ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ಅಮೆರಿಕನ್ ಮಹಿಳೆ ಕಂಡು ಹಸ್ತಮೈಥುನ ಮಾಡ್ಕೊಂಡ!

By Mahesh
|
Google Oneindia Kannada News

ಮುಂಬೈ, ಆಗಸ್ಟ್ 18: ದಕ್ಷಿಣ ಮುಂಬೈನಲ್ಲಿ ಅಮೆರಿಕನ್ ಲೇಖಕಿ, ಸಾಮಾಜಿಕ ಕಾರ್ಯಕರ್ತ ಮರಿಯಾನಾ ಆಬ್‌ಡೋ ಅವರನ್ನು ಕಂಡ ವ್ಯಕ್ತಿಯೊಬ್ಬ ಲಜ್ಜೆಗೆಟ್ಟು ನಡುರಸ್ತೆಯಲ್ಲೇ ಹಸ್ತಮೈಥುನ ಮಾಡಿಕೊಂಡ ಪ್ರಸಂಗಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಅಪ್ಡೇಟ್ ಇಲ್ಲಿದೆ.

ನಾಚಿಕೆ ಇಲ್ಲದೆ ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯ ಚಿತ್ರವನ್ನು ತೆಗೆದ ಮರಿಯಾನಾ ಅದನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸೋಮವಾರ ಹಾಕಿದ್ದರು. ಜೊತೆಗೆ ಆತನ ಚಿತ್ರ ತೆಗೆದ ಮೇಲೆ ನಾನು ಆತನನ್ನು ಹಿಡಿಯಲು ಯತ್ನಿಸಿದೆ ಆದರೆ, ಕೈಗೆ ಸಿಗಲಿಲ್ಲ.

ಹತ್ತಿರದಲ್ಲಿದ್ದ ಇನ್ನಿಬ್ಬರು ವ್ಯಕ್ತಿಗಳು ನನ್ನ ನೆರವಿಗೆ ಬಂದರೂ ಆತ ಪರಾರಿಯಾಗಿಬಿಟ್ಟ.ಆತನ ಬಗ್ಗೆ ಜನರಿಗೆ ತಿಳಿಯಲಿ ಎಂದು ಟ್ವೀಟ್ ಮಾಡುತ್ತಿದ್ದೇನೆ ಎಂದು ಮರಿಯಾನಾ ಹೇಳಿಕೊಂಡಿದ್ದರು.

ಮರಿಯಾನಾ ಅವರ ಕ್ರಮಕ್ಕೆ ಟ್ವಿಟ್ಟರ್ ಇಂಡಿಯಾ ಕೂಡಾ ನೆರವಿಗೆ ಬಂದು, ಪ್ರಕರಣದ ಬಗ್ಗೆ ಟ್ವೀಟ್ ಅನ್ನು ಮುಖ್ಯಮಂತ್ರಿಗಳ ಕಚೇರಿಗೆ ಟ್ಯಾಗ್ ಮಾಡಿ ಕಳಿಸಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಚಿವಾಲಯ ಈ ಬಗ್ಗೆ ಕ್ರಮ ಜರುಗಿಸುವ ಭರವಸೆ ನೀಡಿದೆ. ಈ ನಡುವೆ ಮರಿಯಾನಾ ಅವರ ಟ್ವೀಟ್‌ಗೆ ಅನೇಕ ಪ್ರತಿಕ್ರಿಯೆಗಳು ಹರಿದು ಬರುತ್ತಲೇ ಇದೆ.

ಅತ್ಯಂತ ನಾಚಿಕೆಗೇಡಿನ ಮತ್ತು ಜುಗುಪ್ಸೆಯ ಪ್ರಕರಣವೊಂದರಲ್ಲಿ ಇಂದು ಮಂಗಳವಾರ ಬೆಳಗ್ಗೆ ದಕ್ಷಿಣ ಮುಂಬಯಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಕಾಣುತ್ತಲೇ ಆಕೆಯ ಮುಂದೆ ಹಸ್ತಮೈಥುನ ನಡೆಸಿ ಪರಾರಿಯಾಗಿದ್ದಾನೆ.

ಎಲ್ಲರಿಗೂ ಥ್ಯಾಂಕ್ಸ್ ಎಂದ ಮರಿಯಾನಾ

ಎಲ್ಲರಿಗೂ ಥ್ಯಾಂಕ್ಸ್ ಎಂದ ಮರಿಯಾನಾ

ಮುಂಬೈನ ಕೊಲಬಾದಲ್ಲಿ ನಡೆದ ಈ ಘಟನೆಯಿಂದ ವಿಚಲಿತರಾಗದ ಲೇಖಕಿ ಮರಿಯಾನಾ ಅವರು ಆತನ ಚಿತ್ರ ತೆಗೆದು ಟ್ವೀಟ್ ಮಾಡಿದ್ದು ತಕ್ಷಣವೇ ಎಲ್ಲೆಡೆ ವೈರಸ್ ರೀತಿಯಲ್ಲಿ ಹರಡಿತು. ಬೆಂಬಲ ನೀಡಿದ ಎಲ್ಲರಿಗೂ ಥ್ಯಾಂಕ್ಸ್ ಎಂದು ಮರಿಯಾನಾ ಹೇಳಿದ್ದಾರೆ.

ಈ ಹಿಂದೆ ಬ್ಲಾಗರ್ ಕ್ಷಮೆಯಾಚಿಸಿದ್ದ ಭಾರತ

ಈ ಹಿಂದೆ ಬ್ಲಾಗರ್ ಕ್ಷಮೆಯಾಚಿಸಿದ್ದ ಭಾರತ

ಈ ಹಿಂದೆ ಕೂಡಾ ಇಂಥ ಪ್ರಕರಣವೊಂದು ಮುಂಬೈನ ಬಸ್ ನಿಲ್ದಾಣದ ಬಳಿ ನಡೆದಿತ್ತು. ಬ್ರಿಟಿಷ್ ಮಹಿಳೆ ಲೂಸಿ ಮುಂಬೈ ಪ್ರವಾಸದ ವೇಳೆ ಪುರುಷನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಆಕೆ ಮುಂದೆ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಬಗ್ಗೆ ತಮ್ಮ ಬ್ಲಾಗಿನಲ್ಲಿ ಬರೆದಿದ್ದರು. ಬ್ರಿಟಿಷ್ ಮಹಿಳೆಗೆ ಉಂಟಾದ ಮುಜುಗರಕ್ಕೆ ಭಾರತದೆಲ್ಲೆಡೆಯಿಂದ ಕ್ಷಮೆಯಾಚನೆ, ಬೆಂಬಲ ಹರಿದು ಬಂದಿದೆ. [ಪೂರ್ಣ ವಿವರ ಇಲ್ಲಿ ಓದಿ]

ಟ್ವಿಟರ್‌ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ

ಮರಿಯಾನಾ ಅವರ ಟ್ವಿಟರ್‌ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿದೇವೇಂದ್ರ ಫಡ್ನವೀಸ್ ಕಾರ್ಯಾಲಯವು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ.

ಎಲ್ಲರಿಗೂ ತುಂಬಾ ಥ್ಯಾಂಕ್ಸ್ ಎಂದ ಮರಿಯಾನಾ

ಎಲ್ಲರಿಗೂ ತುಂಬಾ ಥ್ಯಾಂಕ್ಸ್ ಸಮಾನ ಹಕ್ಕುಗಳ ಹೋರಾಟಕ್ಕೆ ಬೆಲೆ ಇದೆ ಎಂದ ಮರಿಯಾನಾ

ಪ್ರಕರಣ ಈಗ ಪೊಲೀಸ ಕೈಲಿದೆ

ಪ್ರಕರಣ ಈಗ ಪೊಲೀಸ ಕೈಲಿದೆ, ತನಿಖೆ ನಡೆಸಿ ಕ್ರಮ ಜರುಗಿಸುತ್ತಾರೆ ಎಂದು ಮರಿಯನಾ ಟ್ವೀಟ್

ಎಲ್ಲೆಡೆಯಿಂದ ಬಂದ ಬೆಂಬಲಕ್ಕೆ ನಾನು ಋಣಿ

ಎಲ್ಲೆಡೆಯಿಂದ ಬಂದ ಬೆಂಬಲಕ್ಕೆ ನಾನು ಋಣಿ. ಸೋಮವಾರ ನಾನು ಹಾಕಿದ್ದ ಚಿತ್ರ ಎಚ್ಚರಿಕೆಯಾಗಲಿ. badalja.com ವೆಬ್ ತಾಣಕ್ಕೆ ಭೇಟಿ ಕೊಡಿ ಎಂದ ಮರಿಯಾನಾ ಸಾಮಾಜಿಕ ಕಳಕಳಿವುಳ್ಳ ನಾಗರಿಕರಿಗೆ ಕರೆ ನೀಡಿದ್ದಾರೆ.

English summary
Maryanna Abdo, an American woman, became the latest victim of weird lust of a man. The woman allegedly was molested by the man in broad daylight in Mumbai on Monday, Aug 17. Maharashtra CM quick to respond to the Tweets and replied to her. Maryanna has said Thanks for the support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X