ಮಾನಸಿಕ ಖಿನ್ನತೆ, ಮುಂಬೈ ಮಾಡೆಲ್ ಸೂಸೈಡ್
ಮುಂಬೈ, ಸೆ.30: ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ ಪಾಂಡೆ ಸೋಮವಾರ ತಾನು ವಾಸಿಸುತ್ತಿದ್ದ ಲೋಖಂಡವಾಲಾದ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ರೂಪದರ್ಶಿ ರೂಪದರ್ಶಿ ಏಕ್ತಾ ಬಬ್ಬರ್ ಆತ್ಮಹತ್ಯೆ ನಂತರ ಇದು ಎರಡನೇ ಪ್ರಕರಣವಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಮಾನಸಿಕ ಖಿನ್ನತೆಯಿಂದ ಅರ್ಚನಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರೂಪದರ್ಶಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡು ಮುರ್ನಾಲ್ಕು ದಿನ ಕಳೆದಿರಬಹುದು. ಅಕ್ಕ ಪಕ್ಕದ ಅಪಾರ್ಟ್ಮೆಂಟ್ ನವರು ಅರ್ಚನಾ ವಾಸಿಸುತ್ತಿದ್ದ ಫ್ಲಾಟಿನಿಂದ ಗಬ್ಬುವಾಸನೆ ಬರುತ್ತಿದೆ. ಯಾಕೋ ಅನುಮಾನ ಕಾಡುತ್ತಿದೆ ಎಂದು ಠಾಣೆಗೆ ಕರೆ ಮಾಡಿದರು. ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಅರ್ಚನಾ ಅವರ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ವರ್ಸೋವಾ ಠಾಣಾಧಿಕಾರಿ ಹೇಳಿದ್ದಾರೆ.

ಆತ್ಮಹತ್ಯಾ ಪತ್ರದಲ್ಲಿ ಏನಿದೆ?: ಬಾಲಿವುಡ್ ನಲ್ಲಿ ಮಿಂಚುವ ಕನಸು ಹೊತ್ತಿದ್ದ ಮಾಡೆಲ್ ಅರ್ಚನಾ ಪಾಂಡೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಒಳ್ಳೆ ಹೆಸರಿತ್ತು. ಕೆಲವು ದಕ್ಷಿಣ ಭಾರತ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಳು. ಅದರೆ, ಹಿಂದಿ ಚಿತ್ರರಂಗ ಯಾಕೋ ಕೈ ಬೀಸಿ ಕರೆಯಲಿಲ್ಲ. ಜೊತೆಗೆ ಆಕೆಗೊಬ್ಬ ಗೆಳೆಯನಿದ್ದ ಎಂದು ತಿಳಿದು ಬಂದಿದೆ. ಇದೆಲ್ಲದರ ನಡುವೆ ಆರ್ಥಿಕ ಸಮಸ್ಯೆ ಕೂಡಾ ಆಕೆಯನ್ನು ಕಾಡಿದ್ದಿರಬಹುದು ಹೀಗಾಗಿ ಮನನೊಂದು ಆಕೆ ಸಾವಿಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.[ಮಹಡಿಯಿಂದ ಜಿಗಿದು ಮಾಡೆಲ್ ಆತ್ಮಹತ್ಯೆ]
ಅಂಧೇರಿ ಪಶ್ಚಿಮದಲ್ಲಿರುವ ಲೋಖಂಡವಾಲಾದಲ್ಲಿನ ನ್ಯೂ ಮಾಡಾ ಅಪಾರ್ಟ್‌ಮೆಂಟಿನ ತನ್ನ ಫ್ಲಾಟ್‌ನಲ್ಲಿ ಅರ್ಚನಾ ಒಬ್ಬರೇ ವಾಸಿಸುತ್ತಿದ್ದರು. ಆಕೆ ಶವವಿದ್ದ ಕೋಣೆಯಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಸೂಸೈಡ್ ನೋಟ್ ನಲ್ಲಿ ಏನಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಸೂಸೈಡ್ ನೋಟ್ ತನಿಖೆ ನಡೆಸಿದ ಮೇಲೆ ಅರ್ಚನಾ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದರು ಎಂದು ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications