ಬ್ರಿಟಿಷ್ ಮಹಿಳೆ ಬಳಿ ಕ್ಷಮೆ ಯಾಚಿಸಿದ ಭಾರತ
ಮುಂಬೈ, ಮೇ.22: ಭಾರತ ಪ್ರವಾಸದ ವೇಳೆ ಬ್ರಿಟಿಷ್ ಮಹಿಳೆಗೆ ಉಂಟಾದ ಮುಜುಗರಕ್ಕೆ ಭಾರತದೆಲ್ಲೆಡೆಯಿಂದ ಕ್ಷಮೆಯಾಚನೆ, ಬೆಂಬಲ ಹರಿದು ಬಂದಿದೆ. ಬ್ರಿಟಿಷ್ ಮಹಿಳೆ ಲೂಸಿ ಮುಂಬೈ ಪ್ರವಾಸದ ವೇಳೆ ಪುರುಷನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಆಕೆ ಮುಂದೆ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು.
ಮುಂಬೈ ಬಸ್ ನಿಲ್ದಾಣದ ಬಳಿ ಅನೇಕ ಪುರುಷರು ತನ್ನತ್ತ ದುರುಗುಟ್ಟಿ ನೋಡುತ್ತಿದ್ದರು. ಕೆಲವರು ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಂಡರು ಎಂದು 27ರ ಹರೆಯದ ಬ್ರಿಟಿಷ್ ಯುವತಿ ಲೂಸಿ ಹೆಮ್ಮಿಂಗ್ಸ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯಿತು.
ಬೌರ್ನೆ ಮೌತ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಲೂಸಿ, ತಾನು ಮೂರು ತಿಂಗಳ ಭಾರತ ಪ್ರವಾಸದಲ್ಲಿದ್ದಾಗ, ಮುಂಬೈಯ ಬಸ್ ನಿಲ್ದಾಣವೊಂದರಲ್ಲಿ ಕಂಡ ಇತ್ತೀಚಿನ ಘಟನೆ ಬಗ್ಗೆ ವಿವರವಾಗಿ ಬರೆದಿದ್ದಾರೆ. ಒಂದು ದೇಶವಾಗಿ ಭಾರತದ ಖ್ಯಾತಿಗೆ ಕಳಂಕ ತರುವ ಹಾಗೂ ಅದು ಹೇಗೆ ತನ್ನ ಮಹಿಳೆಯರನ್ನು ನಡೆಸಿಕೊಳ್ಳುತ್ತದೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಭಾರತದ ಬಗ್ಗೆ ನನಗೆ ಅಪಾರ ಗೌರವವಿದೆ. ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಲೂಸಿ ಹೇಳಿಕೊಂಡಿದ್ದಾರೆ. ಲೂಸಿ ಬ್ಲಾಗ್ ನಲ್ಲಿ ಕಾಮೆಂಟ್ ಮಾಡಿರುವ ಹಲವಾರು ಮಂದಿ
"On behalf of my fellow countrymen I would like to apologise for what happened," ಎಂಬ ಭಾವದಿಂದಲೇ ಉತ್ತರಿಸಿದ್ದಾರೆ.

ಘಟನೆಗಳು: ಮುಂಬೈಯ ಬಸ್ ನಿಲ್ದಾಣ ವೊಂದರಲ್ಲಿ ಕುಳಿತಿದ್ದಾಗ ಒಬ್ಬ ವ್ಯಕ್ತಿ ತನ್ನ ಹತ್ತಿರ ಬರುತ್ತಿದ್ದನ್ನು ಗಮನಿಸಿದೆ. ನಾನು ಆತನನ್ನು ಗಮನಿಸುತ್ತಿದ್ದಂತೆ,ಆತ ತನ್ನ ಶಿಶ್ನವನ್ನು ಹೊರಗೆಳೆದ, ನನ್ನತ್ತ ನೋಡುತ್ತಾ ಹಸ್ತ ಮೈಥುನ ಮಾಡಿಕೊಳ್ಳುತೊಡಗಿದ. ಈ ಘಟನೆ ನನಗೆ ಆಘಾತ, ಅಸಹ್ಯ ತಂದಿತು ಎಂದಿದ್ದಾರೆ.
2012ರಲ್ಲಿ ಮೊದಲ ಬಾರಿಗೆ ನಾನು ಅಭಿವೃದ್ಧಿಶೀಲ ದೇಶ ಭಾರತ ಪ್ರವಾಸ ಕೈಗೊಂಡೆ. ಮೂರು ತಿಂಗಳುಗಳ ಕಾಲ ಪ್ರವಾಸದಲ್ಲಿ ನನಗೆ ಆಸ್ಟ್ರೇಲಿಯಾ ಮೂಲದ ಗೆಳತಿ ಜೊತೆಗಿದ್ದಳು.
ಒಮ್ಮೆ ಮಹರ್ಷಿ ಮಹೇಶ್ ಯೋಗಿಯವರ ಆಶ್ರಮ ಅಥವಾ ಹೃಷಿಕೇಶದ ಬೀಟಲ್ಸ್ ಆಶ್ರಮದಲ್ಲಿ ತಿರುಗಾಡುತ್ತಿದ್ದಾಗ, ಒಬ್ಬ ವ್ಯಕ್ತಿ ಪೊದರಿನೆಡೆಯಲ್ಲಿ ಅಡಗಿ ತಮ್ಮನ್ನು ನೋಡುತ್ತ ಮುಷ್ಟಿ ಮೈಥುನ ಮಾಡಿಕೊಳ್ಳುತ್ತಿರುವುದನ್ನು ತಾನು ಗಮನಿಸಿದೆವು.
ಮೊದಲಿಗೆ ಇಬ್ಬರಿಗೂ ಭಯವಾಯಿತು. ಆತನೆಡೆಗೆ ಕಲ್ಲು ಎಸೆದೆವು, ನೋಡಿ ನಕ್ಕೆವು. ಅದರೆ, ಆತ ಸುಮ್ಮನೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಕೊನೆಗೆ ಆತ ಮಾನಸಿಕ ಅಸ್ವಸ್ಥನಿರಬಹುದು ಎಂದೆನಿಸಿ ಅಲ್ಲಿಂದ ಮುಂದೆ ಸಾಗಿದೆವು ಎಂದು ಬರೆದುಕೊಂಡಿದ್ದಾರೆ.(ಪಿಟಿಐ)












Click it and Unblock the Notifications