ಮಹಾಘಟಬಂಧನಕ್ಕೆ ಶಾಕ್! ಶಿವಸೇನೆ ತೆಕ್ಕೆಗೆ ಎನ್ ಸಿಪಿ ಮುಖಂಡ
Recommended Video
ಮುಂಬೈ, ಮೇ 22: ಅತ್ತ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಎನ್ ಡಿಎಯೇತರ ಪಕ್ಷಗಳನ್ನೆಲ್ಲ ಒಗ್ಗೂಡಿಸಲು ಹರಸಾಹಸ ಪಡುತ್ತಿದ್ದರೆ, ಇತ್ತ ಎನ್ ಸಿಪಿ ನಾಯಕರೊಬ್ಬರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ಶಾಕ್ ನೀಡಿದ್ದಾರೆ.
ಎನ್ ಸಿಪಿ ನಾಯಕ ಜಯದತ್ ಕ್ಷೀರಸಾಗರ್ ಅವರು ಎನ್ ಸಿಪಿ ತೊರೆದು ಬುಧವಾರ ಸಂಜೆ ಶಿವಸೇನೆಯನ್ನು ಸೇರಲಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳು ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೊಮ್ಮೆ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದು, ಈ ಕಾರಣದಿಂದಲೇ ಜಯದತ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಪಕ್ಷದಲ್ಲಿ ತನ್ನನ್ನು ಕಡೆಗಣಿಸಲಾಗಿದೆ ಎಂದು ದೂರಿರುವ ಜಯದತ್, ಇತ್ತೀಚೆಗೆ ಒಮ್ಮೆ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಅವರು ಶಿವಸೇನೆ ಸೇರಬಹುದು ಎಂಬ ವದಂತಿ ಅಂದಿನಿಂದಲೂ ಹಬ್ಬಿತ್ತು.
ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಎನ್ ಡಿಎಯೇತರ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಜಗನ್ಮೋಹನ್ ರೆಡ್ಡಿ ಅವರನ್ನೂ ಭೇಟಿ ಮಾಡು ಮಾತುಕತೆ ನಡೆಸಲಿದ್ದಾರೆ.












Click it and Unblock the Notifications