ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಚುನಾವಣೆ ಬಿಜೆಪಿ ಎರಡನೇ ಪಟ್ಟಿಯಲ್ಲಿ ಅಚ್ಚರಿ, ತಾವ್ಡೆ ಔಟ್!

|
Google Oneindia Kannada News

ಮುಂಬೈ, ಅಕ್ಟೋಬರ್ 03: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರದಂದು ಬಿಡುಗಡೆ ಮಾಡಿದೆ. ಹಿರಿಯ ಮುಖಂಡರಾದ ಏಕನಾಥ್ ಖಾಡ್ಸೆ, ವಿನೋದ್ ತಾವ್ಡೆ, ಪ್ರಕಾಶ್ ಮೆಹ್ತಾ ಹೆಸರು ಮಾಯವಾಗಿದ್ದು, ಅಚ್ಚರಿ ಮೂಡಿಸಿದೆ.

ಎರಡನೇ ಪಟ್ಟಿಯ ಅಭ್ಯರ್ಥಿಗಳು ಸಕ್ರಿ, ಧಮ್ಮಂಗಾಂವ್, ಮೆಲ್ ಘಾಟ್, ಗೊಂಡಿಯಾ, ಅಹೇರಿ, ಪುಸದ್, ಉಮರ್ ಖೇಡ್, ಬಾಗ್ಲಾನ್, ಉಲ್ಹಾಸ್ ನಗರ್, ಬಾರಾಮತಿ, ಮಾವಲ್, ಕೈಜ್, ಲಾತೂರ್ ಸಿಟಿ ಹಾಗೂ ಉದ್ಗಿರ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ.

ಮಹಾ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಶೋಕ್ ಚವಾಣ್ ಸೇರಿ 51 ಅಭ್ಯರ್ಥಿಗಳುಮಹಾ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಅಶೋಕ್ ಚವಾಣ್ ಸೇರಿ 51 ಅಭ್ಯರ್ಥಿಗಳು

ಮೊದಲ ಹಂತದ ಪಟ್ಟಿಯಲ್ಲಿ 10 ಹಾಲಿ ಶಾಸಕರ ಹೆಸರನ್ನು ಕೈಬಿಡಲಾಗಿತ್ತು. 91 ಶಾಸಕರಿಗೆ ಟಿಕೆಟ್ ನೀಡಲಾಗಿತ್ತು. ಒಟ್ಟಾರೆ, 139 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಹೆಸರಿಸಿದೆ.

Maharashtra Assembly Polls 2019: BJP releases second list; Eknath Khadse, two ministers missing

ಮೊದಲ ಹಂತದ ಪಟ್ಟಿಯಂತೆ ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಾಗ್ಪುರ ನೈಋತ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಕೊತ್ರುಡ್ ನಿಂದ ಸ್ಪರ್ಧಿಸಲಿದ್ದರೆ, ಪಂಕಜ ಮುಂಡೆ ಪಾರ್ಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 150,ಶಿವಸೇನೆ 124 ಮತ್ತು ಇತರ ಸಣ್ಣ ಪುಟ್ಟ ಮೈತ್ರಿಪಕ್ಷಗಳು 14 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಅಕ್ಟೋಬರ್ 21 ರಂದು ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಹೊರಬೀಳಲಿದೆ. 2014ರಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು, 260 ಕ್ಷೇತ್ರಗಳ ಪೈಕಿ ಬಿಜೆಪಿ 122ರಲ್ಲಿ ಗೆಲುವು ಸಾಧಿಸಿತ್ತು. ಸೇನಾ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 63ರಲ್ಲಿ ಜಯ ದಾಖಲಿಸಿತ್ತು.

English summary
Bharatiya Janata Party (BJP) on Wednesday has released the second list of candidates for the upcoming Maharashtra Assembly Polls 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X