ರೇಪ್ ಆರೋಪ: ಬಾಲಿವುಡ್ ನಟ ನಾನಾ ಪಾಟೇಕರ್ ಗೆ ಹತ್ತು ದಿನದ ಗಡುವು

ಈ ಬಣ್ಣದ ಲೋಕದವರು ದಶಕಗಳ ಹಿಂದಿನ ತಮ್ಮ ಜೀವನದಲ್ಲಿ ನಡೆದ ಕಹಿ ಅನುಭವವನ್ನು ಈಗ್ಯಾಕೆ ತೆರೆಮೇಲೆ ತರುತ್ತಿದ್ದಾರೋ? ಅಥವಾ ಅಂದು ನಡೆದ ಘಟನೆಯನ್ನು ಹೇಳಲಾಗದ ಪರಿಸ್ಥಿತಿಯಲ್ಲಿ ಅವರಿರುತ್ತಾರೋ?

ಹತ್ತು ವರ್ಷದ ಹಿಂದೆ ನೀವು ಕೇಳಿದ್ದರೂ ಇದನ್ನೇ ಹೇಳುತ್ತಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ ಎಂದು ಬಾಲಿವುಡ್ ಸೂಪರ್ ಹಿಟ್ 'ಕ್ರಾಂತಿವೀರ್' ಸಿನಿಮಾದ ಕ್ಲೈಮ್ಯಾಕ್ಸಿನಲ್ಲಿ ಡೈಲಾಗ್ ಹೊಡೆದಂತೆ, ತನ್ನ ಮೇಲೆ ಬಂದಿರುವ ಅತ್ಯಾಚಾರ ಆರೋಪದ ಬಗ್ಗೆ ನಟ ನಾನಾ ಪಾಟೇಕರ್ ಖಡಕ್ಕಾಗಿ ಉತ್ತರಿಸಿದ್ದಾರೆ.

ಸಾರ್ವಜನಿಕ ಕಾಳಜಿ ಮತ್ತು ಹಿತಾಶಕ್ತಿಯ ವಿಚಾರದಲ್ಲಿ ಮಂಚೂಣಿಯಲ್ಲಿ ಬರುವ ಬಾಲಿವುಡ್ ನಟರ ಪೈಕಿ ನಾನಾ ಪಾಟೇಕರ್ ಕೂಡಾ ಒಬ್ಬರು. ಹಿಂದಿ ನಟಿ ತನುಶ್ರೀ ದತ್ತಾ, ಏನು ನಾನಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೋ, ಆ ವಿಚಾರದಲ್ಲಿ ಮಹಿಳಾ ಆಯೋಗ ಈಗ ಅಧಿಕೃತ ಎಂಟ್ರಿ ಕೊಟ್ಟಿದೆ.

ತನುಶ್ರೀ ಕೊಟ್ಟ ದೂರಿನ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಮಹಿಳಾ ಆಯೋಗ, ನಾನಾ ಪಾಟೇಕರ್ ಗೆ ನೊಟೀಸ್ ಜಾರಿ ಮಾಡಿದ್ದು, ಹತ್ತು ದಿನದೊಳಗೆ ಇದ್ದಕ್ಕೆ ಉತ್ತರಿಸುವಂತೆ ಗಡುವು ನೀಡಿದೆ.

ಮುಂಬೈನಲ್ಲಿರುವ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ, ಅಂದು ನಡೆದ ಘಟನೆಯನ್ನು ಸವಿಸ್ತಾರವಾಗಿ ವಿವರಿಸುವಂತೆ, ತನುಶ್ರೀ ದತ್ತಾಗೆ ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ

ಲೈಂಗಿಕ ಕಿರುಕುಳ

ತನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಮುಂಬೈ ಪೊಲೀಸರಿಗೆ ದೂರು ನೀಡಿದ ನಂತರ ತನುಶ್ರೀ ದತ್ತಾ, ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು. ನಾನಾ ಪಾಟೇಕರ್, ಹಾರ್ನ್ ಓಕೆ ಪ್ಲೀಸ್ ಚಿತ್ರದ ನಿರ್ದೇಶಕ ರಾಕೇಶ್ ಸಾರಂಗ್, ನಿರ್ಮಾಪಕ ಸಿಮಿ ಸಿದ್ದಿಕಿ ಮತ್ತು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರಿಗೆ ಮಹಿಳಾ ಆಯೋಗ ನೊಟೀಸ್ ಜಾರಿ ಮಾಡಿದ್ದು, ಹತ್ತು ದಿನದೊಳಗೆ ಉತ್ತರಿಸುವಂತೆ ಸೂಚಿಸಿದೆ. ಹತ್ತು ದಿನದೊಳಗೆ ಉತ್ತರ ಬರದಿದ್ದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಆಯೋಗ ಎಚ್ಚರಿಕೆ ನೀಡಿದೆ.

ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!

ಪ್ರೊಡಕ್ಷನ್ ಹೌಸ್ ಮತ್ತು ಟಿವಿ ಕಲಾವಿದರ ಸಂಘಕ್ಕೂ ನೊಟೀಸ್

ಪ್ರೊಡಕ್ಷನ್ ಹೌಸ್ ಮತ್ತು ಟಿವಿ ಕಲಾವಿದರ ಸಂಘಕ್ಕೂ ನೊಟೀಸ್

ಇದರ ಜೊತೆಗೆ, ಪ್ರೊಡಕ್ಷನ್ ಹೌಸ್ ಮತ್ತು ಟಿವಿ ಕಲಾವಿದರ ಸಂಘಕ್ಕೂ ಮಹಿಳಾ ಆಯೋಗ ನೊಟೀಸ್ ಜಾರಿ ಮಾಡಿದ್ದು, ಮಹಿಳೆಯ ಸುರಕ್ಷಿತೆಯ ನಿಟ್ಟಿನಲ್ಲಿ ಏನೇನು ಕ್ರಮ ತೆಗೆದುಕೊಂಡಿದ್ದೀರಿ ಎಂದು ವಿವರಿಸುವಂತೆ ಸೂಚಿಸಿದೆ. ತನುಶ್ರೀ ಘಟನೆಯ ಸಂಬಂಧ, ಸಂತ್ರಸ್ತೆಯನ್ನು ಖುದ್ದಾಗಿ ಭೇಟಿಯಾಗಿ ಹೇಳಿಕೆ ಪಡೆಯುವುದಾಗಿ ಆಯೋಗ ತಿಳಿಸಿದೆ.

ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?

ತನುಶ್ರೀ ದತ್ತಾ ತಮ್ಮ ವಿರುದ್ಧ ತಪ್ಪು ಆರೋಪ ಮಾಡುತ್ತಿದ್ದಾರೆ

ತನುಶ್ರೀ ದತ್ತಾ ತಮ್ಮ ವಿರುದ್ಧ ತಪ್ಪು ಆರೋಪ ಮಾಡುತ್ತಿದ್ದಾರೆ

ಸುದ್ದಿಗೋಷ್ಠಿ ಇದ್ದಕ್ಕಿದ್ದಂತೆ ಮೊಟಕುಗೊಳಿಸಿ, 10 ವರ್ಷಗಳ ಹಿಂದೆ ನಡೆದಿರುವ ಘಟನೆ ಬಗ್ಗೆ ತನುಶ್ರೀ ದತ್ತಾ ತಮ್ಮ ವಿರುದ್ಧ ತಪ್ಪು ಆರೋಪ ಮಾಡುತ್ತಿದ್ದಾರೆ. ನನ್ನ ವಕೀಲರು ತನುಶ್ರೀ ದತ್ತಾ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡದಂತೆ ವಕೀಲರು ನನಗೆ ಸೂಚಿಸಿದ್ದಾರೆ. 10 ವರ್ಷಗಳಿಂದಲೂ ಹೇಳುತ್ತಲೇ ಬಂದಿದ್ದೇನೆ. ಈಗಲೂ ಕೂಡಾ ತಮ್ಮ ನಿಲುವು ಸತ್ಯದಿಂದ ಕೂಡಿದೆ ಎಂದು ನಾನಾ ಪಾಟೇಕರ್ ಹೇಳಿದ್ದಾರೆ.

ಹಾರ್ನ್ ಓಕೆ ಪ್ಲೀಸ್' ಚಿತ್ರದ ಸ್ಪೆಷಲ್ ಹಾಡು

ಹಾರ್ನ್ ಓಕೆ ಪ್ಲೀಸ್' ಚಿತ್ರದ ಸ್ಪೆಷಲ್ ಹಾಡು

2008ರಲ್ಲಿ ''ಹಾರ್ನ್ ಓಕೆ ಪ್ಲೀಸ್' ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡುವಾಗ ನನ್ನೊಂದಿಗೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರು. ಮಹಿಳೆಯರ ಜೊತೆಗೆ ನಾನಾ ಪಾಟೇಕರ್ ಹೇಗೆ ವರ್ತಿಸುತ್ತಾರೆ ಅಂತ ಇಂಡಸ್ಟ್ರಿಯಲ್ಲಿ ಇರುವವರಿಗೆ ಗೊತ್ತಿದೆ. ಆದರೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ'' ಎಂದು ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ಬೇಸರ ವ್ಯಕ್ತಪಡಿಸಿದ್ದರು.

ನೊಟೀಸ್ ಜಾರಿ ಮಾಡಿದ್ದು ಖುಷಿ ತಂದಿದೆ

ನೊಟೀಸ್ ಜಾರಿ ಮಾಡಿದ್ದು ಖುಷಿ ತಂದಿದೆ

ಹತ್ತು ವರ್ಷದ ಹಿಂದೆ ತನುಶ್ರೀ ದತ್ತಾ ದೂರು ನೀಡಲು ಹೋಗಿದ್ದರೂ, ದೂರು ಸ್ವೀಕರಿಸಲು ಯಾರೂ ಮುಂದಾಗಿರಲಿಲ್ಲ. ದಶಕಗಳ ನಂತರ ನಮ್ಮ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ತನುಶ್ರೀ ದತ್ತಾ ಕಾನೂನು ಹೋರಾಟದ ಮೂಲಕ, ನ್ಯಾಯ ಸಿಗುವ ತನಕ ಹೋರಾಡಲಿದ್ದಾರೆ. ಮಹಿಳಾ ಆಯೋಗವೂ ನಾನಾ ಸೇರಿ ನಾಲ್ಕು ಜನರಿಗೆ ನೊಟೀಸ್ ಜಾರಿ ಮಾಡಿದ್ದು ಖುಷಿ ತಂದಿದೆ ಎಂದು ತನುಶ್ರೀ ಪರ ವಕೀಲರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+