ಮುಂಬೈನ ಹೋಟೆಲ್ ನಲ್ಲಿ ಬೇಯಿಸಿರುವ ಎರಡು ಮೊಟ್ಟೆಗೆ 1,700 ರುಪಾಯಿ

ಮುಂಬೈ, ಆಗಸ್ಟ್ 11: ಕೆಲ ಸಮಯದ ಹಿಂದೆ ಚಂಡೀಗಢದ ಜೆಡಬ್ಲ್ಯು ಮೇರಿಯಟ್ ಹೋಟೆಲ್ ನಲ್ಲಿ ಎರಡು ಬಾಳೇಹಣ್ಣಿಗೆ 442 ರುಪಾಯಿ ದರ ವಿಧಿಸಿದ್ದು ನಿಮಗೆ ನೆನಪಿದ್ದರೆ ಇಲ್ಲೊಂದು ಉದಾಹರಣೆಯಿದೆ, ಓದಿ. ಮುಂಬೈನ ಫೋರ್ ಸೀಸನ್ ಹೋಟೆಲ್ ನಲ್ಲಿ ಬೇಯಿಸಿರುವ ಎರಡು ಮೊಟ್ಟೆಗೆ 1,700 ರುಪಾಯಿ ದರ ವಿಧಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಲಾಗಿದೆ.

ಬಾಳೇಹಣ್ಣಿನ ಬಗ್ಗೆ ವಿವಾದ ಎದ್ದಿದ್ದು ನಟ ರಾಹುಲ್ ಬೋಸ್ ಅವರು ಹೋಟೆಲ್ ನಿಂದ ವಿಪರೀತ ದರ ವಿಧಿಸಿದ ಬಗ್ಗೆ ಧ್ವನಿ ಎತ್ತಿದ ನಂತರ. ಆ ಘಟನೆ ಸುದ್ದಿಯಾದ ಮೇಲೆ ಚಂಡೀಗಢದ ಸುಂಕ ಹಾಗೂ ತೆರಿಗೆ ಇಲಾಖೆಯಿಂದ ಜೆಡಬ್ಲ್ಯು ಮೇರಿಯಟ್ ಹೋಟೆಲ್ ಗೆ 25,000 ದಂಡ ವಿಧಿಸಲಾಗಿತ್ತು.

Boiled Egg

ಇದೀಗ ಟ್ವಿಟ್ಟರ್ ಬಳಕೆದಾರ ಕಾರ್ತೀಕ್ ಧರ್ ಬಿಲ್ ವೊಂದನ್ನು ಪೋಸ್ಟ್ ಮಾಡಿದ್ದು, ಮುಂಬೈನ ಫೋರ್ ಸೀಸನ್ಸ್ ಹೋಟೆಲ್ ನಲ್ಲಿ 2 ಮೊಟ್ಟೆಗೆ 1700 ರುಪಾಯಿ ಎಂದು ಶೀರ್ಷಿಕೆ ಹಾಕಿದ್ದಾರೆ. ರಾಹುಲ್ ಬೋಸ್ ಗೂ ಟ್ಯಾಗ್ ಮಾಡಿ, "ನಾವು ಪ್ರತಿಭಟನೆ ಮಾಡೋಣವೇ? ಎಂದು ಹಾಕಿದ್ದಾರೆ.

Hotel Bill

ಈ ಬಗ್ಗೆ ಹೋಟೆಲ್ ನಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಇನ್ನು ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಬ್ಬರು, ಆ ಕೋಳಿಯು ಮೊಟ್ಟೆ ಜತೆಗೆ ಚಿನ್ನವೂ ಇಟ್ಟಿತ್ತಾ ಎಂದಿದ್ದಾರೆ. ಮತ್ತೊಬ್ಬರು, ಆ ಕೋಳಿ ಶ್ರೀಮಂತ ಕುಟುಂಬಕ್ಕೆ ಸೇರಿದ್ದಾಗಿರಬೇಕು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+