ಪತ್ರಕರ್ತೆ ಮೇಲೆ ಅತ್ಯಾಚಾರ ನಾಲ್ವರು ತಪ್ಪಿತಸ್ಥರು
ಮುಂಬೈ, ಮಾ.20: ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತ ಆರೋಪಿಗಳನ್ನು ತಪ್ಪಿತಸ್ಥರು ಎಂದು ಸ್ಥಳೀಯ ನ್ಯಾಯಾಲಯ ಗುರುವಾರ ಘೋಷಿಸಿದೆ.
ಮುಂಬೈನ ಶಕ್ತಿ ಮಿಲ್ ಕಾಂಪೌಂಡ್ ಬಳಿ ನಡೆದಿದ್ದ ಈ ದುರ್ಘಟನೆಯಲ್ಲಿ ನಿಯತಕಾಲಿಕೆಯೊಂದರ ಫೋಟೋಗ್ರಾಫರ್ 22 ವರ್ಷದ ಯುವತಿ ಮೇಲೆ ಕಳೆದ ವರ್ಷ ಆಗಸ್ಟ್ 23ರಂದು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳು ಜುಲೈ 21 ರಂದು ಟೆಲಿಫೋನ್ ಆಪರೇಟರ್ ಆಗಿದ್ದ ಯುವತಿ ಮೇಲೆ ಕೂಡಾ ಇದೇ ರೀತಿ ಅಮಾನುಷ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ಪ್ರಸ್ತಾಪಿಸಿದ ಪೊಲೀಸರು ಸೂಕ್ತ ಸಾಕ್ಷಿ ಆಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸುಮಾರು 600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿ, 41 ಸಾಕ್ಷಿಗಳನ್ನು ಪೊಲೀಸರು ಹೆಸರಿಸಿದ್ದಾರೆ. ಆರೋಪಿಗಳ ಹೆಸರು ವಿಜಯ್ ಜಾಧವ್, ಕಾಸಿಂ ಬೆಂಗಾಳಿ, ಸಲೀಂ ಅನ್ಸಾರಿ, ಸಿರಾಜ್ ರೆಹಮಾನ್(ಬಾಲಾಪರಾಧಿ)7 ತಿಂಗಳ ಅವಧಿಯಲ್ಲಿ ತನಿಖೆ ಪೂರ್ಣಗೊಂಡಿದ್ದು, ಬಂಧಿತ ಐವರು ಆರೋಪಿಗಳಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದು ಆತನ ವಿಚಾರಣೆ ಪ್ರತ್ಯೇಕವಾಗಿ (juvenile court) ನಡೆಸಲಾಗಿದೆ. ತಪ್ಪಿತಸ್ಥರಿಗೆ ಕನಿಷ್ಠ 20 ವರ್ಷದ ಸಜೆ ಹಾಗೂ ಜೀವಾವಧಿ ಶಿಕ್ಷೆ ಪ್ರಕಟಗೊಳ್ಳುವ ಸಾಧ್ಯತೆಯಿದೆ. ನಾಳೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಫೋಟೋ ಜರ್ನಲಿಸ್ಟ್ ಯುವತಿ ತನ್ನ ಸಹೋದ್ಯೋಗಿಯೊಂದಿಗೆ ವರದಿಗಾರಿಕೆಗೆ ತೆರಳಿದ್ದಾಗ ಈ ದುರ್ಘಟನೆ ನಡೆದಿತ್ತು. ಮುಂಬೈ ಲೋಯಲ್ ಪ್ಯಾರೆಲ್ ಪ್ರದೇಶದ ಶಕ್ತಿ ಮಿಲ್ ನಲ್ಲಿ ಯುವತಿಯೊಂದಿಗಿದ್ದ ಸಹೋದ್ಯೋಗಿಯನ್ನು ಕಟ್ಟಿಹಾಕಿ, ಯುವತಿಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಯುವತಿಯ ಸ್ನೇಹಿತರು ಮತ್ತು ಕುಟುಂಬದವರು ಎನ್.ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಸ್ ಲೋಕ್ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಘಟನೆ ನಡೆದ 28 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದರು.












Click it and Unblock the Notifications