Get Updates
Get notified of breaking news, exclusive insights, and must-see stories!

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಮೊಮ್ಮಗಳಿಗೆ ಕಿರುಕುಳ: ವೃದ್ಧನಿಗೆ ೭ ವರ್ಷ ಜೈಲುಶಿಕ್ಷೆ

ಮುಂಬೈ, ಮೇ 16: ಅಪ್ರಾಪ್ತ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಯತ್ನಿಸಿದ 70 ವರ್ಷದ ವೃದ್ಧನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಮುಂಬೈ ನ್ಯಾಯಾಲಯವು ವಯಸ್ಸು ಅಥವಾ ಅನಾರೋಗ್ಯವನ್ನು ಶಿಕ್ಷೆ ವಿನಾಯತಿಗೆ ಕಾರಣವಾಗುವುದಿಲ್ಲ ಎಂದು ಮಹತ್ವದ ಹೇಳಿಕೆ ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನ್ಯಾಯಾಲಯವು 70 ವರ್ಷದ ವೃದ್ಧನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸಂತ್ರಸ್ತೆಯ ಮಲತಾಯಿ ಮನೆಯಿಂದ ಹೊರಗಡೆ ಯಾವುದೋ ಕೆಲಸದ ನಿಮಿತ್ತ ಹೋಗುತ್ತಿದ್ದ ಸಮಯದಲ್ಲಿ ಮನೆಯಲ್ಲಿದ್ದ ಮುಪ್ಪು ವಯಸ್ಸಿನ ವೃದ್ಧನು ತನ್ನ ಮೊಮ್ಮಗಳಿಗೆ ಮೊಬೈಲ್ ಫೋನ್‌ನಲ್ಲಿ ಪೋರ್ನ್( ಅಶ್ಲೀಲ್ ಲೈಂಗಿಕ ಚಿತ್ರ) ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಕಳೆದ 2014ರ ಈ ಪ್ರಕರಣದ ಕುರಿತು ನ್ಯಾಯಾಲವು ವಿಚಾರಣೆ ಮುಗಿಸಿ ಇದೀಗ ಶಿಕ್ಷೆಯನ್ನು ನೀಡಿದ್ದು, ಜೊತೆಗೆ ಮಹತ್ವದ ಹೇಳಿಕೆಯನ್ನೂ ನ್ಯಾಯಾಲಯವು ನೀಡಿದೆ.

ಕಾಮ-ಹಸಿದವರು ಸಹ ಸಂಬಂಧದ ಮಿತಿಗಳನ್ನು ದಾಟುತ್ತಾರೆ. ಅವರು ಲೈಂಗಿಕತೆಯಲ್ಲಿ ಎಷ್ಟು ಕುರುಡರಾಗುತ್ತಾರೆ ಎಂದರೆ ಅವರಿಗೆ ರಕ್ತ ಸಂಬಂಧದ ಬಗ್ಗೆ ಯಾವ ಬೆಲೆ ಕೊಡದೇ ಮಾಡಬಾರದು ಕೆಲಸವನ್ನು ಮಾಡಿ ಮತ್ತೇ ನನ್ನಿಂದಾ ತಪ್ಪಾಗಿದೆ ಬಿಟ್ಟುಬಿಡಿ ಎನ್ನುವ ಹೊತ್ತಿಗೆ ಕಳಂಕವು ಹೇಗೆ ಮಾಸುತ್ತದೆ ಹೇಳಿ. ಇದೀಗ ಮುಂಬೈನಿಂದ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನ್ಯಾಯಾಲಯವು 70 ವರ್ಷದ ವೃದ್ಧನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Mumbai: 70-year-old gets 7 years in jail for sexually abusing step-granddaughter

ಆರೋಪಿ ವಯೋಮಾನದಲ್ಲಿ ಮುದುಕನಾಗಿದ್ದರೂ ಆತನ ನಡೆ ವಿಚಿತ್ರವಾಗಿದೆ. ಈ ಹಿರಿಯ ತನ್ನ ಮಲ-ಮೊಮ್ಮಗಳನ್ನು ತನ್ನ ಮೊಬೈಲ್‌ನಲ್ಲಿ ಅಶ್ಲೀಲತೆಯನ್ನು ತೋರಿಸುವ ಮೂಲಕ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ವಿಚಾರಣೆಯ ಸಂದರ್ಭದಲ್ಲಿ, ಸಂತ್ರಸ್ತೆ ಘಟನೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿಕೊಂಡಿದ್ದಾಳೆ. ಈ ಘೋರ ಅಪರಾಧಕ್ಕಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಆಗ್ರಹಿಸಿದ್ದಳು

ಈ ಪ್ರಕರಣದ ಎಫ್‌ಐಆರ್ 7 ಸೆಪ್ಟೆಂಬರ್ 2014ರಂದು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಮಲತಾಯಿ ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು ಆಗ ಈ ಅಜ್ಜ ಮೊಬೈಲ್ ನಲ್ಲಿ ಪೋರ್ನ್ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸೆಪ್ಟೆಂಬರ್ 6ರಂದು ಇದ್ದಕ್ಕಿದ್ದಂತೆ ಮನೆಗೆ ಬಂದ ಸಂತ್ರಸ್ತೆಯ ಮಲತಾಯಿ ತನ್ನ ಅಜ್ಜನ ಜೊತೆಯಲ್ಲಿ ಪೋರ್ನ್ ನೋಡುತ್ತಿದ್ದ ಹುಡುಗಿಯನ್ನು ಹಿಡಿದಿದ್ದಾಳೆ. ಆದರೆ, ಆಗ ನಾನು ಹಾಡನ್ನು ತೋರಿಸುತ್ತಿದ್ದೇನೆ ಎಂದು ಆರೋಪಿ ವೃದ್ಧನು ಸುಳ್ಳು ಹೇಳಿದ್ದನು ಅದರ ನಂತರ ಮರುದಿನ ಈ ಪ್ರಕರಣ ದಾಖಲಾಗಿತ್ತು.

Mumbai: 70-year-old gets 7 years in jail for sexually abusing step-granddaughter

ಮಕ್ಕಳು ಮೊಬೈಲ್‌ನಲ್ಲಿ ಏನು ನೋಡ್ತಾರೆ ಗಮನಿಸಬೇಕು

ಪ್ರಕರಣದ ವಿಚಾರಣೆ ವೇಳೆ ವಿಶೇಷ ನ್ಯಾಯಾಧೀಶ ಎಚ್.ಡಿ.ಶೆಂಡೆ ಮಾತನಾಡಿ, ವಿಷಯ ಕೈ ತಪ್ಪಿದಾಗ ಪೋಷಕರಿಗೆ ಅಳುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಅರಿವಾಗುತ್ತದೆ. ಅದಕ್ಕೊಂದು ಉದಾಹರಣೆ ಈ ಪ್ರಕರಣ. ಮಕ್ಕಳು ಮೊಬೈಲ್ ನಲ್ಲಿ ಏನನ್ನು ನೋಡುತ್ತಾರೆ ಎಂಬುದನ್ನು ಪೋಷಕರು ನೋಡಬೇಕು ಎಂದು ಕೋರ್ಟ್ ಸಲಹೆ ನೀಡಿದೆ. ಏಕೆಂದರೆ ಈ ವಯಸ್ಸಿನಲ್ಲಿ ಅವರು ಸರಿ ಮತ್ತು ತಪ್ಪುಗಳ ನಡುವೆ ಸರಿಯಾದ ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

Mumbai: 70-year-old gets 7 years in jail for sexually abusing step-granddaughter

ಇಂತಹ ಅಪರಾಧಗಳಿಗೆ ಸೂಕ್ತ ಶಿಕ್ಷೆ ಅಗತ್ಯ

ವಿಚಾರಣೆಯ ಸಂದರ್ಭದಲ್ಲಿ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಒಳಗೊಂಡ ಅಪರಾಧಗಳನ್ನು ಎದುರಿಸಲು ಸಾಕಷ್ಟು ಶಿಕ್ಷೆಯನ್ನು ಒದಗಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ವಿಶೇಷ ನ್ಯಾಯಾಧೀಶರು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯವು ಕೇವಲ ಮಹಿಳೆಯರ ವಿರುದ್ಧದ ಅಪರಾಧವಲ್ಲ ಆದರೆ ಅದು ಸಮಾಜದ ವಿರುದ್ಧದ ಗಂಭೀರ ಅಪರಾಧವಾಗಿದೆ. ಮಕ್ಕಳ ಬಲಿಪಶುಗಳು ದಾಳಿಕೋರರಿಗೆ ಸುಲಭವಾಗಿ ಬಲಿಯಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳ ಮೇಲೆ ನಿಗಾ ಇಡುವುದು ಅವಶ್ಯಕ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+