ಮನಮೋಹನ್ ಸಿಂಗ್ ಯಶಸ್ವೀ ಪ್ರಧಾನಿ ಎಂದ ಶಿವಸೇನೆ ಮುಖಂಡ

ಮುಂಬೈ, ಜನವರಿ 05: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಕಸ್ಮಿಕ ಪ್ರಧಾನಿಯಲ್ಲ, ಅವರೊಬ್ಬ ಯಶಸ್ವೀ ಪ್ರಧಾನಿ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಶುಕ್ರವಾರ ಮಾಧ್ಯಮಗಳ ಮುಂದೆ 'Accidential Prime Minister' ಚಿತ್ರದ ಕುರಿತು ಎದ್ದಿರುವ ವಿವಾದಗಳ ಬಗ್ಗೆ ಅವರು ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ, ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರ ಜೀವನಾಧಾರಿತ ಚಿತ್ರವಾದ 'Accidential Prime Minister' ಚಿತ್ರದಲ್ಲಿ ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತ ಕೆಲವು ಸನ್ನಿವೇಶಗಳಿವೆ ಎಂದು ಆರೋಪಿಸಿ ಈ ಚಿತ್ರವನ್ನು ನಿಷೇಧಿಸುವಂತೆ ಕೂಗು ಎದ್ದಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ರಾವತ್, "ದೇಶವನ್ನು ಒಬ್ಬ ಪ್ರಧಾನಿ ಹತ್ತು ವರ್ಷಗಳ ಕಾಲ ಆಳಿದ್ದಾರೆ ಮತ್ತು ಜನರು ಅವರಿಗೆ ಗೌರವ ನೀಡುತ್ತಾರೆ ಎಂದರೆ ಅವರನ್ನು ಆಕಸ್ಮಿಕ ಪ್ರಧಾನಿ ಎನ್ನುವುದಕ್ಕೆ ಹೇಗೆ ಸಾಧ್ಯ? ನರಸಿಂಹ ರಾವ್ ಅವರ ನಂತರ ಈ ದೇಶ ಕಂಡ ಅತ್ಯಂತ ಯಶಸ್ವೀ ಪ್ರಧಾನಿ ಮನಮೋಹನ್ ಸಿಂಗ್" ಎಂದು ರಾವತ್ ಹೇಳಿದ್ದಾರೆ.

Manmohan Singh not accidential, but successful PM says Shiv Sena leader

ಖ್ಯಾತ ನಟ ಅನುಪಮ್ ಖೇರ್ ನಟಿಸಿರುವ 'Accidential Prime Minister' ಚಿತ್ರ ಜನವರಿ 11 ರಂದು ತೆರೆ ಕಾಣಲಿದ್ದು, ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದೆ. ವಿಜಯ್ ರತ್ನಾಕರ್ ಗುಟ್ಟೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+