗೂ ಈ ಪ್ರದೇಶದಲ್ಲಿ 1,327 ಪ್ರಕರಣ ದಾಖಲಾಗಿದ್ದು, 56 ಜನರು ಮೃತಪಟ್ಟಿದ್ದಾರೆ.

      ಮಹಾರಾಷ್ಟ್ರದಿಂದ ಅಕ್ಕಪಕ್ಕದ ರಾಜ್ಯಗಳಿಗೆ ತೆರಳಿದ ಜನರಿಗೆ ಕೊರೊನಾ ಸೋಂಕು ತಗುಲಿದೆ. ಕರ್ನಾಟಕ ಸರ್ಕಾರ ಮೇ 31ರ ತನಕ ಮುಂಬೈ ಅಥವ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಯಾರೂ ಆಗಮಿಸುವಂತಿಲ್ಲ ಎಂದು ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+