ಮರಾಠಿ ಕ್ರಾಂತಿ ಮೋರ್ಚಾ ಪ್ರತಿಭಟನೆಗೆ ಬಲೋಚಿಸ್ತಾನದಿಂದ ಬೆಂಬಲ

By: ಅನುಷಾ ರವಿ
Subscribe to Oneindia Kannada

ಮುಂಬೈ, ಆಗಸ್ಟ್ 09: ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಹಾಗೂ ಇನ್ನಿತರ ಬೇಡಿಕೆಗೆ ಆಗ್ರಹಿಸಿ ಮಹಾರಾಷ್ಟ್ರದ ಸಾವಿರಕ್ಕೂ ಹೆಚ್ಚು ಮರಾಠಿಗರು ಮೌನ ಪ್ರತಿಭಟನೆಗೆ ಅಚ್ಚರಿಯ ಬೆಂಬಲ ವ್ಯಕ್ತವಾಗಿದೆ.

ಮರಾಠಾ ಕ್ರಾಂತಿ ಮೋರ್ಚಾ ಪ್ರತಿಭಟನೆ ಬಿಸಿಗೆ ಮುಂಬೈ ಸ್ತಬ್ಧ

ಮರಾಠಾ ಕ್ರಾಂತಿ ಮೋರ್ಚಾ ಹಮ್ಮಿಕೊಂಡ ದೊಡ್ಡಮಟ್ಟದ ಪ್ರತಿಭಟನಾ ಮೆರವಣಿಗೆ ಬಲೂಚಿಸ್ತಾನದಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಬಲೂಚಿಸ್ತಾನದಲ್ಲಿ ನೆಲೆ ಕಂಡಿರುವ ಕೆಲ ಮರಾಠಿಗರು ತಮ್ಮ ಸಂಘಟನೆ ಮರಾಠಾ ಕ್ವಾಮಿ ಇತೆಹಾದ್ ಮೂಲಕ ಬೆಂಬಲ ಸೂಚಿಸಿದ್ದಾರೆ.

Maratha Kranti Morcha rally gets support from Balochistan

ಮರಾಠಿಗರಿಗರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಗಿತ್ತು. ಈ ಮೌನ ಪ್ರತಿಭಟನೆಯ ನೇತೃತ್ವವನ್ನು ಮರಾಠಾ ಕ್ರಾಂತಿ ಮೋರ್ಚಾದ ಮಾತೃಸಂಸ್ಥೆಯಾದ 'ಸಕಾಲ್ ಮರಾಠಾ ಸಮಾಜ್' ವಹಿಸಿತ್ತು. ಡಬ್ಬಾವಾಲಗಳು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಮುಂಬೈನ ಬಹುತೇಕ ಕಚೇರಿಗಳಲ್ಲಿ ಊಟದ ವ್ಯವಸ್ಥೆ ವ್ಯತ್ಯಯವಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಎಂಕೆಎಂ ಕಾರ್ಯಕರ್ತರು, ಬೃಹತ್ ಮುಂಬೈ ಕಾರ್ಪೊರೇಷನ್ ಬಳಿಯ ಜೀಜಾಮಾತಾ ಉದ್ಯಾನ್ ನಿಂತ ತಮ್ಮ ಮೌನ ಮೆರವಣಿಗೆಯನ್ನು ಆರಂಭಿಸಿದರು. ಆನಂತರ, ಮಧ್ಯಾಹ್ನದ ಹೊತ್ತಿಗೆ ಆಜಾದ್ ಮೈದಾನದವರೆಗೆ (ದಕ್ಷಿಣ ಮುಂಬೈ) ಸಾಗಿ ಪರಾಕಾಷ್ಠೆಗೆ ತಲುಪಿತು.


ಬಲೋಚಿಸ್ತಾನದ ಲಿಂಕ್: ಮರಾಠಾ ಸೈನಿಕರ ಗುಂಪೊಂದು ಮೂರನೇ ಪಾಟಿಪತ್ ಕದನದ ವೇಳೆ ಬಲೋಚಿಸ್ತಾನದ ಪ್ರಾಂತ್ಯದಲ್ಲಿ ನೆಲೆಸಿದ್ದವರು ಹೀಗಲೂ ಅವರ ಪೀಳಿಗೆ ಉಳಿಸಿಕೊಂಡಿದ್ದಾರೆ. ಮರಾಠಿಗಳ ಪರ ದನಿ ಎತ್ತಿ ತಮ್ಮ ಸಂದೇಶವನ್ನು ಮಹಾರಾಷ್ಟ್ರಕ್ಕೆ ತಲುಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Maratha Kranti Morcha's rally in Mumbai has surprisingly found support from an organisation in Balochistan. A group of Marathas who have settled in Balochistan have extended their support via their organisation Marhtta Qaumii Itehad.
Please Wait while comments are loading...