• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರ ಮಳೆ: ಹಾನಿಗೊಂಡಿರುವ ಪ್ರದೇಶಗಳಿಗೆ 10 ಸಾವಿರ ಕೋಟಿ ಪರಿಹಾರ

|

ಮುಂಬೈ, ಅಕ್ಟೋಬರ್ 23: ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ತೊಂದರೆ ಅನುಭವಿಸಿರುವ ಪ್ರದೇಶಗಳ ಅಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರ 10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದೆ.

ಸೋಲಾಪುರ್, ಸಾಂಗ್ಲಿ, ಕೊಲ್ಹಾಪುರ್, ಸತಾರಾ, ಉಸ್ಮಾನಾಬಾದ್, ಬೀಡ್, ಔರಂಗಾಬಾದ್ ಹಾಗೂ ಲಾತುರ್‌ನಲ್ಲಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು, ಆದರೆ ರೈತರ ಕನಸು ನುಚ್ಚುನೂರಾಗಿದೆ.

ಮುಂಬೈನಲ್ಲಿ 26 ವರ್ಷಗಳ ದಾಖಲೆ ಮುರಿದ ಮಳೆ

ಅತಿಯಾದ ಮಳೆಯಿಂದಾಗಿ ಹತ್ತಿ, ಕಬ್ಬು, ದಾಳಿಂಬೆ, ಸೋಯಾಬೀನ್ ಬೆಳೆಗಳು ನೆಲಕಚ್ಚಿವೆ.

ಹಾನಿಯಾಗಿರುವ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಕಳೆದ ವಾರ ಮಳೆಯಿಂದಾಗಿಕನಿಷ್ಠ 29 ಮಂದಿ ಮೃತಪಟ್ಟಟಿದ್ದರು. ಜೂನ್‌ನಲ್ಲಿ ನಿಸರ್ಗ ಚಂಡಮಾರುತದಿಂದ ಕೊಂಕಣ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು ಹಾಗೂ ವಿದರ್ಭ ಆಗಸ್ಟ್ ನಲ್ಲಿ ಸುರಿದ ಮಳೆಗೆ 1.80 ಲಕ್ಷ ಹೆಕ್ಟೇರ್ ಪ್ರದೇಶ ನೀರಿನಲ್ಲಿ ಕೊಚ್ಚಿ ಹೋಗಿತ್ತು.

ಈ ಭಾರಿ ಮಳೆಯಿಂದಾದ ನಷ್ಟ, ಜೀವಹಾನಿ ಹಾಗೂ ಮನೆ, ಕಟ್ಟಡಗಳು, ರಸ್ತೆಗಳಿಗೆ ಹಾನಿಯ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರಿಶೀಲನೆ ನಡೆಸಿದ್ದರು.

ಇದೀಗ 10 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ಮತ್ತು ಮಧ್ಯಭಾಗದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ.

English summary
The Uddhav Thackeray-led government in Maharashtra government on Friday announced a relief package of Rs 10,000 crore for the rain-affected parts of the state, saying the amount will be disbursed before Diwali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X