ಮುಂಬೈ: ಬೆಳ್ಳಂಬೆಳಿಗ್ಗೆಯೇ ಹೊತ್ತಿ ಉರಿಯಿತು ಬಹುಮಹಡಿ ಕಟ್ಟಡ

ಮುಂಬೈ, ಜೂನ್ 9: ಮುಂಬೈನ ಬಂದರು ಪ್ರದೇಶದಲ್ಲಿನ ಪಟೇಲ್ ಚೇಂಬರ್ಸ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಶನಿವಾರ ನಸುಕಿನ ವೇಳೆ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ 18 ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ಬೆಂಕಿಯನ್ನು ಬಹುತೇಕ ನಂದಿಸಿದ್ದಾರೆ.

ಆದರೆ, ಕಟ್ಟದ ಕೆಲವು ಮಹಡಿಗಳು ಬೆಂಕಿಗೆ ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲೆ ಕಟ್ಟಡದ ಅವಶೇಷ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಆರಂಭದಲ್ಲಿ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಸ್ಥಳೀಯರು ಅಗ್ನಿಶಾಮಕ ವಿಭಾಗಕ್ಕೆ ಕರೆ ಮಾಡಿದರು. ಸುಮಾರು 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿದ್ದವು.

massive fire in mumbais fort area building

ಆದರೆ ಬೆಂಕಿಯ ಜ್ವಾಲೆಗಳು ಇನ್ನಷ್ಟು ತೀವ್ರವಾಗಿದ್ದರಿಂದ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಹೀಗಾಗಿ ಮತ್ತೆ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು.

ಮೊದಲಿಗೆ ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ, ಕೆಲವೇ ಕ್ಷಣಗಳಲ್ಲಿ ಬಹುತೇಕ ಕಟ್ಟಡದಲ್ಲಿ ವ್ಯಾಪಿಸಿತು. ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡಿತು.

ಘಟನೆಗೆ ಕಾರಣ ತಿಳಿದುಬಂದಿಲ್ಲ. ಕಟ್ಟಡದ ಒಳಗೆ ಯಾರಾದರು ಸಿಲುಕಿದ್ದಾರೆಯೇ ಎಂಬ ಮಾಹಿತಿ ಕೂಡ ಲಭ್ಯವಾಗಿಲ್ಲ.

ಮುಂಬೈ ಬಂದರು ಪ್ರದೇಶದಲ್ಲಿ ಕಳೆದ ಹತ್ತು ದಿನಗಳಲ್ಲಿ ಇದು ಎರಡನೆಯ ಅಗ್ನಿ ಅವಘಡವಾಗಿದೆ.

ದಕ್ಷಿಣ ಮುಂಬೈನ ಸಿಂಡಿಯಾ ಹೌಸ್‌ನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಟ್ಟಡದಲ್ಲಿ ಕಳೆದ ಶುಕ್ರವಾರ ಭಾರಿ ಅಗ್ನಿ ಅನಾಹುತ ಸಂಭವಿಸಿತ್ತು.

ಈ ವೇಳೆ ಕಟ್ಟಡದ ಒಳಭಾಗದಲ್ಲಿ ಅನೇಕ ಜನರು ಸಿಲುಕಿದ್ದರು. ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸುವಲ್ಲಿ ಸಫಲರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+