ಮುಂಬೈನಲ್ಲಿ ಅಗ್ನಿ ಆಕಸ್ಮಿಕ, ಬಚಾವಾದ ಬಚ್ಚನ್, ಅಮೀರ್

Posted By:
Subscribe to Oneindia Kannada

ಮುಂಬೈ, ಫೆ.14: ಮೇಕ್ ಇನ್ ಇಂಡಿಯಾ ವೀಕ್ ಕಾರ್ಯಕ್ರಮದಲ್ಲಿ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಗಿರ್ ಗಮ್ ಚೌಪಟ್ಟಿಯಲ್ಲಿ ಭಾನುವಾರ ಸಂಜೆ ಮುಖ್ಯ ವೇದಿಕೆಯ ಹಿಂಬದಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕಾರ್ಯಕ್ರಮದಲ್ಲಿ ಮುಖ್ಯಮತ್ರಿ ದೇವೇಂದ್ರ ಫಡ್ನವೀಸ್, ನಟ ಅಮಿತಾಬ್ ಬಚ್ಚನ್, ಅಮೀರ್ ಖಾನ್, ವಿವೇಕ್ ಒಬೆರಾಯ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಬೆಂಕಿ ಕಾಣಿಸಿಕೊಂಡಾಗ ವೇದಿಕೆಯಲ್ಲಿ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದ ಆಯೋಜಕರ ಸಮಯಪ್ರಜ್ಞೆಯಿಂದ ವೇದಿಕೆ ಮೇಲಿದ್ದ ಕಲಾವಿದರು ಸೇರಿದಂತೆ ಹಲವಾರು ಜೀವಗಳು ಉಳಿದಿವೆ. ಬೆಂಕಿ ಕಾಣಿಸಿದ ಕೂಡಲೇ ಮ್ಯೂಸಿಕ್ ಸ್ವಿಚ್ ಆಫ್ ಮಾಡಿ ಕಲಾವಿದರನ್ನು ಕೆಳಗಿಳಿಸಲಾಗಿದೆ. ನಂತರ ಕೆಳಗೆ ಕುಳಿತ್ತಿದ್ದ ಗಣ್ಯರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

Massive fire breaks out at 'Make in India' event in Mumbai

ತಕ್ಷಣವೇ ನಾಲ್ಕಾರು ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ಮಗ್ನರಾಗಿದ್ದು, ಇತ್ತೀಚಿನ ವರದಿಯಂತೆ ಬೆಂಕಿ ಸಂಪೂರ್ಣವಾಗಿ ನಂದಿದೆ. ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಫಡ್ನವೀಸ್ ಅವರು ಟ್ವೀಟ್ ಮಾಡುವ ಮೂಲಕ ಅಪ್ಡೇಟ್ ಗಳನ್ನು ನೀಡುತ್ತಿದ್ದಾರೆ.

ಅಮಿತಾಬ್, ಅಮೀರ್ ಖಾನ್ ಅಲ್ಲದೆ ಸಂಸದೆ ಹೇಮಾಮಾಲಿನಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ 2,000 ಕ್ಕೂ ಅಧಿಕ ಸಾರ್ವಜನಿಕರ ಜೀವ ರಕ್ಷಣೆಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ದುರ್ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಅಗ್ನಿ ಅನಾಹುತದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಆದೇಶಿಸಿದ್ದಾರೆ.

ಅಗ್ನಿ ಆಕಸ್ಮಿಕದ ಸಂದರ್ಭದಲ್ಲಿ ಎಚ್ಚರಿಕೆ ನೀಡಿ ಎಲ್ಲರ ರಕ್ಷಣೆಗೆ ಕಾರಣರಾದ ಮಾಧ್ಯಮ ಪ್ರತಿನಿಧಿಗಳು, ಅಗ್ನಿ ಶಾಮಕ ದಳ ಸಿಬ್ಬಂದಿ, ಪೊಲೀಸರಿಗೆ ನಟ ವಿವೇಕ್ ಒಬೆರಾಯ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಒಂದು ವಾರಗಳ ಮೇಕ್ ಇನ್ ಇಂಡಿಯಾ ಸಪ್ತಾಹ್ ಕಾರ್ಯಕ್ರಮಕ್ಕೆ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A massive fire broke out at the Make In India' programme here on Sunday night. The fire broke out at the stage when a cultural programme was underway. Celebrities like Amitabh Bachchan and Aamir Khan, Maharashtra Chief Minister Devendra Fadnavis and other dignitaries were present at the event when the fire broke out.
Please Wait while comments are loading...