• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈನಲ್ಲಿ ಚಲಿಸುವ ರೈಲಿನಿಂದ ಪತ್ನಿಯನ್ನು ತಳ್ಳಿ ಕೊಂದ ಪತಿರಾಯ!

|

ಮುಂಬೈ, ಜನವರಿ.14: ರೈಲಿನ ಬಾಗಿಲಿನಲ್ಲಿ ನಿಂತುಕೊಳ್ಳುವುದು ಅಪಾಯ ಎಂದು ಎಷ್ಟು ಬಾರಿ ಎಚ್ಚರಿಕೆ ನೀಡಿದರೂ ಜನರು ತಿಳಿದುಕೊಳ್ಳುತ್ತಿಲ್ಲ. ಅದೇ ರೀತಿ ರೈಲಿನ ಬಾಗಿಲಿನಲ್ಲಿ ನಿಂತ ಪತ್ನಿಯನ್ನು ಪತಿಯೇ ತಳ್ಳಿ ಕೊಂದಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಕಳೆದ ಸೋಮವಾರ ನಡೆದಿರುವ ಘಟನೆ ಬಗ್ಗೆ ಪೊಲೀಸರು ಗುರುವಾರ ಸ್ಪಷ್ಟಪಡಿಸಿದ್ದಾರೆ. ಛೇಂಬರ್ ಮತ್ತು ಗೋವಾಂದಿ ರೈಲ್ವೆ ನಿಲ್ದಾಣಗಳ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿಯನ್ನು ಬಂಧಿಸಲಾಗಿದೆ.

ಮದುವೆಯಾಗಿ 18 ದಿನಕ್ಕೆ ಪತಿಗೆ ಕೈಕೊಟ್ಟ ಪತ್ನಿ; ಪ್ರೇಮಿ ಜೊತೆ ಜೂಟ್!

31 ವರ್ಷದ ಆರೋಪಿ ಮತ್ತು ಮೃತ ಮಹಿಳೆಯಿಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದಕ್ಕೂ ಮೊದಲೇ ಮದುವೆಯಾಗಿದ್ದ ಮಹಿಳೆಗೆ 7 ವರ್ಷ ಮಗುವನ್ನು ಹೊಂದಿದ್ದಳು. ಕಳೆದ ಸೋಮವಾರ ಮಹಿಳೆಯು ತನ್ನ ಮಗು ಹಾಗೂ ಆರೋಪಿತ ಪತಿಯ ಜೊತೆ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿರುವ ಬಗ್ಗೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ರೈಲಿನ ಬಾಗಿಲಿನಲ್ಲಿ ನೇತಾಡುತ್ತಿದ್ದ ದಂಪತಿ:

ಸ್ಥಳೀಯ ರೈಲಿನ ಬಾಗಿಲಿನಲ್ಲಿ ನಿಂತಿದ್ದ ದಂಪತಿಯು ಬಾಗಿಲಿನ ಪಕ್ಕದಲ್ಲಿರುವ ಕಂಬಿ ಹಿಡಿದು ನೇತಾಡುತ್ತಿದ್ದರು. ಈ ವೇಳೆ ಪತಿಯು ಪತ್ನಿಯನ್ನು ರೈಲಿನಿಂದ ತಳ್ಳಿದ್ದಾನೆ. ಈ ದೃಶ್ಯವನ್ನು ನೋಡಿದ ಮಹಿಳಾ ಪ್ರಯಾಣಿಕರು ಗೊವಾಂಡಿ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿತ ಪತಿಯನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದು, ಈ ವೇಳೆ ಮಹಿಳೆಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅಷ್ಟರಲ್ಲೇ ಮಹಿಳೆಯು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಪಿ ಪತಿಯನ್ನು ಬಂದಿಸಿದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

English summary
Mumbai: Man Has Killed Wife By Pushing Her From Moving Train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X